ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮದ್ದೂರು ಶಾಸಕ ಕದಲೂರು ಉದಯ್ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರು ಕೊಡುವ ಕಾಲ ಬಂದಿದೆ.ಕುಮಾರಸ್ವಾಮಿ ಏನು ಸಾಚಾ ಅಲ್ಲ. ಕುಮಾರಸ್ವಾಮಿ, ಪ್ರಜ್ವಲ್ ರೀತಿ ಪರಿಸ್ಥಿತಿ ಎದುರಿಸಲಿದ್ದಾರೆ.ಇಷ್ಟು ದಿನ ಯಾರು ಬಂದು ದೂರು ಕೊಡಲು ಧೈರ್ಯ ಮಾಡಿರಲಿಲ್ಲ.ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯ ಮಾಡಿರುವ ಬಗ್ಗೆ ಕೇಳಿದ್ದೀವಿ.
ರಾಧಿಕಾ ಅವ್ರನ್ನ ಪತ್ನಿ ರೀತಿ ಕಾಣುತ್ತಿದ್ದಾರಾ?ಈ ರೀತಿ ಬಹಳಷ್ಟು ನಡೆದಿರಬಹುದು.ಅವರ ಆಪ್ತರೆ ಹಲವಾರು ಬಾರಿ ಹೇಳಿದ್ದಾರೆ.
ಕುಮಾರಸ್ವಾಮಿ ಏನು ಸಾಚಾ ಅಲ್ಲ.ಯಾರಾದರೂ ದೂರು ಕೊಟ್ಟರೆ ಸರ್ಕಾರ ತನಿಖೆ ಮಾಡಲಿದೆ.ಪೆನ್ಡ್ರೈವ್ ಪ್ರಕರಣ ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಧೈರ್ಯ ಮಾಡಲಿದ್ದಾರೆ.ಮುಂದಿನ ದಿನಗಳಲ್ಲಿ ರೇವಣ್ಣನಿಗೆ ಆಗಿರುವ ಪರಿಸ್ಥಿತಿ ಕುಮಾರಸ್ವಾಮಿಗೂ ಬರಬಹುದು ಅಂತ ಹೇಳಿದ್ರು.ಕುಮಾರಸ್ವಾಮಿಗೆ ಎರಡು ನಾಲಿಗೆ ಎಂಬುದು ಸಾಬೀತಾಗಿದೆ. ಕುಮಾರಸ್ವಾಮಿ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ.ಮುಂದೆ ಕುಮಾರಸ್ವಾಮಿ ವಿರುದ್ಧವೂ ಮಹಿಳೆಯರು ದೂರು ಕೊಡ್ತಾರೆ ಅಂತ ಶಾಸಕ ಕದಲೂರು ಉದಯ್ ತಿಳಿಸಿದ್ರು.