ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೂಡ ಬಿಡುಗಡೆಯಾಗಿದೆ. ಈ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಅಥಣಿ ವಿಧಾನಸಭೆ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಲಕ್ಷ ಣ ಸವದಿ ಅಸಮಧಾನಗೊಂಡಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡೋದಾಗಿ ಘೋಷಣೆ ಮಾಡಿದರು.

ಬೆಳಗಾವಿಯ ಅಥಣಿಯಲ್ಲಿ ಮಾತ್ನಾಡಿದ ಸವದಿ, ʻಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ. ಆ ಗುರು ನನಗೆ ವಿಷ ಕೊಟ್ಟು ಕುಡಿ ಅಂದ್ರೂ ಕುಡಿಯುತ್ತೇನೆ. ಅವರಿಗೂ ನಾನು ಕ್ಷಮೆ ಕೇಳ್ತೇನೆ. ಅವರು ಹಾಕಿದ ಗೆರೆ ದಾಟ್ತಿದ್ದೀನಿ. ಅವರ ವಿಚಾರಧಾರೆ ದಾಟಿ ಹೋಗ್ತಿರೋದ್ರಿಂದ ಕ್ಷಮೆ ಇರಲಿ. ನಿಮ್ಮ ಅಂತರಾಳದಲ್ಲಿ ನನಗೆ ಆಶೀರ್ವಾದ ಬೇಕು ಅಂತ ಲಕ್ಷಣ ಸವದಿ ಹೇಳಿದರು

ಸೌಜನ್ಯಕ್ಕಾದರೂ ಮೊದಲು ನನ್ನ ಜೊತೆ ಚರ್ಚೆ ಮಾಡಬೇಕಿತ್ತು. ಮುಂದಿನ ದಿನಗಳಲ್ಲಿ ಸಿಎಂ ಆಗಿ, ಪ್ರಧಾನಿ ಆಗುವ ಅವಕಾಶ ಇದೆ. ಪ್ರಧಾನಿ ಆಗಿ ನೋಡುವ ಆಸೆ ಇದೆ. ಅವರು ಈ ರಾಷ್ಟ್ರದ ಪ್ರಧಾನಮಂತ್ರಿ ಆಗಲು ಯಾರು ತಪ್ಪಿಸಲ್ಲ ಅಂದುಕೊಂಡಿದ್ದೇನೆ. ಮೋದಿಗೆ 75 ವರ್ಷ ಆದ ಬಳಿಕ ಅವರಿಗೆ ಅವಕಾಶ ಸಿಗಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ವ್ಯಂಗ್ಯವಾಡಿದರು.

ಬಿಜೆಪಿ ಎಲ್ಲ ಹಿರಿಯರಿಗೆ, ಬಿಎಸ್ ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್ ಸೇರಿ ಎಲ್ಲರಿಗೆ ಅಭಿನಂದನೆ. ನನ್ನಿಂದ ಏನಾದರೂ ತಪ್ಪಾದರೆ ಕ್ಷಮಿಸಿ ನನಗೆ ಹಾರೈಸಿ ಎಂದು ಹೇಳುವೆ. ನನಗೆ ಆಸೆ ಇದೆ, ನನ್ನ ಹಿರಿಯರು ಮತ್ತೆ ಎರಡನೇ ಬಾರಿ ಸಿಎಂ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದಾರೆ. ಅವರಿಗೆ ಎರಡನೇ ಬಾರಿ ಸಿಎಂ ಆಗಲ್ಲ, ಬಹುತೇಕ ಅವರಿಗೆ ಪ್ರಧಾನಿಗೆ ಅವಕಾಶ ಇದೆ ಎಂದು ಪರೋಕ್ಷವಾಗಿ ಬೊಮ್ಮಾಯಿಗೆ ಟಾಂಗ್ ಕೊಟ್ಟರು.