ಟಿ.ನರಸೀಪುರದಲ್ಲಿ ಎರಡೂ ಚಿರತೆ ಸೆರೆ ಸಿಕ್ಕರೂ ಸ್ಥಳೀಯರಿಗೆ ನೆಮ್ಮದಿ ಇಲ್ಲದಂತೆಯಾಗಿದೆ .ಇಂದು ಮುಂಜಾನೆ ಮನೆಯ ಜಗುಲಿ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿದೆ.ತಾಲ್ಲೂಕಿನ ಮುತ್ತತ್ತಿ ಗ್ರಾಮದಲ್ಲಿ ಘಟನೆ ನಡೆದಿದ್ದು .ಕರೋಹಟ್ಟಿ ಗ್ರಾಮದ ಮಹದೇವಯ್ಯ (55) ಚಿರತೆ ದಾಳಿಗೊಳಗಾದ ವ್ಯಕ್ತಿ. ಮಗಳ ಮನೆಗೆ ಬಂದಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಚಿರತೆ ಮೇಲೆ ತಾನು ಹೊದಿಸಿಕೊಂಡಿದ್ದ ರಗ್ಗನ್ನ ಹಾಕಿದ ಮಹದೇವಯ್ಯ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಗಾಬರಿಯಾಗಿ ಚಿರತೆ ಓಡಿ ಹೋಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು .
ಸದ್ಯ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹದೇವಯ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ…