ಬೆಳಗಾವಿ: ಟಿ.ನರಸೀಪುರದಲ್ಲಿ ನಿರಂತರವಾಗಿ ಚಿರತೆ ದಾಳಿ ಆಗುತ್ತಿರುವ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಶಾಸಕ ಅಶ್ವಿನ್ ಕುಮಾರ್ ಪ್ರಸ್ತಾಪಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ತುಕರಾಮ್, ನನ್ನ ಕ್ಷೇತ್ರದಲ್ಲೂ ಮೂವರ ಮೇಲೆ ದಾಳಿ ನಡೆಸಿವೆ. ಈ ಕಾರಣಕ್ಕಾಗಿ ಚಿರತೆಧಾಮ ಮಾಡಿ ಚಿರತೆ ಸಾಕಿ ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷದ ಬಗ್ಗೆ ವಿಧಾನಸಭೆ ಯಲ್ಲಿ ಪ್ರಸ್ತಾಪವಾಯಿತು. ಅದರಲ್ಲೂ ಚಿರತೆ ಮತ್ತು ಆನೆ ದಾಳಿಗಳ ಬಗ್ಗೆ ಚರ್ಚೆ ನಡೆಯಿತು.
ಶೂನ್ಯ ವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ ಶಾಸಕ ಅಶ್ವಿನ್ ಕುಮಾರ್ ಅವರು ಟಿ. ನರಸೀಪುರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮಂಜುನಾಥ್ ಅನ್ನುವ ವ್ಯಕ್ತಿಯನ್ನು ನಂತರ ಮೇಘನಾ ಅನ್ನೋ ಹುಡುಗಿ, ಸತೀಶ್ ಅನ್ನೋ ಹುಡುಗನನ್ನ ಹಾಗೂ ನಿನ್ನೆ ನಿಂಗೇಗೌಡ ಅನ್ನೋ ರೈತನ ಮೇಲೆ ದಾಳಿ ನಡೆಸಿದೆ. ಟಿ.ನರಸೀಪುರದಲ್ಲಿ ಚಿರತೆ ಹಾವಳಿ ಹೆಚ್ಚಾಗಿ ಜನ ಆತಂಕದಲ್ಲಿದ್ದಾರೆ ಎಂದು ಚಿರತೆ ಹಾವಳಿ ಬಗ್ಗೆ ಸಮಸ್ಯೆ ತೋಡಿಕೊಂಡರು.
ಈ ವೇಳೆ ಸದನಕ್ಕೆ ಸಲಹೆ ಕೊಟ್ಟ ಕಾಂಗ್ರೆಸ್ ಸದಸ್ಯ ತುಕರಾಮ್, ಚಿರತೆ ಕಟ್ಟಡ ಪ್ರವೇಶ ಮಾಡಿದೆ, ಕ್ಯಾಂಪಸ್ ಗೂ ಬಂದಿದೆ. ನಮ್ಮ ಕ್ಷೇತ್ರದಲ್ಲಿ ಮೈನಿಂಗ್ ಇದೆ. ಸಾಕಷ್ಟು ಚಿರತೆ ಬರ್ತಿವೆ. ಮೂರು ಜನರ ಮೇಲೆ ದಾಳಿ ನಡೆಸಿವೆ. ಈ ಕಾರಣಕ್ಕಾಗಿ ಚಿರತೆಧಾಮ ಮಾಡಿ ಚಿರತೆ ಸಾಕಿ ಎಂದು ಸಲಹೆ ನೀಡಿದರು.