
ಕುಶಾಲನಗರ:ಕುತೂಹಲ ಮೂಡಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಆಗಷ್ಟ್ 18 ರಂದು ನಿಗದಿಯಾಗಿತ್ತು ಅದರಂತೆ ಚುನಾವಣಾಧಿಕಾರಿಗಳಾದ ತಾಲ್ಲೂಕು ತಹಶಿಲ್ದಾರ್ ಕಿರಣ್ ಗೌರಯ್ಯ ಸಕಲ ಸಿದ್ದತೆ ಕೈಗೊಂಡಿದರು ನಾಮಪತ್ರ ಸಲ್ಲಿಸುವ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷೆ ಸ್ಥಾನಕ್ಕೆ ಜಯಲಕ್ಷ್ಮಿ ಚಂದ್ರು.ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟಲಕ್ಷ್ಮಿ ನಾಮಪತ್ರವನ್ನು ಸಲ್ಲಿಸಿದರೆ ಬಿಜೆಪಿ ಪಕ್ಷದಿಂದ ಅಧ್ಯಕ್ಷೆ ಸ್ಥಾನಕ್ಕೆ ರೂಪಾ ಉಮಾಶಂಕರ್ಉ.
ಪಾಧ್ಯಕ್ಷ ಸ್ಥಾನಕ್ಕೆ ಬಿ.ಜಯವರ್ಧನ್ ತಮ್ಮ ಪಕ್ಷದ ನಾಯಕರ ಜೊತೆಯಲ್ಲಿ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು.ಹೈಕೋರ್ಟ್ ತಡೆಯಾಜ್ಞೆ : ಕುಶಾಲನಗರ ತಾಲ್ಲೂಕು ಘೋಷಣೆ ಆದ ನಂತರ ಮುಳ್ಳುಸೋಗೆ ಪಂಚಾಯತಿಯನ್ನು ಒಳಗೊಂಡಂತೆ ಕುಶಾಲನಗರ ಸುತ್ತ ಮುತ್ತ ಆನೇಕ ಕಂದಾಯ ಗ್ರಾಮಗಳನ್ನು ಸೇರಿಸಿ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು .
ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಚುನಾವಣೆ ದಿನಾಂಕವನ್ನು ನಿಗದಿ ಮಾಡಿ ಪುರಸಭೆಯನ್ನು ಮತ್ತೆ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಎಂದು ಅಧಿಕೃತ ಘೋಷಿಸಿತು ಇದನ್ನು ಪ್ರಶ್ನೆ ಮಾಡಿ ಮುಳ್ಳುಸೋಗೆ ಪಂಚಾಯತಿ ಮಾಜಿ ಅಧ್ಯಕ್ಷ ಎಂ ಶಿವಾನಂದ ಚುನಾವಣೆಯನ್ನು ತಡೆ ಹಿಡಿಯುವಂತೆ ನ್ಯಾಯಾಲಯದ ಮೊರೆ ಹೋದರು
ಇವರ ಅರ್ಜಿ ಅನ್ವಯ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು ಇದರ ಪ್ರತಿಯನ್ನು ವಕೀಲರು ಚುನಾವಣಾಧಿಕಾರಿಗಳಿಗೆ ತಲುಪಿಸಿದರು ಇದರ ಅನ್ವಯ ಚುನಾವಣಾಧಿಕಾರಿಗಳು ಪಟ್ಟಣ ಪಂಚಾಯತಿ ಸರ್ವ ಸದಸ್ಯರ ಸಮ್ಮುಖದಲ್ಲಿ ನ್ಯಾಯಾಲಯದ ಪ್ರತಿಯನ್ನು ಓದಿ ತಿಳಿಸುವ ಮೂಲಕ ಇಂದು ನಡೆಯ ಬೇಕಾದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಒಳ ಜಗಳ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿತ್ತು : ಕಳೆದ ಬಾರಿ ನಡೆದ ವಿಧಾನ ಸಭಾ ಚುನಾವಣೆಯ ನಂತರ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಎರಡು ಭಾಗವಾಗಿದೆ ಒಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಪರ ಇನ್ನೊಂದು ವಿರೋಧ .ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಘೋಷಣೆ ಆದ ನಂತರ ಮಾಜಿ ಶಾಸಕರು ಆಗಮಿಸಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗೆ ಬೇಕಾದವರ ಹೆಸರನ್ನು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸೂಚಿಸಿದರು ಇದರಿಂದ ಸಿಡಿದೆದ್ದ ಒಂದು ಬಣ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ತೊಡೆ ತಟ್ಟಿದರು ಅಸಮಾಧಾನ ಸ್ಪೋಟಗೊಂಡಿತು ಬಿಜೆಪಿ ಅಸಮಾದನ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿ ರೂಪಿಸಿಕೊಳ್ಳುವುದರಲ್ಲಿ ಸ್ಥಳೀಯ ನಾಯಕರು ಯಶಸ್ವಿಯಾದರು.
ಪಟ್ಟಣ ಪಂಚಾಯತಿ ಚುನಾವಣೆ ಹಾಗೂ ಚುನಾಯಿತರ ಅಂಕಿ ಅಂಶಗಳು : 2018 ಆಕ್ಟೋಬರ್ 28 ರಂದು ಕುಶಾಲನಗರ ಪಟ್ಟಣ ಪಂಚಾಯತಿ 16 ವಾರ್ಡ ಗಳಿಗೆ ಚುನಾವಣೆ ನಡೆದು ಆಕ್ಟೋಬರ್ 30 ರಂದು ಫಲಿತಾಂಶ ಹೊರಬಿಳುತ್ತದೆ ಇದರಲ್ಲಿ .ಬಿಜೆಪಿ ಪಕ್ಷದಿಂದ 6 ಸದಸ್ಯರು. ಕಾಂಗ್ರೆಸ್ ಪಕ್ಷದಿಂದ 6 ಹಾಗೂ ಜೆಡಿಎಸ್ ಪಕ್ಷದಿಂದ 4 ಸದಸ್ಯರು ಆಯ್ಕೆಯಾಗುತ್ತಾರೆ .
ವಿವಿಧ ರೀತಿಯ ಕಾನೂನು ಅಡೆ ತಡೆಗಳಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2020 ನವೆಂಬರ್ ತಿಂಗಳಲ್ಲಿ ಸರ್ಕಾರ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಘೋಷಣೆ ಆದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒಟ್ಟುಗೂಡಿ ಅಧ್ಯಕ್ಷರಾಗಿ ಬಿ.ಜಯವರ್ಧನ್ ಉಪಾಧ್ಯಕ್ಷೆಯಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಸುರಯ ಭಾನು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಾರೆ.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಕೈ ಪಾಳಯದಲ್ಲಿ : ಕಳೆದ ಬಾರಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆಯಲ್ಲಿ ಅಧಿಕಾರ ಹಂಚಿಕೊಂಡ ಹಿನ್ನೆಲೆಯಲ್ಲಿ ಹಾಗೂ .ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಜೆಡಿಎಸ್ ಬಿಜೆಪಿ ಜೊತೆಯಲ್ಲಿ ಮೈತ್ರಿ ಆಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಬಿಜೆಪಿ ಪಕ್ಷಕ್ಕೆ ಬಾರಿ ಮುಖ ಭಂಗವಾಗಿದೆ.
ಜೆಡಿಎಸ್ ಪಕ್ಷದಿಂದ ಗೆದ್ದ ನಾಲ್ಕು ಪಟ್ಟಣ ಪಂಚಾಯತಿ ಸದಸ್ಯರು ನೇರವಾಗಿ ಕಾಂಗ್ರೆಸ್ ನಾಯಕರ ಜೊತೆಯಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ನಾವು ಈ ಬಾರಿ ಮತವನ್ನು ನೀಡುವುದು ಎಂದು ತಿಳಿಸಿದರು. ಬಹುಶ ನ್ಯಾಯಾಲಯದ ತಡೆಯಾಜ್ಞೆ ಬಿಜೆಪಿ ಪಕ್ಷದ ಮುಖಭಂಗಕ್ಕೆ ತಡೆಗೋಡೆಯಾಗಿದೆ .









