
ಗುವಾಹಟಿ: ಲವ್ ಜಿಹಾದ್( Love Jihad)ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ತಮ್ಮ ಸರ್ಕಾರ ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam Chief Minister Himanta Biswa Sharma )ಭಾನುವಾರ ಹೇಳಿದ್ದಾರೆ. ಇಲ್ಲಿ ನಡೆದ ರಾಜ್ಯ ಬಿಜೆಪಿ (BJP )ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಲವ್ ಜಿಹಾದ್ ಬಗ್ಗೆ ಮಾತನಾಡಿದ್ದೇವೆ.
ಶೀಘ್ರದಲ್ಲೇ, ನಾವು ಕಾನೂನು ತರುತ್ತೇವೆ, ಅಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.ಶೀಘ್ರದಲ್ಲೇ ಹೊಸ ವಾಸಸ್ಥಳ ನೀತಿಯನ್ನು ಪರಿಚಯಿಸಲಾಗುವುದು,ಅದರ ಅಡಿಯಲ್ಲಿ ಅಸ್ಸಾಂನಲ್ಲಿ ಜನಿಸಿದವರು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ ಎಂದು ಶರ್ಮಾ ಹೇಳಿದರು.
ಚುನಾವಣಾ ಪೂರ್ವ ಭರವಸೆಯಂತೆ ಒದಗಿಸಲಾದ ಒಂದು ಲಕ್ಷ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು, ಇದು ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿದಾಗ ಸ್ಪಷ್ಟವಾಗುತ್ತದೆ ಎಂದರು.ಹಿಂದೂ-ಮುಸಲ್ಮಾನರ ನಡುವಿನ ಭೂಮಿ ಮಾರಾಟದ ಬಗ್ಗೆಯೂ ಅಸ್ಸಾಂ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಸಿಎಂ ಹೇಳಿದರು.
ಅಂತಹ ವಹಿವಾಟನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೂ, ಮುಂದುವರಿಯುವ ಮೊದಲು ಮುಖ್ಯಮಂತ್ರಿಗಳ ಒಪ್ಪಿಗೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ ಎಂದು ಶರ್ಮಾ ಹೇಳಿದರು.