ಕಳೆದ ಎರಡು ದಿನಗಳಿಂದ ತಮ್ಮ ಮೇಲೆ ಕೇಳಿಬರುತ್ತಿರುವ ಆರೋಪಗಳಿಗೆ ಡಿಸಿಎಂ (Dcm) ಡಿಕೆ ಶಿವಕುಮಾರ್ (DK Shivakumar) ಇಂದು ಪ್ರತಿಕ್ರಿಯಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ (Chikkamagalur) ಈ ಬಗ್ಗೆ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ (HD kumaraswamy) ಟಾಂಗ್ ಕೊಟ್ರು.
ಪೆನ್ಡ್ರೈವ್ (pendrive) ಹಂಚಿಕೆ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿಗೆ ನನ್ನ ರಾಜೀನಾಮೆ ಬೇಕಂತೆ, ಕೊಡೋಣ ರಾಜೀನಾಮೆ (Resignation) ಎಂದು ವಂಗ್ಯವಾಡಿದ್ರು.
ಇನ್ನು ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲ್ (King of blakmail) ಎಂದು ಆರೋಪಿಸಿದ್ರು. ಎಲ್ಲಾ ಆಫೀಸರ್ಸ್ಗೆ ಹೆದರಿಸುತ್ತಿದ್ದಾರೆ.ರೇವಣ್ಣ ಕುಟುಂಬಕ್ಕೂ ನಮಗೂ ಸಂಭಂಧವಿಲ್ಲ ಎಂದು ಅವರೇ ಹೇಳಿದ್ದಾರೆ. ಇನ್ಯಾಕೆ ಉರಿ ಮಾಡಿಕೊಳ್ತಿದ್ದಾರೆ. ಇವರು ಲಾಯರ್ರಾ (Lawyer), ಜಡ್ಡಾ (Judge) ತೀರ್ಪು ಹೇಳೋಕೆ. ಹೋಗಿ ಕೋರ್ಟಿನಲ್ಲಿ ವಾದ ಮಾಡಲಿ ಎಂದು ಕಿಡಿಕಾರಿದ್ರು.