70 ವರ್ಷದ ವೃದ್ಧ ವ್ಯಕ್ತಿಯೊಬ್ಬರು ವಧು ಹುಡುಕಾಟಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.
70 ವಯಸ್ಸಾದರೆ ಸಾಕು ಹಲವರು ಊರು ಹೋಗು ಅನ್ನತ್ತೆ..ಕಾಡು ಬಾ ಅನ್ನತ್ತೆ ಅಂತಾರೆ. ಆದರೆ, ಈ ವ್ಯಕ್ತಿ ಪತ್ನಿ ಸಾವನ್ನಪ್ಪಿದ ನಂತರ ವಧು ಹುಡುಕಾಟ ನಡೆಸುತ್ತಲೇ ಇದ್ದಾರೆ. ಸಂಗಾತಿಯನ್ನು ಪಡೆಯಲು ಲಕ್ಷ ಲಕ್ಷ ಖರ್ಚು ಮಾಡಿ ಜಾಹೀರಾತು ನೀಡಿದ್ದಾರೆ. ಅಲ್ ಗಿಲ್ಬರ್ಟಿ ಎಂಬ ವೃದ್ಧರೇ ಈ ರೀತಿ ಖರ್ಚು ಮಾಡಿದವರು. ಒಂಟಿತನದಿಂದ ಬೇಸತ್ತು, ಮದುವೆಗೆ ಹುಡುಗಿ ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ.
ಗಿಲ್ಬರ್ಟಿ ಅವರ 20 ಅಡಿ ಎತ್ತರದ ಜಾಹೀರಾತು ಫಲಕವನ್ನು ರಸ್ತೆಯಲ್ಲಿ ಹಾಕಲಾಗಿದೆ. ದರಲ್ಲಿ ಮದುವೆಯಾಗಲು ವಧುವನ್ನು ಹುಡುಕುವುದಾಗಿ ಬರೆಯಲಾಗಿದೆ. ಆದರೆ ಈ ಜಾಹೀರಾತು ನೀಡಿದ ಕೇವಲ ಎರಡು ವಾರಗಳಲ್ಲಿಯೇ 400ಕ್ಕೂ ಅಧಿಕ ಕರೆಗಳು ಬಂದಿವೆ. 40-50 ಇಮೇಲ್ಗಳು ಕೂಡ ಬಂದಿದೆ. ಈ ಪೈಕಿ ಓರ್ವ ವಧುವನ್ನು ಮಾಡಿಕೊಳ್ಳುವುದಾಗಿ ಅವರು ಹೇಳಿಕೊಂಡಿದ್ದಾರೆ.
ಗಿಲ್ಬರ್ಟಿ, ಬುದ್ಧಿವಂತ, ನಿಷ್ಠಾವಂತ ಮತ್ತು ಪ್ರಾಮಾಣಿಕ ಸಂಗಾತಿ ಬೇಕು. ಆಕೆ ನನ್ನ ಮಾತು ನೋವುಗಳನ್ನು ಕೇಳುವ ಮತ್ತು ಮುಕ್ತ ಮನಸ್ಸಿನಿಂದ ಮಾತನ್ನು ಕೇಳುವ ಸಂಗಾತಿಯನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.