ಮಧ್ಯಪ್ರದೇಶದ(Madhyapradesh) ಬಾಬಾ ಮಹಾಕಾಲ ನಗರ ಎಂದೇ ಕರೆಯಲ್ಪಡುವ ಉಜ್ಜಯಿನಿಯಲ್ಲಿ (Ujjaini) ಮೊಹರಂ ಮೆರವಣಿಗೆಯ ವೇಳೆ ಲಾಠಿ ಚಾರ್ಜ್ ನಡೆದಿದ್ದು, ಮೆರವಣಿಗೆ ಪಲ್ಲಕ್ಕಿಯನ್ನು ರಸ್ತೆಯಲ್ಲೇ ಬಿಟ್ಟು ಜನರು ದಿಕ್ಕಾಪಾಲಾಗಿ ಓಡಿದ್ದಾರೆ.

ಈ ಘಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಮಧ್ಯಪ್ರದೇಶದ ಬಾಬಾ ಮಹಾಕಾಲ್ ನಗರವಾದ ಉಜ್ಜಯಿನಿಯಲ್ಲಿ ಮೊಹರಂ ಮೆರವಣಿಗೆ ವೇಳೆ ಪೊಲೀಸರು ಮೆರವಣಿಗೆಗೆ ನಿಗದಿಪಡಿಸಿದ ಮಾರ್ಗದಲ್ಲಿ ಹೋಗದೇ, ಬದಲಿಗೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಒಳಗೆ ಹೋಗಲು ಯತ್ನಿಸಿದ್ದರು.

ಈ ವೇಳೆ ಯಾವುದೇ ಪ್ರಚೋದನೆ ಅಥವಾ ಕೋಮು ಸೂಕ್ಷ್ಮತೆ ಪರಿಸ್ಥಿತಿಗೆ ಅವಕ್ಷ ನೀಡದಂತೆ ಮುನ್ನೆಚ್ಚರಿಕೆ ವಹಿಸುವ ದೃಷ್ಟಿಯಿಂದ ಪೊಲೀಸರು ಕೂಡಲೇ ಜನರ ಮೇಲೆ ಲಾಠಿಚಾರ್ಜ್ ನಡೆಸಿ ಚದುರಿಸಿದ್ದಾರೆ. ಪೊಲೀಸರ ಸೂಚನೆ ಮೀರಿ ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ಮುನ್ನುಗ್ಗಿ ಅತಿರೇಕವಾಗಿ ವರ್ತಿಸಿದ್ದು, ಲಾಠಿ ರುಚಿ ತೋರಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.