ಜಮ್ಮು ಮತ್ತು ಕಾಶ್ಮೀರ: ರಾಂಬನ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ 13 ಮನೆಗಳಿಗೆ ಹಾನಿಯಾಗಿದ್ದು, ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ರಾಂಬನ್-ಸಂಗಲ್ದನ್ ಗೂಲ್ ರಸ್ತೆಯ ಮೇಲಿನ ಭಾಗದಲ್ಲಿ ಗೂಲ್ ತಹಸಿಲ್’ನ ಸಂಗಲ್ದಾನ್’ನಲ್ಲಿರುವ ದುಕ್ಸರ್ ದಲ್ವಾದಲ್ಲಿ ಸುಮಾರು 1 ಚದರ ಕಿಲೋಮೀಟರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಸಂತ್ರಸ್ತ ಕುಟುಂಬಗಳನ್ನು ಟೆಂಟ್’ಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಕಂಬಳಿಗಳು ಮತ್ತು ಪಾತ್ರೆಗಳನ್ನು ಸಹ ಒದಗಿಸಲಾಗಿದೆ. ಸೇನೆಯು ಅವರಿಗೆ ಆಹಾರವನ್ನೂ ನೀಡುತ್ತಿದೆ.
ಭೂಕುಸಿತದಿಂದಾಗಿ 33ಕೆವಿ ವಿದ್ಯುತ್ ಲೈನ್ ಮತ್ತು ನೀರಿನ ಪ್ರಮುಖ ಪೈಪ್’ಲೈನ್’ಗೆ ದೊಡ್ಡ ಅಪಾಯ ಉಂಟಾಗಿದೆ.











