• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಂವಿಧಾನ ರಕ್ಷಣೆಯ ಕ್ರಾಂತಿಯಾಗಲಿ: ಬಸವರಾಜ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
January 11, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ, ವಿಶೇಷ, ಶೋಧ
0
Share on WhatsAppShare on FacebookShare on Telegram

ಸಂವಿಧಾನ ವಿರೋಧಿ ಕಾಂಗ್ರೆಸನ್ನು ಎಲ್ಲರೂ ತಿರಸ್ಕರಿಸಬೇಕು:ಬಸವರಾಜ ಬೊಮ್ಮಾಯಿ

ADVERTISEMENT

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ಕಲ್ಯಾಣ ರಾಜ್ಯದ ಕನಸಿಗೆ ಎಲ್ಲರೂ ಬೆಂಬಲ ಕೊಟ್ಟಾಗ ಮಾತ್ರ ವಿಕಸಿತ ಭಾರತ ಆಗುತ್ತದೆ. ಅದಕ್ಕೆ ಎಲ್ಲ ವರ್ಗದ ಜನರು ಬೆಂಬಲ ಕೊಡಬೇಕು. ಸಂವಿಧಾನ ವಿರೋಧಿ ಕಾಂಗ್ರೆಸನ್ನು ಎಲ್ಲರೂ ತಿರಸ್ಕರಿಸಬೇಕು. ಸಂವಿಧಾನಕ್ಕೆ ನಮ್ಮ ಬೆಂಬಲ ಎಂದು ಸಂಕಲ್ಪ ಮಾಡಬೇಕು. ಸಂವಿಧಾನ ರಕ್ಷಣೆಯ ಕಾಂತಿಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾಯಿ ಹೇಳಿದರು.

ಅವರು ಬಾಗಲಕೋಟೆಯಲ್ಲಿ ಶನಿವಾರ ಸಿಟಿಜನ್ ಫಾರ್ ಸೋಸಿಯಲ್ ಜಸ್ಟೀಸ್ ಸಂಸ್ಥೆ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದ ಸಂಸ್ಕೃತಿಯಲ್ಲಿ ಪ್ರಾಯಶ್ಚಿತ ಎನ್ನುವ ಪದ ಇದೆ. ಯಾರು ಪಾಪ ಮಾಡುತ್ತಾರೋ ಅವರು ಪಾಯಶ್ಚಿತ ಮಾಡಿಕೊಳ್ಳುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಯಾರು ಅನ್ಯಾಯ ಮಾಡಿದರು ಎಂದು ಎಳೆಎಳೆಯಾಗಿ ಬಿಡಿಸಿದ್ದಾರೆ. ಆಗ ಅಧಿಕಾರದಲ್ಲಿ ಇದ್ದವರು ಕಾಂಗ್ರೆಸ್‌ನವರು. ಅಂಬೇಡ್ಕ‌ರ್ ಅವರನ್ನು ಸಂವಿಧಾನ ರಚನಾ ಸಮಿತಿಯಲ್ಲಿಯೇ ಬರದಂತೆ ನೋಡಿದವರು ಕಾಂಗ್ರೆಸ್‌ನವರು. ಅಂಬೇಡ್ಕ‌ರ್ ಅವರನ್ನು ಸೋಲಿಸಿದರು. ಅಂಬೇಡ್ಕರ್ ಅವರು ದಲಿತ ಸಮುದಾಯದ ಸರ್ವ ಸಮ್ಮತ ನಾಯಕರಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಸಂವಿಧಾನ ರಚನಾ ಸಮಿತಿಯಿಂದ ಹೊರಗಿಡುವ ಪ್ರಯತ್ನ ಮಾಡಿದ್ದರು. ಪೂನಾ ಫ್ಯಾಕ್ಟ್ ಅಂತ ಒಪ್ಪಂದ ಆಗಿತ್ತು. ಅಂಬೇಡ್ಕರ್ ಅವರು ಎಸ್ಸಿ ಸಮುದಾಯದ ಧ್ವನಿಯಾಗಿ ನಿಂತಿದ್ದರು. ಫೂನಾ ಫ್ಯಾಕ್ಸ್ ಕುರಿತು ಗಾಂಧಿಜಿ ಜೊತೆ ಚರ್ಚಿಸಿ ದಲಿತರಿಗೆ ಮೀಸಲಾತಿ ವ್ಯವಸ್ಥೆ ಜಾರಿಗೆ ತರುವಲ್ಲಿ ಯಶಸ್ವಿಯಾದರು. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯಲ್ಲಿ ಇರದೇ ಇದ್ದರೆ ಏನಾಗುತ್ತಿತ್ತು ಎಂದು ಪಶ್ನಿಸಿದರು.

ಪಶ್ಚಾತಾಪಕ್ಕಾಗಿ ಸಂವಿಧಾನ
ಅಂಬೇಡ್ಕ‌ರ್ ಅವರಿಗೆ ಅನ್ಯಾಯವಾದರೆ ಸಂವಿಧಾನಕ್ಕೆ ಅನ್ಯಾಯವಾದಂತೆ, ಅದಕ್ಕೆ ಈಗ ಕಾಂಗ್ರೆಸ್‌ನವರು ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಕಾಂಗ್ರೆಸ್ ನವರು 2024 ರ ಲೋಕಸಭೆ ಚುನಾವಣೆ ನಂತರ ಸಂವಿಧಾನ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅವರ ಓಟ್ ಬ್ಯಾಂಕ್ ಆಗಿ ಎಸ್ಸಿ ಎಸ್ಟಿ ಸಮುದಾಯ ಉಳಿದಿಲ್ಲ ಅನ್ನುವ ಆತಂಕ ಶುರುವಾಗಿದೆ. ಅದಕ್ಕೆ ಅವರು ಈಗ ಸಂವಿಧಾನ ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಮ್ಮ ಪಧಾನಿ ನರೇಂದ್ರ ಮೋದಿಯವರು ಸಂವಿಧಾನಕ್ಕೆ ನಮಿಸಿ ಅಧಿಕಾರ ಸ್ವೀಕರಿಸಿದರು. ನಮ್ಮ ಆಚಾರ, ವಿಚಾರ, ನಡೆಯಲ್ಲಿ ಸಂವಿಧಾನ ಇದೆ. ಕಾಂಗ್ರೆಸ್‌ನವರ ಆಚಾರದಲ್ಲಿ ಸಂವಿಧಾನ ಪಾಲನೆ ಇಲ್ಲ. ಅದಕ್ಕಾಗಿ ಅವರು ಪಶ್ಚಾತಾಪಕ್ಕಾಗಿ ಈಗ ಸಂವಿಧಾನ ಪ್ರತಿ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ದರೆ, ಅದಕ್ಕೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಕಾರಣ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟಿದ್ದ ಇಂದಿರಾ ಗಾಂಧಿಯನ್ನು ದೇಶದ ಜನರು ಹೀನಾಯವಾಗಿ ಸೋಲಿಸಿದರು. ಸಂವಿಧಾನದ ಮೂಲ ಆಶಯ ಬದಲು ಮಾಡಲು ಮುಂದಾದಾಗ ಸುಪ್ರೀಂ ಕೋರ್ಟ್ ಕೇಶವಾನಂದ ಭಾರ್ತಿ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಂವಿಧಾನದ ಮೂಲ ಆಶಯ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು. ಒಂದು ದಿನ ತಡವಾಗಿದ್ದರೆ, ಇಂದಿರಾ ಗಾಂಧಿ ರಾಜೀನಾಮೆ ಕೊಡಬೇಕಿತ್ತು. ಅವರ ವಿರುದ್ಧ ಆದೇಶ ಬಂದಾಗ ರಾತ್ರೋ ರಾತ್ರಿ ತುರ್ತು ಪರಿಸ್ಥಿತಿ ಹೇರಿದರು. ಕಾಂಗ್ರೆಸ್‌ನವರು ಅಲ್ಪ ಸಂಖ್ಯಾತರ ಬಗ್ಗೆ ಬಹಳ ಮಾತನಾಡುತ್ತಾರೆ. ಅಲ್ಪಸಂಖ್ಯಾತರು ಮತ್ತು ಎಸ್ಸಿ ಎಸ್ಟಿ ಸಮುದಾಯಕ್ಕೆ ಕಾಂಗ್ರೆಸ್ ದೊಡ್ಡ ಅನ್ಯಾಯ ಮಾಡಿದೆ. ಶಾಭಾನು ಪ್ರಕರಣದಲ್ಲಿ ವಿಚ್ಚೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅದನ್ನು ಮೊದಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಒಪ್ಪಿದ್ದರು. ಆದರೆ,
ಮುಸ್ಲಿಂ ಧರ್ಮ ಗುರುಗಳು ಬಂದು ನಾವು ಶರಿಯತ್ ಕಾನೂನು ಪಾಲನೆ ಮಾಡುತ್ತೇವೆ. ನೀವು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿದರೆ, ನಾವು ಒಪ್ಪುವುದಿಲ್ಲ ಎಂದು ಬೆದರಿಕೆ ಹಾಕಿದರು. ರಾಜೀವ್ ಗಾಂಧಿ ಅದನ್ನು ಒಪ್ಪಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲಿಲ್ಲ ಎಂದರು.

ಅಂಬೇಡ್ಕ‌ರ್ ಅವರು ಮುಸ್ಲಿಂಮರಿಗೆ ಹೇಗೆ ಪತ್ಯೇಕ ಕಾನೂನಿದೆಯೋ ಅದೇ ರೀತಿ ಹಿಂದೂಗಳಿಗೂ ಪ್ರತ್ಯೇಕ ಕಾನೂನು ಇರಬೇಕು ಎಂದು ಹೇಳಿದರು. ಅದಕ್ಕಾಗಿ ರಾಜೀನಾಮೆ ನೀಡಿದರು. ರಾಹುಲ್ ಗಾಂಧಿಯವರು ಈಗ ಜಾತಿ ಗಣತಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಎಂ.ಎನ್ ರಾಯ್ ಅವರು ನಮ್ಮ ತಂದೆಯ ಗುರುಗಳು, ಅವರು 1934 ಸಂವಿಧಾನ ರಚನಾ ಸಮಿತಿ ಆಗಬೇಕು ಅಂತ ಹೇಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಅನಾಮಧೇಯ ಹೋರಾಟಗಾರಿದ್ದರೋ, ಸಂವಿಧಾನ ರಚನೆಯಲ್ಲಿಯೂ ಅನಾಮಥೆಯ ಚಿಂತಕರಿದ್ದರು ಎಂದು ಹೇಳಿದರು.

ಸಂವಿಧಾನದಲ್ಲಿ ಬಸವ ತತ್ವ
ನಮ್ಮದು ಬಸವಣ್ಣನವರ ನಾಡು, ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪ, ಸಂವಿಧಾನದಲ್ಲಿಯೂ ಬಸವಣ್ಣನವರ ತತ್ವಗಳಿವೆ. ಸಮಾನತೆ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ ಇವೆಲ್ಲ ಸಂವಿಧಾನದಲ್ಲಿವೆ. ಕೇಂದ್ರದ ಅಧಿಕಾರ ದುರುಪಯೋಗ ಪಡೆಸಿಕೊಂಡು ರಾಜ್ಯಗಳ ಅಧಿಕಾರ ಮೊಟಕುಗೊಳಿಸುವ ಕೆಲಸ ಮಾಡಿದ್ದು ಕಾಂಗ್ರೆಸ್, ಚುನಾಯಿತ ಸರ್ಕಾರ ಇಲ್ಲದಿರುವಾಗಲೇ ಕಾಂಗ್ರೆಸ್ ರಾಜ್ಯಗಳ ಅಧಿಕಾರ ಮೊಟಕುಗೊಳಿಸಿತ್ತು. ನಮ್ಮ ತಂದೆಯವರ ಸರ್ಕಾರವನ್ನು ಕಾಂಗ್ರೆಸ್ ತೆಗೆದು ಹಾಕಿತ್ತು. ನಮ್ಮ ತಂದೆಯವರು ಸುಮ್ಮನೆ ಕೂಡಲಿಲ್ಲ. ಆಗ ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ರಾಮ್‌ಜೆನ್ಮಲಾನಿ ಅವರು ಈ ಪ್ರಕರಣದಲ್ಲಿ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಆದರೆ, ನಮ್ಮ ತಂದೆಯವರು ಈ ಪ್ರಕರಣವನ್ನು ನನಗಾಗಿ ಹೋರಾಟ ಮಾಡುವುದಿಲ್ಲ. ಪ್ರಜಾಪಭುತ್ತದ ಉಳಿವಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿ ಕೋರ್ಟ್‌ನಲ್ಲಿ ವಾದ ಮಾಡಿ ಕೇಸ್ ಗೆದ್ದರು.
ಕಾಂಗ್ರೆಸ್‌ಗೆ ಅಂಬೇಡ್ಕ‌ರ್ ಹೆಸರು ಹೇಳುವ ನೈತಿಕತೆ ಇಲ್ಲ. ಸಂವಿಧಾನದ ಬಗ್ಗೆ ಕಾಂಗ್ರೆಸ್ ಮಾತನಾಡುವುದು ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ. ಜಯಪ್ರಕಾಶ್ ನಾರಾಯಣ ಅವರ ಸಂಪೂರ್ಣ ಕ್ರಾಂತಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ಎಂದೇ ಬಿಂಬಿತವಾಗಿದೆ. ಈಗಲೂ ಸಂವಿಧಾನದ ಬಗ್ಗೆ ಯಾಕೆ ಮಾತನಾಡುತ್ತೇವೆ ಎಂದರೆ, ಮುಂದಿನ ಪೀಳಿಗೆಗೆ ಸಂವಿಧಾನದ ಬಗ್ಗೆ ತಿಳಿಸಬೇಕಿದೆ. ಸಂವಿಧಾನ ಇದ್ದರೆ ಮಾತ್ರ ನಾವು ಎಲ್ಲರೂ ಮುಕ್ತವಾಗಿ ಇರಲು ಸಾಧ್ಯ. ಚೈನಾ ದೇಶ ನಮಗಿಂತ ಆರ್ಥಿಕವಾಗಿ ಪಭಲವಾಗಿದೆ. ಆದರೆ, ಸ್ವಾತಂತ್ರ್ಯ ಇಲ್ಲ. ಮಾತನಾಡುವ ಹಕ್ಕಿಲ್ಲ. ಸಂವಿಧಾನ ರಕ್ಷಣೆಯನ್ನು ಪಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಶ್ಚಾತಾಪ ಪಡುವ ಸಮಯ ಬರುತ್ತದೆ. ಈ ಸಂದೇಶವನ್ನು ಎಲ್ಲರ ಮನೆಗಳಿಗೂ ತಲುಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗುಳೇದಗುಡ್ಡ ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಎನ್. ಮಹೇಶ್, ಪುಸ್ತಕ ಲೇಖಕ ವಿಕಾಸ್ ಕುಮಾ‌ರ್ ಪಿ. ಶಾಸಕರಾದ ಸಿದ್ದು ಸವದಿ, ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Tags: BagalkoteBasavaraja BommaiEx DCMGovinda KarjolaGuledaguddaKadasiddeshwara swamijiSamvidana
Previous Post

ಕಾಡಿನ ಟ್ರೇಲರ್ ಗೆ ನಾಡಿನ ಜನತೆ ಫಿದಾ.

Next Post

ಪೀಪಲ್‌ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಗರಿವಿಡಿ ಲಕ್ಷ್ಮೀ ಚಿತ್ರದ ಮೊದಲ ಹಾಡು ಬಿಡುಗಡೆ

Related Posts

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
0

ಕನ್ನಡ‌ ಸೈಕಲಾಜಿಕಲ್ ಥ್ರಿಲ್ಲರ್ ಗ್ರೀನ್(Green) ಸಿನಿಮಾ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ನಾಳೆಯಿಂದ zee5 ಒಟಿಟಿಯಲ್ಲಿ ಈ ಚಿತ್ರ ಸ್ಟ್ರೀಮಿಂಗ್ ಆಗಲಿದೆ. https://youtu.be/v2kOW8m5SWg?si=_pISA5B40rv2ey9a ರಾಜ್ ವಿಜಯ್ ನಿರ್ದೇಶನದಲ್ಲಿ ಮೂಡಿಬಂದ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

December 13, 2025
Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

December 13, 2025
ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ

ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ

December 13, 2025
Next Post

ಪೀಪಲ್‌ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಗರಿವಿಡಿ ಲಕ್ಷ್ಮೀ ಚಿತ್ರದ ಮೊದಲ ಹಾಡು ಬಿಡುಗಡೆ

Recent News

https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

December 13, 2025
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!