ಹುಬ್ಬಳ್ಳಿ: ಪೇದೆಯೊಬ್ಬಾತ ಮಹಿಳೆಯೊಂದಿಗೆ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯ ನವನಗರದ ಶಿವಾನಂದ ನಗರದಲ್ಲಿ ಈ ಘಟನೆ ನಡೆದಿದೆ. ಧಾರವಾಡ ಸಂಚಾರಿ ಠಾಣೆಯ ಕಾನ್‌ಸ್ಟೇಬಲ್ ಮಹೇಶ್ ಹೆಸರೂರ್ (31) ಮತ್ತು ವಿಜಯಲಕ್ಷ್ಮೀ ವಾಲಿ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ ಕಾನ್‌ಸ್ಟೇಬಲ್ ಮಹೇಶ್, ಮದುವೆ ಆಗಿದ್ದರೂ ವಿವಾಹಿತ ಮಹಿಳೆಯೊಂದಿಗೆ ಹೊಂದಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
ಮಹೇಶ್ ಕಳೆದ 15 ದಿನಗಳಿಂದ ಪತ್ನಿ ಬಿಟ್ಟು ವಿಜಯಲಕ್ಷ್ಮೀಯೊಂದಿಗೆ ಕಳೆದ 15 ದಿನಗಳಿಂದ ವಾಸಿಸುತ್ತಿದ್ದ. ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ವಿಜಯಲಕ್ಷ್ಮಿ ಶನಿವಾರ ರಾತ್ರಿ ಮನೆಯಿಂದ ಹೋಗಿದ್ದಳು. ಹನುಮಂತನಗರದಲ್ಲಿ ವಾಸವಿದ್ದಳು. ವಿದ್ಯಾನಗರದ ಚೇತನ ಕಾಲೇಜು ಎದುರಿಗೆ ಪಡ್ಡು ಮಾರಿ ಜೀವನ ನಡೆಸುತ್ತಿದ್ದಳು. ಅವಳು ಕೂಡ ಹಿಂದೆ ಲವ್ ಮ್ಯಾರೇಜ್ ಆಗಿದ್ದಳು. ಇಬ್ಬರು ಮಕ್ಕಳು ಇದ್ದಾರೆ. ಆದರೆ, ಇವರಿಬ್ಬರ ಪರಿಚಯ ಹೇಗಾಯಿತು ಎಂಬುವುದು ಯಾರಿಗೂ ತಿಳಿದಿಲ್ಲ ಎನ್ನಲಾಗಿದೆ.