ಮೈಸೂರು : ಈ ಬಾರಿಯ ಹೈ ವೋಲ್ಟೇಜ್ ಕ್ಷೇತ್ರ ಎನಿಸಿರುವ ವರುಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದೆ. ಬಿಜೆಪಿ ಅಭ್ಯರ್ಥಿ ವಿಸೋಮಣ್ಣ ಇಂದಿನಿಂದ ಐದು ದಿನಗಳ ಕಾಲ ವರುಣದಲ್ಲಿ ಕ್ಯಾಂಪೇನ್ ನಡೆಸಲಿದ್ದಾರೆ. ಆದರೆ ಪ್ರಚಾರದ ಮೊದಲನೇ ದಿನವಾದ ಇಂದು ವಿ.ಸೋಮಣ್ಣಗೆ ಸ್ಥಳೀಯರು ಮತ್ತಿಗೆ ಹಾಕಿದ್ದಾರೆ.
ಮೈಸೂರು ತಾಲೂಕಿನ ಭುಗತಹಳ್ಳಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಅಂಬೇಡ್ಕರ್ ಫೋಟೋಗೆ ಪುಷ್ಪಾರ್ಚನೆ ಮಾಡಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ.
ಇದೇ ವೇಳೆ ಅಲ್ಲೇ ಇದ್ದ ಇನ್ನೊಂದಿಷ್ಟು ಯುವಕರ ಗುಂಪು ಬಿಜೆಪಿ ಪರ ಘೋಷಣೆ ಕೂಗಿದೆ. ಈ ನಡುವೆ ಸಿದ್ದರಾಮಯ್ಯ ಬೆಂಬಲಿಗರು ಸೋಮಣ್ಣಗೆ ಮುತ್ತಿಗೆ ಹಾಕಿದ್ದು ಪೊಲೀಸರು ಮಧ್ಯ ಪ್ರವೇಶಿಸಿ ಗುಂಪು ಚದುರಿಸಿದ್ದಾರೆ.