• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
February 15, 2026
in Top Story, ಕರ್ನಾಟಕ, ರಾಜಕೀಯ
0
ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಸಿಎಂ ಡಿ.ಕೆ ಶಿವಕುಮಾರ್
Share on WhatsAppShare on FacebookShare on Telegram

ಬೆಂಗಳೂರು: ಬಡ ಮಕ್ಕಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುವ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕನಸು ನನಸಾಗಿಸಲು ಬಿಡಿಎ ಅಥವಾ ಬಿಎಂಆರ್ ಡಿಎ ವತಿಯಿಂದ ಅಗತ್ಯ ಜಾಗ ಮಂಜೂರು ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್(DCM D.K. Shivakumar) ಭರವಸೆ ನೀಡಿದರು.

ADVERTISEMENT
Dk Shivakumar on HDK: ಹಾವೇರಿ ಸಾಧನಾ ಸಮಾವೇಶದಲ್ಲಿ HDKಗೆ ಡಿಕೆಶಿವಕುಮಾರ್ ಖಡಕ್ ಟಾಂಗ್ #pratidhvani #bjpjds

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಇತ್ತೀಚೆಗೆ ಲಿಂಗೈಕ್ಯರಾದ ಮಾಜಿ ಸಚಿವರಾದ ಡಾ. ಭೀಮಣ್ಮ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಈಶ್ವರ್ ಖಂಡ್ರೆ ಅವರು ನನ್ನನ್ನು ಭೇಟಿ ಮಾಡಿ, ವೀರಶೈವ ಮಹಾಸಭಾ ವತಿಯಿಂದ ಬೆಂಗಳೂರಿನಲ್ಲಿ ಬಡ ಮಕ್ಕಳು, ಹೊರಗಡೆಯಿಂದ ಬಂದ ಮಕ್ಕಳಿಗೆ ಒಂದು ಹಾಸ್ಟೆಲ್ ವ್ಯವಸ್ಥೆ ಆಗಬೇಕು ಎಂಬುದು ನಮ್ಮ ತಂದೆಯವರ ಕನಸಾಗಿತ್ತು. ಅದು ಸಾಧ್ಯವಾಗಿಲ್ಲ. ಅದಕ್ಕೆ ಬೇಕಾದ ಜಾಗ ಒದಗಿಸಿಕೊಡಬೇಕು ಎಂದು ತಿಳಿಸಿದರು.

DK Shivakumar | ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಎಂದು ಡಿಕೆಶಿ ವಿರುದ್ಧ ಆಕ್ರೋಶ #pratidhvani

ಈ ಕೆಲಸವನ್ನು ನಮ್ಮ ಸರ್ಕಾರದ ವತಿಯಿಂದ ಮಾಡಿಕೊಡುತ್ತೇವೆ ಎಂದು ಈ ಭವ್ಯ ಸಭೆಯಲ್ಲಿ ತಿಳಿಸಲು ಬಯಸುತ್ತೇನೆ. ಅವರ ಆಲೋಚನೆ, ಆಚಾರ ವಿಚಾರ ಹೀಗೆ ಮುಂದುವರಿಯಲಿ. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡಿಕೊಂಡು ಹೋಗೋಣ ಎಂದು ತಿಳಿಸಿದರು.

ಇದನ್ನೂ ಓದಿ: Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ ಮಗು ಸಾ***

ಮಾತು ಮುಂದುವರಿಸಿದ ಅವರು, ಭೀಮಣ್ಣ ಖಂಡ್ರೆ ಅವರಿಗೆ ನುಡಿನಮನ ಅರ್ಪಿಸುವ ಸೌಭಾಗ್ಯ ನಮ್ಮೆಲ್ಲರಿಗೂ ಸಿಕ್ಕಿದೆ. ಸರಳತೆ, ಸರ್ವಧರ್ಮ ಸಮುದಾಯದ ನಾಯಕ ಎಂದು ನಾವೆಲ್ಲರೂ ಅವರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಅದೇ ರೀತಿ ನಮ್ಮ ಭೀಮಣ್ಣ ಖಂಡ್ರೆ ಸಾಹೇಬರು ಮಾಡಿದ ಹೋರಾಟವನ್ನು ನಾವಿಂದು ಮೆಲುಕು ಹಾಕುತ್ತಿದ್ದೇವೆ.

Siddaramaiah: ಹಾವೇರಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಬರ್ತಿದ್ದಂತೆ ಜನರ ಕೇಕೆ, ಚಪ್ಪಾಳೆ!

ನಾಲ್ಕು ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಮಾಡಿದ್ದಾರೆ. ಅವರು ಪರಿಷತ್ ಸದಸ್ಯರಾಗಿದ್ದಾಗ ನಾನು ಅವರ ಜತೆಯಲ್ಲಿ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ. ಅವರ ಮಗ ವಿಜಯ್ ಕುಮಾರ್ ಖಂಡ್ರೆ ಅವರು ನನ್ನ ಜೊತೆ ಶಾಸಕರಾಗಿದ್ದರು. ಮತ್ತೊಬ್ಬ ಮಗ ಈಶ್ವರ್ ಖಂಡ್ರೆ ಅವರು ನನ್ನ ಜತೆ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೊಮ್ಮಗ ನಮ್ಮ ಪಕ್ಷದ ಸಂಸದರಾಗಿದ್ದಾರೆ. ಇವರ ಜತೆ ನಾವು ಕೆಲಸ ಮಾಡಿದ್ದೇವೆ. ಅವರು ಬಿಟ್ಟು ಹೋಗಿರುವ ಪರಂಪರೆ ಮುಂದುವರಿಯುತ್ತಿದೆ ಎಂದು ಹೇಳಿದರು.

Tags: Bhimanna KhandreBJPCM SiddaramaiahcongressDCM D.K. ShivakumarEshwar KhandreHostelsKarnatakaKarnataka PoliticsM P Sagar KhandrePoliticsState GovernmentStudents
Previous Post

Nelamangala: ತಾಯಿಯ ಫೋಟೋಶೂಟ್​​ ವೇಳೆ ಮೂರು ವರ್ಷದ ಮಗು ಸಾ***

Next Post

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

Related Posts

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!
ರಾಜಕೀಯ

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

by ಪ್ರತಿಧ್ವನಿ
April 26, 2026
0

ರಾಘವ್ ಚಡ್ಡಾ ಅವರ ರಾಜಕೀಯ ಪಯಣದಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಅವರು ಹೊಸ ರಾಜಕೀಯ ದಾರಿಗೆ ಹೆಜ್ಜೆಯಿಟ್ಟಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಆಮ್ ಆದ್ಮಿ...

Read moreDetails
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
Next Post
Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

Byrati Basavaraj: ಬಿಕ್ಲು ಶಿವ ಕೊ** ಕೇಸ್​​:ಶಾಸಕ ಬೈರತಿ ಬಸವರಾಜ್​​ ಸಿಐಡಿ ಕಸ್ಟಡಿಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada