ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಹೇಳಿಕೆ ವಿಚಾರವಾಗಿ ಕಾನೂನು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತದೆ ಎಂದು ಸಿಎಂ(CMofKarnataka) ಸಿದ್ದರಾಮಯ್ಯ(Siddaramaiah) ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ವಿಚಾರದ ಪ್ರಶ್ನೆಗೆಲ್ಲಾ ಪ್ರತಿಕ್ರಿಯೆ ಕೊಡಲಪ್ಪ, ಸುಮ್ನೆ ನೀವು ಈಶ್ವರಪ್ಪ ಹಂಗ್ ಹೇಳ್ದ ವಿಜಯೇಂದ್ರ(Vijayendra) ಹಿಂಗ್ ಹೇಳ್ದ ಇದನ್ನೇನಾ ನೀವು ಕೇಳೋದು? ಎಂದು ಮಾಧ್ಯಮಗಳ(Media) ವಿರುದ್ಧ ಗರಂ ಆದ ಸಿಎಂ, ಕಾನೂನು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತದೆ ಎಂದರು.

ಕೆಂಗಲ್ ಹನುಮಂತಯ್ಯ ಜನ್ಮದಿನದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಧಾನಸೌಧ ಕಟ್ಟಿಸಿದ್ದೇ ಅವರು, ಆದರೆ ಅವರಿಗೆ ವಿಧಾನಸೌಧದಲ್ಲಿ ಆಡಳಿತ ನಡೆಸಲು ಆಗಲಿಲ್ಲ. ಬಹಳ ದಕ್ಷತೆಯಿಂದ ರಾಜ್ಯವನ್ನು ನಡೆಸಿದವರು ಅವರು. ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದು ಅವರೇ. ಬದ್ದತೆಯಿಂದ ಕೆಲಸ ಮಾಡುತ್ತಿದ್ದರು, ಕರ್ನಾಟಕ ಏಕೀಕರಣಕ್ಕೆ ಬಹಳ ಕೊಡುಗೆ ಇದೆ ಎಂದು ಹೇಳಿದರು.
#Siddaramaiah #KSEshwarappa #CMofKarnataka #Congress












