ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಎರಡು ದಿನಗಳಿಂದ ಪ್ರತಿಭಟನೆ ನಡೆಸ್ತಿದ್ದಾರೆ. ಪ್ರಮುಖವಾಗಿ ಸರ್ಕಾರಿ ಶಾಲೆಗಳಲ್ಲಿ LKG ಹಾಗೂ UKG ತರುತ್ತಿರುವ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ (Freedom park) ನೂರಾರು ಕಾರ್ಯಕರ್ತೆಯರು ಹೋರಾಟ ನಡೆಸ್ತಿದ್ದಾರೆ. ಬೆಳಗಾವಿ (Belagavi), ಹುಬ್ಬಳ್ಳಿ (Hubli), ಮೈಸೂರು (mysuru), ಗದಗ ಸೇರಿದಂತೆ ಅನೇಕ ಜಿಲ್ಲೆಗಳಿಂದಬಂದು ಕಾರ್ಯಕರ್ತೆಯರು ಪ್ರತಿಭಟನೆ ಮಾಡ್ತಿದ್ದಾರೆ.
ನಿನ್ನೆ ಪ್ರತಿಭಟನಾ ಸ್ಥಳಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ (Lakshmi hebbalkar) ಭೇಟಿ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ರು, ಆದ್ರೆ ಲಿಖಿತ ರೂಪದಲ್ಲಿ ಆದೇಶ ಬರವವರೆಗೂ ಪ್ರತಿಭಟನೆ ಬಿಡೋದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟುಹಿಡಿದಿದ್ದಾರೆ.