ಗೀತಾ ಬಾರಕೇರಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಗೀತಾ ಮೃತಪಟ್ಟಿದ್ದಾರೆ.
ಗದಗ;ನರಗುಂದ ತಾಲೂಕಿನ ಹದಲಿ ಸರ್ಕಾರಿ ಶಾಲೆಯಲ್ಲಿ ನಡೆದ ಅಮಾನುಷ ಕೃತ್ಯದ ಸಂತ್ರಸ್ತೆ ಮೃತ ಬಾಲಕ ಭರತ್ ತಾಯಿ ಗೀತಾ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ದೇಶಾದ್ಯಂತ ಸಂಚಲನ ಮೂಡಿಸಿದ್ದ ವಿದ್ಯಾರ್ಥಿ ಕೊಲೆ ಪ್ರಕರಣವಾದ ಅತಿಥಿ ಶಿಕ್ಷಕಿ ಗೀತಾ ಬಾರಕೇರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ (35) ಭರತ್ ಗೆ ಕೊಲೆ ಮಾಡಿ ಆತನ ತಾಯಿ ಅದೇ ಶಾಲೆಯ ಶಿಕ್ಷಕಿ ಗೀತಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.ಹಲ್ಲೆಗೆ ಗೀತಾ ಜೊತೆಗಿನ ಮುತ್ತಪ್ಪನ ಪ್ರೇಮವೇ ಕಾರಣ ಎಂದು ಹೇಳಲಾಗಿತ್ತು.

ಮುತ್ತಪ್ಪ ಹಡಗಲಿ ಭರತ್ ಮೇಲೆ ಹಲ್ಲೆ ಮಾಡಿದ್ದ. ಭಯಗೊಂಡ ಬಾಲಕ ಪಕ್ಕದ ತರಗತಿಯಲ್ಲಿದ್ದ, ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಗೀತಾ ಬಾರಕೇರಿ ಬಳಿಗೆ ಓಡಿದ್ದ.ಗೀತಾ ಬಾರಕೇರಿ ಅವರು ಯಾಕೆ ಹೊಡೆಯುತ್ತಿದ್ದೀರಿ ಎಂದು ಕೇಳುತ್ತಿದ್ದಂತೆಯೇ ಮುತ್ತಪ್ಪ ಹಡಗಲಿ ಆಕೆಯ ತಲೆಗೂ ಸಲಾಕೆಯಿಂದ ಹೊಡೆದಿದ್ದ. ಮಾತ್ರವಲ್ಲ ಬಾಲಕನನ್ನು ಮತ್ತೆ ಎಳೆದುಕೊಂಡು ಬಂದು ಇನ್ನೊಂದು ಕಟ್ಟಡದ ಕೆಳ ಜಗಲಿಗೆ ಎತ್ತಿ ಎಸೆದಿದ್ದ. ಈ ವೇಳೆ ಬಾಲಕನ ತಲೆ ಕಲ್ಲಿಗೆ ಬಡಿದು ಗಂಭೀರವಾಗಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಡಿದ್ದ.
ಗೀತಾ ಬಾರಕೇರಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಗೀತಾ ಮೃತಪಟ್ಟಿದ್ದಾರೆ.