ಸಿಲಿಕಾನ್ ಸಿಟಿಯಲ್ಲಿ ಲಿವ್ ಇನ್ ರಿಲೇಷನ್ ಪ್ರಮಾಣ ಹೆಚ್ಚಾಗ್ತಿದೆ. ಕೊರೊನಾ ನಂತರ ಇದರ ಪ್ರಮಾಣ ಇನ್ನಷ್ಟು ಹೆಚ್ಚಳವಾಗಿದೆ. ಆದ್ರೆ ಈ ಲಿವ್ ರಿಲೇಷನ್ ಶಿಪ್ ವಂಚನೆ, ಮೋಸದಲ್ಲಿ ಕೊನೆಯಾಗ್ತಿವೆ. ಹೌದು, ಸಿಲಿಕಾನ್ ಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ. ಇಂಥ ಮಹಾನಗರದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಸಾಕಷ್ಟು ಪ್ರಭಾವ ಬೀರುತ್ತಿದೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಕೊರೊನಾ ನಂತರ ಲಿವ್ ಇನ್ ರಿಲೇಷನ್ ಶಿಪ್ ಇರುವ ಜೋಡಿಗಳ ಪ್ರಮಾಣ ಹೆಚ್ಚಾಗ್ತಿದೆ. ಕಳೆದ ಮೂರು ವರುಷಕ್ಕೆ ಹೋಲಿಸಿದರೆ ಈ ವರುಷ ಲಿವ್ ಇನ್ ರಿಲೇಷನ್ ಕೇಸ್ ಹೆಚ್ಚಳವಾಗಿದೆ. ಆರಂಭದಲ್ಲಿ ಈ ಸಂಬಂಧದಲ್ಲಿ ತುಂಬ ಚೆನ್ನಾಗಿರ್ತಾರೆ. ಆದ್ರೆ ಹೆಣ್ಮಕ್ಕಳು ಆನಂತರ ವಂಚನೆ, ಮೋಸಕ್ಕೆ ಒಳಗಾಗ್ತಿದಾರೆ. ಈ ಕುರಿತು ಮಹಿಳಾ ಆಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೂರು ಬರ್ತಿವೆ ಅಂತಾರೆ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು.
ಲಿವ್ ರಿಲೇಷನ್ ಶಿಪ್ ವಂಚನೆ, ಮೋಸದಲ್ಲಿ ಕೊನೆ
ಈ ಲಿವ್ ಇನ್ ರಿಲೇಷನ್ ಪ್ರಕರಣಗಳಲ್ಲಿ ಹೆಚ್ಚಾಗಿ ಸೋಷಿಯಲ್ ಮೀಡಿಯಾ ಮೂಲಕ ಪ್ರೀತಿ-ಪ್ರೇಮ ಶುರುವಾಗುತ್ತೆ. ಆನಂತರ ಮದುವೆ ಆಗದೆ ಸಹ ಜೀವನ ನಡೆಸ್ತಾರೆ. ಸಹ ಜೀವನ ನಡೆಸಿದ ಮೂರ್ನಾಲ್ಕು ವರುಷಕ್ಕೆ ಪ್ರಕರಣಗಳು ಮುರಿದುಬಿದ್ದು ದುಖಾಂತ್ಯವಾಗುತ್ತಿವೆ. ಕಳೆದ ಮೂರು ವರುಷದಲ್ಲಿ 106 ಪ್ರೇಮ, ಸೈಬರ್ ಪ್ರಕರಣ ದಾಖಲಾಗಿವೆ. ಇದರಲ್ಲಿ 70ಕ್ಕಿಂತಲೂ ಹೆಚ್ಚು ಲಿವಿಂಗ್ ಟು ಗೆದರ್ ಪ್ರಕರಣಗಳೇ ಹೆಚ್ಚು ಇವೆ. ಇದರಲ್ಲಿ 26 ಕೇಸ್ ಇತ್ಯರ್ಥ, ಉಳಿದ 80 ಕೇಸ್ ಇನ್ನೂ ಬಗೆಹರಿಯಬೇಕಿದೆ. ಇನ್ನು ಕಚೇರಿ ಸ್ಥಳದಲ್ಲಿ ಯುವತಿಯರಿಗೆ ಕಿರುಕುಳ ತಪ್ಪುತ್ತಿಲ್ಲ. 252 ಕೇಸ್ ನಲ್ಲಿ 48 ಕೇಸ್ ಇತ್ಯರ್ಥ, 204 ಕೇಸ್ ಚಾಲ್ತಿಯಲ್ಲಿವೆ. ಸೈಬರ್ ಕ್ರೈಂ ಕೇಸ್ 21 ಇದರಲ್ಲಿ 4 ಕೇಸ್ ಇತ್ಯರ್ಥ, 17 ಕೇಸ್ ಚಾಲ್ತಿಯಲ್ಲಿವೆ.
ಕಳೆದೆರಡು ವರುಷಕ್ಕೆ ಹೋಲಿಸಿದಲ್ಲಿ ಈ ವರುಷ ಲಿವ್ ಇನ್ ರಿಲೇಷನ್ ಕೇಸ್ ಹೆಚ್ಚು. ವಂಚನೆಗೊಳಗಾದ ನಂತರ ಹೆಣ್ಮಕ್ಕಳು ಆಯೋಗಕ್ಕೆ ದೂರು ಕೊಟ್ಡಿದ್ದಾರೆ. ಆದ್ರೆ ಮದುವೆಯಾದ ಮೇಲೆ ಕಾನೂನಿಗೂ ಸಹಜೀವನದಲ್ಲಿರುವ ಕಾನೂನು ಬಗ್ಗೆ ತಿಳಿದ ನಂತರ ವಂಚನೆಗೊಳಗಾದ ಯುವತಿಯರು ಜಾಗೃತರಾಗ್ತಿದಾರೆ.