ಕಳೆದ ಭಾನುವಾರ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹತ್ತಿಸಿ ನಾಲ್ಕು ಜನ ರೈತರ ಸಾವಿಗೆ ಕಾರಣವಾಗಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಶನಿವಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ. ಘಟನೆಯ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿದ್ದು ಮುಖ್ಯ ಆರೋಪಿ ಆಶೀಶ್ ಮಿಶ್ರಾ ಇಂದು ಪೊಲಿಸರ ಮುಂದೆ ಹಾಜರಾಗಿದ್ದಾನೆ. ಕೃತ್ಯ ನಡೆದು ಏಳು ದಿನಗಳ ನಂತರ ದೇಶಾದಂತ್ಯ ಘಟನೆ ಸಂಬಂಧ ತೀವ್ರ ವಿರೋಧ ವ್ಯಕ್ತವಾಗಿ ಸುಪ್ರೀಂ ಕೋರ್ಟ್ ಉ.ಪ್ರ.ಸರ್ಕಾರಕ್ಕೆ ರೈತರ ಸಾವಿನ ಕುರಿತ ತನಿಖೆ ಸಂಬಂಧ ಚಾಟಿ ಬೀಸಿದ ನಂತರ ಮಂತ್ರಿ ಮಗ ಠಾಣೆಗೆ ಬಂದು ಹಾಜರಾಗಿದ್ದಾನೆ.
ಪೊಲೀಸರು ಘಟನೆ ಕುರಿತು ಆರೋಪಿಯ ವಿಚಾರಣೆ ನಡೆಸುತ್ತಿದ್ದು ವಿಚಾರಣೆ ಮುಗಿದ ನಂತರ ಘಟನೆಯ ಪೊಲೀಸರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಆಶೀಶ್ ಮಿಶ್ರಾಗಾಗಿ ಪೊಲೀಸರು ದೇಶಾದ್ಯಂತ ಉ.ಪ್ರ.ಪೊಲೀಸರು ಬಂಧನಕ್ಕಾಗಿ ಬಲೆ ಬೀಸಿದ್ದರು. ಘಟನೆಯ ಸಂಬಂಧ ಆಶೀಶ್ ವಿರುದ್ದ ಪೊಲಿಸರು ಸಮನ್ಸ್ ಜಾರಿ ಮಾಡಿದರು ಸಹ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ಕಾರ್ಯವೈಖರಿಗೆ ಸುಪ್ರೀಂಕೋರ್ಟ್ ಸಹಿತ ದೇಶಾದ್ಯಂತ ತೀವ್ರ ಅಸಮಾಧಾನ ಹೊರಹಾಕಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ʻʻಘಟನೆಯ ಸಂಬಂಧ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು ಸಮಿತಿಯು ಎಲ್ಲಾ ಆಯಾಮಗಳಲ್ಲಿಯು ತನಿಖೆ ನಡೆಸುತ್ತಿದ್ದೆ. ಕಾನೂನು ಎಲ್ಲರಿಗು ಒಂದೆ ಎಲ್ಲರು ಕಾನೂನಿನ ಮುಂದೆ ಸಮಾನರೆ ಯಾರೇ ಆಗಿರಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಸರ್ಕಾರವೇ ಆರೋಪಿ ಅಶೀಶ್ ಮಿಶ್ರಾನನ್ನು ರಕ್ಷಿಸುತ್ತಿದ್ದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಘಟನೆಯ ಸಂಬಂಧ ಅಂತಹ ಯಾವುದಾದರು ವಿಡಿಯೋ ಕುರುಹುಗಳು ಯಾರ ಬಳಿ ಇದ್ದರೆ, ಅಂತಹವರು ಸರ್ಕಾರ ನೀಡಿರುವ ದೂರವಾಣಿ ಸಂಖ್ಯೆಯ ವಾಟ್ಸ್‌ಅಪ್‌ಗೆ ಅಪ್ಲೋಡ್ ಮಾಡಬಹುದು ಎಂದು ಹೇಳಿದ್ದಾರೆ. ಆಡಳಿತ ಪಕ್ಷದವರಾಗಲಿ, ವಿರೋಧ ಪಕ್ಷದವರೇ ಆಗಲಿ ಅಥವಾ ಅವರು ಯಾವುದೇ ಉನ್ನತ ಹುದ್ದೆಯಲ್ಲಿದ್ದರು ಕ್ರಮ ಜರುಗಿಸಲು ನಾವು ಹಿಂಜರೆಯುವುದಿಲ್ಲ ಲಖೀಂಪುರ್ ಖೇರಿ ಘಟನೆ ಸಂಬಂಧ ಸರ್ಕಾರ ಕಠಿಣ ಕ್ರಮ ಜರುಗಿಸಲು ಹಿಂಜರೆಯುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.