ಬಿಗ್ ಬಾಸ್ ಕನ್ನಡ ಸೀಸನ್ 11 (Bigboss Kannada season 11 ) ಆರಂಭವಾಗಿ ಕೇವಲ ಎರಡು ವಾರಗಳು ಮಾತ್ರ ಕಳೆದಿದ್ದು, ಈಗಾಗಲೇ ಒಂದಿಲ್ಲೊಂದು ವಿಚಾರಕ್ಕೆ ಈ ಬಾರಿಯ ಬಿಗ್ ಬಾಸ್ ಬಾರಿ ಸದ್ದು ಮಾಡ್ತಿದೆ. ಅಂತೆಯೇ ಇತ್ತೀಚಿನ ಅಕ್ಟೋಬರ್ 15 ಮತ್ತು 16 ರ ಎಪಿಸೋಡ್ ನಲ್ಲಿ ಬಿಗ್ ಬಾಸ್ ಮನೆ ಅಕ್ಷರಶಃ ರಣರಂಗವಾಗಿತ್ತು.

ಇಡೀ ಮನೆ ಲಾಯರ್ ಜಗದೀಶ್ (Lawyer Jagadeesh)ವಿರುದ್ಧ ತಿರುಗಿಬಿದ್ದಂತಿದೆ. ಲಾಯರ್ ಜಗದೀಶ್ ಒಂದೆಡೆ ಆದ್ರೆ ಉಳಿದ ಅಷ್ಟೂ ಸದಸ್ಯರು ಮತ್ತೊಂದು ಕಡೆ ಎಂಬಂತಾಗಿದೆ. ಹೀಗಾಗಿ ಮೇಲಿಂದ ಮೇಲೆ ಮನೆಯಲ್ಲಿ ವಿಪರೀತ ಜಗಳಗಳು ನಡೆಯುತ್ತಿವೆ. ಈ ಮಧ್ಯೆ ಜಗಳ ಅತಿರೇಖಕ್ಕೆ ಹೋಗಿ, ಉಗ್ರಂ ಮಂಜು (Ugram manju) ತ್ರಿವಿಕ್ರಮ (Trivikram) ಹಾಗೂ ರಂಜಿತ್ (Ranjit) ಜಗದೀಶ್ ಮೇಲೆ ಕೈ ಮಿಲಾಯಿಸುವ ಹಂತ ತಲುಪಿತ್ತು.
ಈ ವೇಳೆ ಪರಸ್ಪರ ತಳ್ಳಾಟ ನೂಕಾಟ ನಡೆದಿದ್ದು, ಬಹುತೇಕ ಹೊಡೆದಾಡಿಕೊಳ್ಳುವ ಹಂತ ತಲುಪಿದೆ. ಈ ಸಂದರ್ಭದಲ್ಲಿ ಜಗದೀಶ್ ಮತ್ತು ರಂಜಿತ್ ಹೊಡೆದಾಡಿಕೊಂಡಿದ್ದು, ಇಬ್ಬರನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದ್ರೆ ಈ ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. ಕೆಲವು ಬಲ್ಲ ಮೂಲಗಳ ಪ್ರಕಾರ ಜಗದೀಶ್ ಹಾಗೂ ರಂಜಿತ್ ಇನ್ನು ಮನೆಯ ಒಳಗೆ ಇದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದು, ಗುರುವಾರದ ಎಪಿಸೋಡ್ ನಲ್ಲಿ ಕ್ಲ್ಯಾರಿಟಿ ಸಿಗಲಿದೆ.