ಹಲವಾರು ಕ್ರಿಮಿನಲ್ ಪ್ರಕರಣಗಳ ನಿಮಿತ್ತ ಸದ್ಯ ಅಹಮದಾಬಾದ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿರೋ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯ್‌ಗೆ (Lawrence bishnoi) ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra election) ಸ್ಪರ್ಧಿಸಲು ರಾಜಕೀಯ ಪಕ್ಷದಿಂದ ಆಫರ್ ಬಂದಿದೆ.

ಉತ್ತರ ಭಾರತೀಯ ವಿಕಾಸ ಸೇನಾ ಪಕ್ಷದ (vikas sena party) ರಾಷ್ಟ್ರೀಯ ಅಧ್ಯಕ್ಷ ಸುನಿಲ್ ಶುಕ್ಲಾ (Sunil shukla) ಲಾರೆನ್ಸ್ ಬಿಷ್ಟೋಯ್‌ಗೆ ಪತ್ರ ಬರೆದು ಮಹಾರಾಷ್ಟ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಇನ್ನು ಮುಂಬೈನಲ್ಲಿ ಚುನಾವಣೆಗೆ ಸ್ಪರ್ಧಿಸಲು ಉತ್ತರ ಭಾರತದ ವಿಕಾಸ ಸೇನೆಯ 4 ಅಭ್ಯರ್ಥಿಗಳ ಹೆಸರನ್ನ ಅಂತಿಮಗೊಳಿಸಲಾಗಿದೆ.
ಇನ್ನು ಲಾರೆನ್ಸ್ ಬಿಷ್ಟೋಯ್ ಒಪ್ಪಿಗೆಯೊಂದಿಗೆ ಇನ್ನೂ 50 ಅಭ್ಯರ್ಥಿಗಳ ಪಟ್ಟಿಯನ್ನ ಶೀಘ್ರದಲ್ಲೇ ಪ್ರಕಟಿಸಲಾಗತ್ತೆ ಅಂತ ಹೇಳಲಾಗ್ತಿದೆ. ಮುಂಬೈನಲ್ಲಿ ಎನ್‌ಸಿಪಿ ಮುಖಂಡ ಬಾಬಾ ಸಿದ್ಧಿಕಿ (Baba siddique) ಹತ್ಯೆಯ ನಂತರ ಲಾರೆನ್ಸ್ ಬಿಷ್ಟೋಯ್ ದೇಶವ್ಯಾಪಿ ಪ್ರಚಲಿತಕ್ಕೆ ಬಂದಿದ್ದು, ಸಲ್ಮಾನ್ ಖಾನ್ ಗೆ ಜೀ ಬೆದರಿಕೆಯೊಡ್ಡಿ ಮತ್ತೆ ಮತ್ತೆ ಸುದ್ದಿಯ ಮುನ್ನಲೆಗೆ ಬಂದಿದ್ದಾನೆ. ಇದೀಗ ಈ ಗ್ಯಾಂಗ್ ಸ್ಟಾರ್ ಜೈಲಿನಿಂದಲೇ ಚುನಾಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ.












