• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ರಾಹುಲ್ ಗಾಂಧಿಗೆ ಹೆಲಿಕಾಪ್ಟರ್ ಮಾಡಿಸ್ತೀನಿ ಶಿವಮೊಗ್ಗ ಬಂದು ಪ್ರಚಾರ ಮಾಡಲಿ: ಈಶ್ವರಪ್ಪ ವ್ಯಂಗ್ಯ

ಪ್ರತಿಧ್ವನಿ by ಪ್ರತಿಧ್ವನಿ
April 23, 2023
in ರಾಜಕೀಯ
0
ರಾಹುಲ್ ಗಾಂಧಿಗೆ ಹೆಲಿಕಾಪ್ಟರ್ ಮಾಡಿಸ್ತೀನಿ ಶಿವಮೊಗ್ಗ ಬಂದು ಪ್ರಚಾರ ಮಾಡಲಿ: ಈಶ್ವರಪ್ಪ ವ್ಯಂಗ್ಯ
Share on WhatsAppShare on FacebookShare on Telegram

ಶಿವಮೊಗ್ಗ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಚಾರ ಮಾಡುವಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಿಸುತ್ತಾರೆ. ಲಿಂಗಾಯತರನ್ನ ಒಡೆಯಲೆತ್ನಿಸಿದ್ದ ಸಿದ್ದರಾಮಯ್ಯ, ಒಕ್ಕಲಿಗ ವೋಟುಗಳಿಂದಲೇ ಸಿಎಂ ಆಗುತ್ತೇನೆ ಎನ್ನುವ ಡಿಕೆ ಶಿವಕುಮಾರ್ ಇಬ್ಬರೂ ಸೋಲುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ADVERTISEMENT

ಲಿಂಗಾಯತ ಸಮುದಾಯವನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ಸಮಯದಲ್ಲಿ ಒಡೆದು ಚೂರು ಮಾಡಲು ಯತ್ನಿಸಿದ್ದರು. ಲಿಂಗಾಯತ ಸಮುದಾಯದ ಶಾಪದಿಂದ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು. ಕಾಂಗ್ರೆಸ್ ಸರ್ಕಾರವು ಕೂಡ ಅಧಿಕಾರಿಕ್ಕೆ ಬರಲಿಲ್ಲ. ಈಗಲೂ ಕೂಡ ಲಿಂಗಾಯತರನ್ನ ಟೀಕೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಒಂದು ಪಕ್ಷ ಯಾವುದೇ ಜಾತಿ ಯಾವುದೇ ಧರ್ಮವನ್ನು ವಹಿಸಬಾರದು.‌ಟೀಕೆ ಮಾಡುವುದು ಕೂಡ ರಚನಾತ್ಮಕವಾಗಿರಬೇಕು. ಯಾರು ತಪ್ಪು ಮಾಡುತ್ತಾರೆ ಅವರನ್ನು ಟೀಕಿಸುವುದರಲ್ಲಿ ತಪ್ಪಿಲ್ಲ. ಸಿದ್ದರಾಮಯ್ಯ ಮಾಡಿದ್ದ ತಪ್ಪಿಗೆ ಅವರು ಮತ್ತೆ ಬೆಲೆ ತರುತ್ತಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುತ್ತಾರೆ. ಜಾತಿ ರಾಜಕಾರಣ ತಂದ ಸಿದ್ದರಾಮಯ್ಯ ತಮ್ಮ ವಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳುತ್ತಾರೆ ಎಂದರು.

ಸಿದ್ದರಾಮಯ್ಯ ಮೊದಲು ತಮ್ಮ ಕ್ಷೇತ್ರ ಗೆದ್ದು ಬರಲಿ ಆಮೇಲೆ ಯಾರು ಸಿಎಂ ಆಗುತ್ತಾರೆ ಅಂತ ಚರ್ಚೆ ಮಾಡಲಿ. ಇಂತಹ ದುರಹಂಕಾರದ ಮಾತುಗಳಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ಬದಾಮಿ ಕ್ಷೇತ್ರದಲ್ಲಿ ಹೋಗಿ ನಿಂತು ಗೆದ್ದು ಬಂದಿದ್ದಾರೆ. ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಗೆಲುವು ಸಾಧಿಸಿಕೊಂಡು ಬಂದಿರುವುದು ಜಾತಿ ಕಾರಣಕ್ಕೆ ಅಲ್ಲ. ರಾಷ್ಟ್ರೀಯವಾದಿ ವಿಚಾರಗಳಿಗೆ ಮಾತ್ರ. ಆದರೆ ಕಾಂಗ್ರೆಸ್ ಮಾತ್ರ ಜಾತಿ ರಾಜಕಾರಣಕ್ಕೆ ಮಣೆ ಹಾಕಿದೆ. ಈ ಪಾಪದ ಕೊಡ ತುಂಬಿದೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರು ಸೋಲುತ್ತಾರೆ. ನನ್ನ ಹಿಂದೆ ಒಕ್ಕಲಿಗರೆಲ್ಲಾ‌ ನಿಂತುಕೊಳ್ಳಿ ನಾನು ಸಿಎಂ ಆಗುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರೆ, ನನ್ನ ಹಿಂದೆ ಕುರುಬರೆಲ್ಲರೂ ನಿಂತುಕೊಳ್ಳಿ, ನಾನು ಸಿಎಂ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಾರೆ. ಈ ರೀತಿ ಜಾತಿ ರಾಜಕಾರಣ ಮಾಡುತ್ತಿರುವುದೇ ಕಾಂಗ್ರೆಸ್. ಭಾರತೀಯ ಜನತಾ ಪಾರ್ಟಿಯ ಒಬ್ಬನೇ ನಾಯಕ ಜಾತಿ ವಿಷಯದಲ್ಲಿ ರಾಜಕಾರಣ ಮಾಡಿಲ್ಲ. ಕೇವಲ ರಾಷ್ಟ್ರೀಯವಾದಿ ನೀತಿ ಆಧಾರದ ಮೇಲೆ ಚುನಾವಣೆ ಮಾಡುತ್ತಿದ್ದಾರೆ ಎಂದರು.

ಅವಕಾಶವಾದಿ ರಾಜಕಾರಣಿ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಮಾಡಬಹುದು. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಹೊರಟಿದ್ದರು. ಆದರೆ ಅವರ ವರಿಷ್ಠರು ಕಪಾಳ ಮೋಕ್ಷ ಮಾಡಿದರು. ಅಲ್ಲಿಂದ ತಾನೇ ಮುಖ್ಯಮಂತ್ರಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳತೊಡಗಿದರು. ನಂತರ ವರುಣಾ ಮತ್ತೆ ಕೋಲಾರ ಎರಡು ಕ್ಷೇತ್ರದಲ್ಲಿ ನಾನು ನಿಲ್ಲುತ್ತೇನೆ ಎಂದರು. ಆಮೇಲೆ ಪಕ್ಷ ತೀರ್ಮಾನ ಮಾಡುತ್ತದೆ ಎಂದರು. ಸಿದ್ದರಾಮಯ್ಯ ಹೇಳಿಕೆಗೆ‌ ಅರ್ಥ ಇಲ್ಲ. ಒಂದೊಂದು ಸಾರಿ ಒಂದೊಂದು ಹೇಳಿಕೆ ನೀಡುತ್ತಾರೆ. ಇದಕ್ಕೆ ನಮ್ಮಲ್ಲಿ ಆಸ್ಪದ ಇಲ್ಲ ಎಂದರು.

ರಾಹುಲ್ ಗಾಂಧಿ ಪ್ರವಾಸ ರಾಜ್ಯದಲ್ಲಿ ಪರಿಣಾಮ ಬೀರದು. ಅವರು‌ ಎಲ್ಲೆಲ್ಲಿ ಪ್ರವಾಸ ಮಾಡುತ್ತಾರೋ, ಅಲ್ಲೆಲ್ಲಾ ಅವರು ಕಳೆದುಕೊಂಡಿದ್ದಾರೆ. ನಾವು ಮೋದಿ ಬಂದಲ್ಲೆಲ್ಲ ಗೆದ್ದುಕೊಂಡಿದ್ದೇವೆ. ರಾಹುಲ್ ಗಾಂಧಿ ಅವರಿಗೆ ನಾನು ಹೆಲಿಕಾಪ್ಟರ್ ಮಾಡಿಸಿಕೊಡುತ್ತೇನೆ. ಅವರು ಶಿವಮೊಗ್ಗಕ್ಕೆ ಬಂದು ಕಾಂಗ್ರೆಸ್ ಪರ ಪ್ರಚಾರ ಮಾಡಬೇಕು, ಈ ಮೂಲಕ ನಮ್ಮ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರನ್ನು ಗೆಲ್ಲಿಸಬೇಕು ಎಂದು ಈಶ್ವರಪ್ಪ ಕುಹಕವಾಡಿದರು.

ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.‌ ಬಹಿರಂಗ ಸಭೆ ನಡೆಸಲಿದ್ದಾರೆ. ಈ ಕಾರಣಕ್ಕಾಗಿ ಶಿವಮೊಗ್ಗ ಗ್ರಾಮಾಂತರ ವಿಭಾಗದ ಆಯನೂರು ಪಟ್ಟಣದ ಆಸುಪಾಸಿನಲ್ಲಿ ಜಾಗವನ್ನು ನೋಡುತ್ತಿದ್ದೇವೆ. ಏಕೆಂದರೆ ಜಿಲ್ಲೆಯ ಮಧ್ಯಭಾಗದಲ್ಲಿ ಪ್ರಧಾನಿ ಭಾಷಣಕ್ಕೆ ವ್ಯವಸ್ಥೆಯಾದೆ ಜನ‌ ಬರಲು ಅನುಕೂಲವಾಗುತ್ತೆ. ಹಾಗೂ ಈಗಾಗಲೇ ವಿಮಾನ‌ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ‌ ಪ್ರಧಾನಿ ಶಿವಮೊಗ್ಗ‌ ನಗರದ ಸಮೀಪ ಬಂದಿದ್ದುರು. ಹಾಗಾಗಿ ಈ ಕಾರ್ಯಕ್ರಮ ಜಿಲ್ಲೆಯ ಮಧ್ಯೆ ‌ಮಾಡೋಣ ಎಂದುಕೊಂಡಿದ್ದೇವೆ. ಇನ್ನೂ ಮೋದಿ ಅವರ ಸಮಯ ನಿಗದಿಯಾಗಿಲ್ಲ. ಆದರೆ ಶಿವಮೊಗ್ಗ ಪ್ರವಾಸ ಖಚಿತ ಎಂದರು.

ಮೊದಲೇ ಚುನಾವಣೆಯ ಬಿಸಿ ನಡುವೆ ಇಂದು(ಏ.22) ರಂಜಾನ್ ಹಬ್ಬದ ಸಂಭ್ರಮ. ಚುನಾವಣೆಯ ಕಾವು ಸದ್ಯ ಮಲೆನಾಡಿನಲ್ಲಿ ಜಾಸ್ತಿಯಾಗಿದೆ. ಈ ನಡುವೆ ಓರ್ವ ಹಿಂದೂ ಯುವಕನ ಕೊಲೆಯ ಸುದ್ದಿಯು ನಗರದಲ್ಲಿ ಕೆಲ ಹೊತ್ತು ಆಂತಕ ಸೃಷ್ಟಿ ಮಾಡಿತ್ತು. ಮತ್ತೆ ಎಲ್ಲಿ ಕೋಮುಗಲಭೆ ನಡೆಯುತ್ತದೆ ಎಂದು ಖುದ್ದಾಗಿ ಎಸ್ಪಿ ಮಿಥುನ್ ಕುಮಾರ್ ಭದ್ರಾವತಿಗೆ ಭೇಟಿ ನೀಡಿದ್ದರು. ಎಸ್ಪಿ ಎಲ್ಲ ಮುಂಜಾಗೃತೆಯನ್ನು ವಹಿಸಿದ್ದರು. ಭದ್ರಾವತಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಈ ಪ್ರಕರಣ ನಡೆದು ಕೆಲವೇ ಗಂಟೆಯಲ್ಲಿ ಪೊಲೀಸರು ನಾಲ್ವರು ಹಂತಕರನ್ನ ಹೆಡಿಮುರಿಕೊಟ್ಟಿದ್ದಾರೆ. ಹೌದು ಸಾದತ್, ಸುಹೇಲ್, ಜಾವೀದ್ ಮತ್ತು ಫರ್ವೇಜ್ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Tags: election campaigneshwarappaRahul GandhiShimogaಈಶ್ವರಪ್ಪಕಾಂಗ್ರೆಸ್​ಚುನಾವಣಾ ಪ್ರಚಾರರಾಹುಲ್​ ಗಾಂಧಿಶಿವಮೊಗ್ಗ
Previous Post

ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣಗೆ ಮುತ್ತಿಗೆ ಹಾಕಿದ ಸ್ಥಳೀಯರು..!

Next Post

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು: ಸಿಎಂ ಬಸವರಾಜ ಬೊಮ್ಮಾಯಿ

Related Posts

ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ
ರಾಜಕೀಯ

ದೆಹಲಿ ಬುಲಾವ್ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ಇಲ್ಲಿದೆ: ಏನಿದೆ ಕಾಂಗ್ರೆಸ್ ಲೆಕ್ಕಾಚಾರ?

by ಪ್ರತಿಧ್ವನಿ
May 25, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ದೆಹಲಿ ಬುಲಾವ್ ಬಂದಿರುವ ವಿಚಾರಕ್ಕೆ ಇದೀಗ ಸ್ವತಃ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ದೆಹಲಿಗೆ ಬರಲು...

Read moreDetails
ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
Next Post
ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು: ಸಿಎಂ ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು: ಸಿಎಂ ಬಸವರಾಜ ಬೊಮ್ಮಾಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada