~ಡಾ. ಜೆ ಎಸ್ ಪಾಟೀಲ.
ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಅನುತ್ಪಾದಕ ಸಾಲದ ಮೊತ್ತವು ವಿಪರೀತವಾಗಿ ಏರಿಕೆಯಾಗುತ್ತಿದೆ. ಈ ಸಾಲಗಾರರಲ್ಲಿ ಬಹುತೇಕರು ಗುಜರಾತ್ ಮೂಲದವರು ಮತ್ತು ವಂಚಕರು ಎನ್ನುವುದು ಕಾಕತಾಳಿಯವೆ ಎನ್ನುವ ಪ್ರಶ್ನೆ ಸಹಜವಾಗಿ ಜನರ ಮನಸ್ಸಿನಲ್ಲಿ ಮೂಡುತ್ತಿದೆ. ಈ ಉದ್ದೇಶಪೂರ್ವಕ ಸುಸ್ತಿದಾರರುˌ ವಂಚಕರ ಖಾತೆಗಳನ್ನು ವರ್ಗೀಕರಿಸಲು ಮೋದಿ ಸರ್ಕಾರವು ಸಾಮಾನ್ಯ ಭಾರತೀಯರ ಹಣವನ್ನು ಬಳಸುತ್ತಿದೆಯೆ ಎನ್ನುವ ಪ್ರಶ್ನೆ ಕೂಡ ಈಗ ಸಹಜವಾಗಿ ಮೂಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, ಒಂಬತ್ತು ವರ್ಷಗಳ ಮೋದಿ ಸರಕಾರದ ಅವಧಿಯಲ್ಲಿ ಭಾರತದ ಬ್ಯಾಂಕುಗಳು ೧೨,೫೦,೫೫೩ ಕೋಟಿ ರೂ. ಕಳೆದುಕೊಂಡಿವೆ. ಸ್ವತಂತ್ರ ಭಾರತದ ಆಡಳಿತದ ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ಬೃಹತ್ ಮೊತ್ತದ ಬ್ಯಾಂಕ್ ಹಗರಣ ನಡೆದ ಉದಾಹರಣೆ ಇಲ್ಲ. ಅದೂ ಈ ಹಗರಣ ನಡೆದರೂ ಕೂಡ ಅದರ ದುಸ್ಪರಿಣಾಮದ ಕುರಿತು ಯಾವುದೇ ಬಗೆಯ ಗುಸುಗುಸು ಅಥವಾ ಸಾರ್ವಜನಿಕ ಚರ್ಚೆ ನಡೆಯಲೆಯಿಲ್ಲ.
ಈ ಕುರಿತು ಇದೇ ಆಗಸ್ಟ್ ೦೪, ೨೦೨೩ ರ ‘ದಿ ವೈರ್’ ವೆಬ್ ಪತ್ರಿಕೆಯಲ್ಲಿ ಲೇಖಕ ಜವಾಹರ್ ಸಿರ್ಕಾರ್ ಅವರು ಒಂದು ಅಂಕಣವನ್ನು ಬರೆದಿದ್ದಾರೆ. ಆ ಲೇಖನದಲ್ಲಿ ಚರ್ಚೆಯಾದ ಸಂಗತಿಗಳನ್ನು ನಾನು ಇಲ್ಲಿ ಮರು ವಿಮರ್ಶಿಸಿದ್ದೇನೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ ೧ ರಂದು ಲೇಖಕರ ಬಹುಮುಖ್ಯ ಪ್ರಶ್ನೆಗೆ ನೀಡಿದ ಅಸ್ಪಷ್ಟ ಉತ್ತರˌ ಈ ಸಂಗತಿಯ ಕುರಿತು ಈಗಾಗಲೇ ಸಾರ್ವಜನಿಕಗೊಂಡಿರುವ ಬ್ಯಾಂಕುಗಳ ನಷ್ಟದ ಬೃಹತ್ ಮೊತ್ತದ ನಿಖರ ವಿವರಗಳ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಹೊರಹೋಗದಂತೆ ನಿಗ್ರಹಿಸಲು ಸರಕಾರವು ಹತಾಶ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿ ತೋರಿಸುತ್ತದೆ ಎನ್ನುತ್ತಾರೆ ಲೇಖಕರು. ೨೦ ತಿಂಗಳ ನಿರಂತರ ಪ್ರಯತ್ನದ ನಂತರ, ಅನುತ್ಪಾದಕ ಸಾಲದ ಮತ್ತು ರೈಟ್-ಆಫ್‌ಗಳ ಒಟ್ಟು ವರ್ಷವಾರು ಮತ್ತು ಬ್ಯಾಂಕ್‌ವಾರು ವಿವರಗಳನ್ನು ಹೊರತೆಗೆಯಲು ಲೇಖಕರಿಗೆ ಸಾಧ್ಯವಾಯಿತಂತೆ. ಈಗಾಗಲೆ ಈ ಕುರಿತು ‘ದಿ ವೈರ್’ ಪತ್ರಿಕೆಯಲ್ಲಿ ಎರಡು ಲೇಖನಗಳು ಬರೆಯಲಾಗಿದೆಯಂತೆ.

ಜೂನ್ ೧೮ ರಂದು ‘ದಿ ವೈರ್’ನಲ್ಲಿ ಬ್ಯಾಂಕ್ ಗಳ ೧೨ ಲಕ್ಷ ಕೋಟಿ ಐತಿಹಾಸಿಕ ನಷ್ಟಕ್ಕೆ ಮೋದಿ ಸರ್ಕಾರ ಉತ್ತರಿಸಬೇಕು ಎಂಬ ಶೀರ್ಷಿಕೆಯ ಲೇಖನದ ಮೂಲಕ ಈ ಎಲ್ಲ ವಿವರಗಳನ್ನು ಪ್ರಸ್ತುತಪಡಿಸಲಾಗಿದೆಯಂತೆ. ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ವಿವರಗಳು ಮೋದಿ ಆಡಳಿತದ ಮೊದಲ ಎಂಟು ವರ್ಷ, ಒಂಬತ್ತು ತಿಂಗಳುಗಳನ್ನು ಒಳಗೊಂಡಿದ್ದು, ಈಗ ಈ ಲೇಖನದಲ್ಲಿ ಸಂಪೂರ್ಣ ಒಂಬತ್ತು ವರ್ಷಗಳ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂಕಿಅಂಶವನ್ನು ಲೇಖಕರು ಹೊಂದಿದ್ದು, ಎಲ್ಲಾ ಬ್ಯಾಂಕ್‌ಗಳು ಕಳೆದುಕೊಂಡಿರುವ ಒಟ್ಟು ಮೊತ್ತವು ೧೨,೦೯,೬೦೬ ಕೋಟಿ ರೂ.ಗಳಿಂದ ೧೨,೫೦,೫೫೩ ಕೋಟಿ ರೂ. ಎನ್ನಲಾಗುತ್ತಿದೆ. ಭಾರತದ ಇತಿಹಾಸದಲ್ಲಿ ಹಿಂದೆಂದೂ ಇಂತಹ ಒಂದು ಬೃಹತ್ ಬ್ಯಾಂಕಿಂಗ್ ಹಗರಣವು ಯಾವುದೇ ಗುಸುಗುಸು ಅಥವಾ ಅದರ ದುಸ್ಪರಿಣಾದ ಕುರಿತು ಸಾರ್ವಜನಿಕ ಚರ್ಚೆಯಿಲ್ಲದೆ ನಾಶವಾಗಿರಲಿಲ್ಲ ಎನ್ನುವದು ಗಮನಾರ್ಹ ಸಂಗತಿ ಎನ್ನುತ್ತಾರೆ ಲೇಖಕರು.
ನಿರೀಕ್ಷೆಯಂತೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚು ಹಾನಿಗೊಳಗಾಗಿವೆ, ಆದರೆ ಖಾಸಗಿ ಬ್ಯಾಂಕುಗಳು ಸಹ ಈ ವೈರಸ್ ನಿಂದ ಬಳಲಿವೆ. ಯೆಸ್ ಬ್ಯಾಂಕ್‌ನ ರಾಣಾ ಕಪೂರ್ ಮತ್ತು ಐಸಿಐಸಿಐನ ಚಂದಾ ಕೊಚ್ಚರ್ ಅವರು ಈ ನಷ್ಟ ಅನುಭವಿಸಿದ್ದು ಸಹಜವಾಗಿ, ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರತೀಕಾರವು ತೀಕ್ಷ್ಣ ಮತ್ತು ವೇಗವಾಗಿರುತ್ತದೆ. ಈ ಸರಣಿಯ ಮೂರನೇ ಲೇಖನದಲ್ಲಿ (ಮೊದಲ ಮತ್ತು ಎರಡನೆಯ ಲೇಖನಗಳನ್ನು ನೀವು ಓದಬೇಕು), ನಮ್ಮ ಬ್ಯಾಂಕ್ ಗಳಲ್ಲಿನ ಸಾಮಾನ್ಯ ಜನರ ಠೇವಣಿಗಳನ್ನು ಉದ್ದೇಶಪೂರ್ವಕ ಡಿಫಾಲ್ಟರ್‌ಗಳು, ಆಸ್ತಿ-ಸ್ಟ್ರಿಪ್ಪರ್‌ಗಳು ಮತ್ತು ದೊಡ್ಡ ಮಟ್ಟದ ರಾಜಕೀಯವಾಗಿ ಆಶೀರ್ವಾದ ಹೊಂದಿರುವ ವಂಚಕರ ಖಾತೆಗಳ ನಷ್ಟವನ್ನು ಸರಿಹೊಂದಿಸಲು ಹೇಗೆ ಬಳಸಲಾಗಿದೆ ಎಂಬುದನ್ನು ಹೊಸ ಅಂಕಿಅಂಶಗಳೊಂದಿಗೆ ಈ ಲೇಖನದಲ್ಲಿ ಲೇಖಕರು ಪುನರುಚ್ಚರಿಸಿದ್ದಾರೆ. ಆದರೆ ಈ ವಂಚಕರ ಕುರಿತು ಸರಕಾರದ ಮೃದು ಧೋರಣೆಯ ಹಿಂದಿನ ರಹಸ್ಯವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು.

ಮೋದಿಯವರ ಜೊತೆಜೊತೆಯಲ್ಲೆ ಪ್ರವರ್ಧಮಾನಕ್ಕೆ ಬಂದುˌ ಅವರೊಡನೆ ಒಡನಾಟ ಹೊಂದಿದ್ದ ಅನೇಕರು ಲಕ್ಷಗಟ್ಟಲೆ ಕೋಟಿಗಳನ್ನು ಬ್ಯಾಂಕುಗಳಿಂದ ಲೂಟಿ ಮಾಡಿ ವಿದೇಶದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ದುರಂತವೆಂದರೆˌ ಮೋದಿ ಸರಕಾರ ಯಾರೊಬ್ಬರನ್ನು ವಿಚಾರರಿಸಿ ಜೈಲಿಗಟ್ಟಲಿಲ್ಲ. ಮನಮೋಹನ್ ಸಿಂಗ್ ಸರಕಾರವು ರಾಮಲಿಂಗಂ ರಾಜು ಅವರನ್ನು ಸತ್ಯಂನ ವಂಚನೆಗಾಗಿ ಜೈಲಿಗಟ್ಟಿತ್ತು. ಅಂದು ರಾಕ್‌ಸ್ಟಾರ್ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮೂಲಕ ನಾಟಕೀಯವಾಗಿ ಬಹಿರಂಗಪಡಿಸಿದ ಹಗರಣವನ್ನು ವರದಿ ಮಾಡಿದ್ದ ಟಿವಿ ಚಾನೆಲ್‌ಗಳು ಸಿಂಗ್ ಆಡಳಿತ ಭ್ರಷ್ಟವಾಗಿತ್ತು ಎಂದು ಬಿಂಬಿಸಿದವು. ಆ ಅನೇಕ ಟಿವಿ ಚಾನೆಲ್‌ಗಳು ಇಂದು ತಮ್ಮನ್ನು ಮೋದಿ ಅಥವಾ ಅವರ ಬಂಡವಾಳಶಾಹಿ ಗೆಳೆಯರಿಗೆ ಮಾರಿಕೊಂಡಿವೆ. ಇಂದು ಮಾಜಿ ಸಿಎಜಿ ಅವರು ಮೋದಿಯಿಂದ ಪುರಸ್ಕೃತರಾಗಿ ಅವರು ಹಾಕಿದ ಅತಿಯಾದ ಆಹಾರದಿಂದ ಉಸಿರುಗಟ್ಟಿದ್ದಾರೆ ಎಂಬುದು ಬೇರೆ ವಿಷಯ ಎನ್ನುತ್ತಾರೆ ಲೇಖಕರು.
“ಈ ಮೊತ್ತವನ್ನು ವಸೂಲಿ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅಗ್ರ ಇಪ್ಪತ್ತು ವಂಚಕರಿಗೆ ಯಾವ ಶಿಕ್ಷೆಯನ್ನು ನೀಡಲಾಗಿದೆ” ಎಂಬ ನನ್ನ ಪ್ರಶ್ನೆಗೆ ಮಂತ್ರಿ ನಿರ್ಮಲಾ ಸೀತಾರಾಮನ್, “ವಂಚನೆ ಪತ್ತೆಯಾದ ತಕ್ಷಣ ಬ್ಯಾಂಕ್‌ಗಳು ದೂರನ್ನು ಸಲ್ಲಿಸುವ ಅಗತ್ಯವಿದೆ,” ಎಂದು ಉತ್ತರಿಸಿದ್ದಾರೆ. ಈ ಸಂಗತಿ ಒಂದು ಚಿಕ್ಕ ಮಗುವಿಗೆ ಸಹ ತಿಳಿದಿದೆ, ಆದರೆ ನನ್ನ ಪ್ರಶ್ನೆಯು ನಿರ್ದಿಷ್ಟವಾಗಿ “ಆ ಇಪ್ಪತ್ತು ಉನ್ನತ ವಂಚಕರ”ನ್ನು ಗುರಿಯಾಗಿರಿಸಿಕೊಂಡಿತ್ತು. ಅವರಲ್ಲಿ ಅನೇಕರು ಪ್ರಧಾನಿಗೆ ವೈಯಕ್ತಿಕವಾಗಿ ಪರಿಚಯದವರು. ಅವರಲ್ಲಿ ಹಲವರು ಪ್ರಧಾನಿಯವರ ಹೆಸರನ್ನು ಬಳಸಿದ್ದಾರೆ ಮತ್ತು ಮೋದಿಯೊಂದಿಗಿನ ತಮ್ಮ ಫೋಟೋಗಳನ್ನು ಬ್ಯಾಂಕರ್‌ಗಳಿಗೆ ತೋರಿಸಿದ್ದಾರೆ ಎಂದು ಬ್ಯಾಂಕರ್‌ಗಳು ಹೇಳಿರುವ ಕುರಿತು ಲೇಖಕರು ಗಮನ ಸೆಳೆದಿದ್ದಾರೆ. ಹಣಕಾಸು ಸಚಿವರು ನನ್ನ ಪ್ರಶ್ನೆಯಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡರುˌ ಏಕೆಂದರೆ ಇದು ಅವರ ಮಂತ್ರಿ ಸ್ಥಾನಕ್ಕೆ ಕುತ್ತುಂಟುಮಾಬಹದಿತ್ತು ಎಂದು ಲೇಖಕರು ಬರೆದಿದ್ದಾರೆ.

ಆದರೆ ಅದೇ ದಿನ ಅರ್ಥ ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು “ಸರಕಾರವು ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯಿದೆಯ ಅಡಿಯಲ್ಲಿ ಆರೋಪಿಗಳಿಂದ ೧೫,೧೧೩ ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ” ಎಂದು ಉತ್ತರಿಸಿದರು. ಈ ವಂಚಕರು ೪೦,೦೦೦ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಸಾಲವನ್ನು ಹೊಂದಿದ್ದಾರೆ, ಆದ್ದರಿಂದ ಅವರು ತಮ್ಮ ಬಾಕಿ ಇರುವ ಮುಕ್ಕಾಲು ಭಾಗ ಸಾಲ ಮರು ಪಾವತಿಸುವುದನ್ನು ತಪ್ಪಿಸಿದ್ದಾರೆ ಎಂದರ್ಥ ಎನ್ನುವುದು ಲೇಖಕರ ಅಭಿಮತವಾಗಿದೆ. ಈ ವರ್ಷದ ಫೆಬ್ರುವರಿ ೫ ರಂದು, ಹಣಕಾಸು ಖಾತೆಯ ಮತ್ತೊಬ್ಬ ರಾಜ್ಯ ಮಂತ್ರಿ, ಭಾಗವತ್ ಕರಾಡ್, “ದೊಡ್ಡ ಸಾಲಗಳ ಮೇಲಿನ ಮಾಹಿತಿಯ ಕೇಂದ್ರ ಭಂಡಾರ (CRILC) ಡೇಟಾಬೇಸ್‌ನಲ್ಲಿ ವರದಿ ಮಾಡಿದಂತೆ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳಿಂದ ಟಾಪ್ ೧೦ ಸಾಲಗಾರರಿಗೆ ಕೊಟ್ಟ ಒಟ್ಟು ಸಾಲ ೧೨,೭೧,೬೦೪ ಕೋಟಿ ರೂ.” ಎಂದಿದ್ದರು. ಹಾಗಾಗಿ ಟಾಪ್ ೧೦ ಸಾಲಗಾರರಿಗೆ ಬ್ಯಾಂಕ್‌ಗಳು ಎಷ್ಟು ಮೊತ್ತದ ಸಾಲ ನೀಡಿವೆ ಎಂಬ ಕಲ್ಪನೆಯನ್ನು ನಾವು ಹೊಂದಿದ್ದೇವೆ ಎನ್ನುತ್ತಾರೆ ಲೇಖಕ.
ಅಗ್ರ ೧೦೦ ಜನ ಸಾಲಗಾರರ ಸಾಲದ ಮೊತ್ತವು ಇದಕ್ಕಿಂತ ಐದರಿಂದ ಆರು ಪಟ್ಟು ಹೆಚ್ಚು ಇರಬಹುದು ಎಂಬುದು ನಮ್ಮ ಅಂದಾಜು. ಸಹಜವಾಗಿ, ಅವರು ಸೂಕ್ತ ರಾಜಕೀಯ ಸಂಪರ್ಕ ಮತ್ತು ಒಳ ಒಪ್ಪಂದಗಳನ್ನು ಹೊಂದಿದ್ದರೆ, ಇದರಲ್ಲಿ ಹೆಚ್ಚಿನ ಭಾಗವನ್ನು ಅವರು ಎಂದಿಗೂ ಬ್ಯಾಂಕ್‌ಗಳಿಗೆ ಹಿಂತಿರುಗಿಸುದಿಲ್ಲ ಎನ್ನುತ್ತಾರೆ ಲೇಖಕರು. ನಮ್ಮ ವರದಿಯು ನಿಖರವಾಗಿ ಮೋದಿಯವರ ಒಂಬತ್ತು ವರ್ಷಗಳಲ್ಲಿ ಬ್ಯಾಂಕ್‌ಗಳು ಸುಮಾರು ೬೯ ಲಕ್ಷ ಕೋಟಿ ರೂಪಾಯಿಗಳ ಅನುತ್ಪಾದಕ ಸಾಲದ ಹೊರೆಯಿಂದ ಬಳಲುತ್ತಿವೆ ಎಂದು ನಾವು ಕಂಡುಕೊಂಡಿದ್ದೇವೆ. ಹಿಂದಿನ ಒಂಬತ್ತು ವರ್ಷಗಳಲ್ಲಿ ಈ ಮೊತ್ತದಲ್ಲಿ ಒಂದು ಸಣ್ಣ ಭಾಗವೂ ಕೂಡ ವಸೂಲಾಗಿಲ್ಲ. ಇಲ್ಲಿ ನಾವು ಒಟ್ಟು ಸಾಲದ ಮೊತ್ತದಲ್ಲಿ ಕೆಟ್ಟ ಸಾಲಗಳ ಶೇಕಡಾವಾರು ಎಷ್ಟು ಎನ್ನುವುದನ್ನೂ ಕೂಡ ತಿಳಿದುಕೊಳ್ಳಬೇಕಿದೆ. ಬ್ಯಾಂಕ್ ಸಾಲಗಳು ಗಣನೀಯವಾಗಿ ಹೆಚ್ಚಿವೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ಆದ್ದರಿಂದ ಒಟ್ಟು ಸಾಲಗಳಿಗೆ ಕೆಟ್ಟ ಸಾಲಗಳ ಶೇಕಡಾವಾರು ಉತ್ತಮ ಸೂಚಕವಾಗಿರಬಹುದು ಎನ್ನುತ್ತಾರೆ ಲೇಖಕರು.

ಈ ಶೇಕಡಾವಾರುಗಳನ್ನು ಒಟ್ಟು ಬ್ಯಾಂಕ್ ಮಾನ್ಯತೆಯ ಭಾಗವಾಗಿ NPA ಯ ಸಮಾನ ಶೇಕಡಾವಾರುಗಳೊಂದಿಗೆ ಹೋಲಿಸಬಹುದು. ಭಾರತದಲ್ಲಿ ಏನು ನಡೆಯುತ್ತಿದೆ ಮತ್ತು ಅದು ಏಕೆ ಎಂಬುದು ತುಂಬಾ ಅನುಮಾನಾಸ್ಪದವಾಗಿದೆ ಮತ್ತು ಪ್ರಪಂಚದ ಇತರ ದೇಶಗಳಿಗಿಂತ ಹೇಗೆ ಕೆಟ್ಟದಾಗಿದೆ ಎಂಬುದು ನಮಗೆ ಆಮೇಲೆ ಚೆನ್ನಾಗಿ ಅರ್ಥವಾಗುತ್ತದೆ. ಒಟ್ಟು ಸಾಲಗಳಿಗೆ NPA ಯ ಈ ಶೇಕಡಾವಾರು ಪ್ರಮಾಣಗಳು IMF ವೆಬ್‌ಸೈಟ್‌ನಲ್ಲಿವೆˌ ಮತ್ತು ಅವು ಮುಂದುವರಿದ ದೇಶಗಳಲ್ಲಿ ೦.೪ ಮತ್ತು ೧.೪ ರ ಮಧ್ಯದಲ್ಲಿ ಸುಳಿದಾಡುತ್ತವೆ. ನಿಸ್ಸಂಶಯವಾಗಿ, ಅಲ್ಲಿ ನಮಗಿಂತ ಹೆಚ್ಚಿನ ಪ್ರಾಮಾಣಿಕತೆ ಇದ್ದು, ಬಂಡವಾಳಶಾಹಿ ಪ್ರವೃತ್ತಿ ಕಡಿಮೆಯಿದೆ ಮತ್ತು ಭ್ರಷ್ಟಾಚಾರ ವಿರೋಧಿ ಕಾವಲು ವ್ಯವಸ್ಥೆ ಬಲವಾಗಿದೆ. ಇಟಲಿ, ಸ್ಪೇನ್ ಮತ್ತು ಪೋರ್ಚುಗಲ್‌ಗಳು ಹೆಚ್ಚು ‘ಗೆಳೆತನ’ ಮನೋಭಾವ ಹೊಂದಿವೆ ಮತ್ತು ಅಂತಹ ಸಡಿಲತೆಯು ಅವರ ಅಳಿವಿನಂಚಿನಲ್ಲಿರುವ ಸಾಲಗಳ ಶೇಕಡಾವನ್ನು ೧ ರಿಂದ ೧.೫ ಪ್ರತಿಶತಕ್ಕೆ ಹೆಚ್ಚಿಸುತ್ತದೆ ಎನ್ನುತ್ತಾರೆ ಲೇಖಕರು.
ಗ್ಲೋಬಲ್ ಎಕಾನಮಿ.ಕಾಮ್ ಜಾಲತಾಣವು ಅಭಿವೃದ್ಧಿಶೀಲ ರಾಷ್ಟ್ರಗಳ ಕುರಿತು ಹೆಚ್ಚು ವಿವರವಾದ ಡೇಟಾ ನೀಡುತ್ತದೆ. ಚೀನಾ, ವಿಯೆಟ್ನಾಂ, ಮಲೇಷಿಯಾ ಮತ್ತು ಕಾಂಬೋಡಿಯಾಗಳು ೧.೬ ರಿಂದ ೧.೭ ಪ್ರತಿಶತದಷ್ಟು, ಇಂಡೋನೇಷ್ಯಾ ೨.೬ ಪ್ರತಿಶತದಷ್ಟು ˌ ಟರ್ಕಿ, ಥೈಲ್ಯಾಂಡ್ ಮತ್ತು ಬ್ರೂನಿಯಲ್ಲಿ ಒಟ್ಟು ಸಾಲದ ಸುಮಾರು 3% ನಷ್ಟು ಅನುತ್ಪಾದಕ ಸಾಲಗಳನ್ನು ಹೊಂದಿವೆ. ಈ ನಿಟ್ಟಿನಲ್ಲಿ, ಮೋದಿ ಆಡಳಿತದ ಅವಧಿಯ ಒಂಬತ್ತು ವರ್ಷಗಳಲ್ಲಿ ನಮ್ಮ ಬ್ಯಾಕುಗಳ ಎನ್‌ಪಿಎಗಳು ಸಾಮಾನ್ಯವಾಗಿ ೭% ರಿಂದ ೮% ರಷ್ಟಿರುವದು ನಾಚಿಕೆಗೇಡಿನ ಸಂಗತಿಯಾಗಿದೆ. ನಮ್ಮ ಹಣಕಾಸು ಸಚಿವರ ಪ್ರಕಾರ, ೩೧.೩.೨೦೧೮ ಕ್ಕೆ ಇದು ೧೧.೪೬% ಕ್ಕೆ ತಲುಪಿದೆಯಂತೆ. ೨೦೨೧ ರಲ್ಲಿ, ಹಣಕಾಸು ರಾಜ್ಯ ಸಚಿವರು ನಮ್ಮ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ “ಕಳೆದ ಏಳು ವರ್ಷಗಳಲ್ಲಿ ಗರಿಷ್ಠ ೧೨.೧೭% ಅನುತ್ಪಾದಕ ಸಾಲ ಇದೆ” ಎಂದು ಉಲ್ಲೇಖಿಸಿದ್ದಾರೆ. ಅಂದರೆ ನಮ್ಮ ಬ್ಯಾಂಕುಗಳ ಅಳಿವಿನಂಚಿನಲ್ಲಿರುವ ಸಾಲಗಳ ಶೇ. ೨% ಅನ್ನು “ಅಂತರರಾಷ್ಟ್ರೀಯ ಮಾನದಂಡ” ಎಂದು ಭಾವಿಸಿದರೆ, ಈ ಶೇಕಡಾವಾರು ಮೊತ್ತವು ಭಾರತಕ್ಕೆ ತುಂಬಾ ಹೊರೆಯಾಗಲಿದೆ ಎನ್ನುತ್ತಾರೆ ಲೇಖಕರು.
ಮುಂದುವರೆಯುವದು….