
ಆಣೆ ಮಾಡಲು ನನ್ನ ಜೊತೆಯೇ ಬರಬೇಕೆಂದು ನಾನು ಹೇಳಿಲ್ಲ.
ಧರ್ಮಸ್ಥಳದ ಮಂಜುನಾಥನ ಹೆಸರು ಹೇಳಿ ಅವರು ಏನು ಹೇಳ್ತಾರೆ ಹೇಳಲಿ.
ಅದಕ್ಕಿಂತ ಹೆಚ್ಚು ಆಣೆ ಏನು ಇಲ್ಲ.
ಅವರು ಹಾಗೆ ಹೇಳಿದ್ರೆ ನಾನು ಬದ್ಧನಾಗುತ್ತೆನೆ.
ಕುಮಾರಸ್ವಾಮಿ ಅವರು ಹಿಟ್ ಆಂಡ್ ರನ್ ರೀತಿ.
ಮಾಜಿ ಸಿಎಂ, ಕೇಂದ್ರ ಸಚಿವರು ಗೌರವಯುತವಾಗಿ ನಡೆದುಕೊಳ್ಳಬೇಕು.
ಇವರೇಲ್ಲಾ ನನ್ನ ಮಗನನ್ನು ಸಿಎಂ ಮಾಡಿ ಅಡ್ಡದಾರಿಗೆ ಎಳೆದರು ಅಂತಾ ದೇವೇಗೌಡರು ಹೇಳ್ತಾ ಇದ್ರು.
ಇವರು ನೋಡಿದ್ರೆ ಹೀಗೆ ಹೇಳ್ತಾರೆ.

ಆಗಿದ್ರೆ ನಾವು ಎಳೆ ಮಕ್ಕಳ ಹಾಲು ಕುಡಿತಾ ಇದ್ವಾ?.
ಅಧಿಕಾರ ಅನುಭವಿಸುವಾಗ ಚನ್ನಾಗಿ ಇತ್ತು, ಈಗ ಚನ್ನಾಗಿ ಇಲ್ವಾ.
ಕುಮಾರಸ್ವಾಮಿಯನ್ನು ನೋಡಿ ಸಾಕಾಗಿದೆ.
ಕುಮಾರಸ್ವಾಮಿ ಸಿಎಂ ಆಗಲು ನಮ್ಮ ಮುಂದೆ ಕೈ ಕಟ್ಟಿಕೊಂಡು ನಿಂತಿದ್ರು.
ನಾವು ನಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಕೇಳಿದ್ದು ನಮ್ಮ ಹಕ್ಕು.
ನನಗೆ ಅರ್ಹತೆ ಇತ್ತು ಅದಕ್ಕೆ ಸಚಿವ ಸ್ಥಾನ ಕೊಟ್ಟಿದ್ರು.
ದೇವೇಗೌಡರು, ಸಿದ್ದರಾಮಯ್ಯ, ಎಂಪಿ ಪ್ರಕಾಶ್, ಸಿಂಧ್ಯಾ ಎಲ್ಲರೂ ಸೇರಿ ಮಂತ್ರಿ ಮಾಡಿದ್ರು.
ಕುಮಾರಸ್ವಾಮಿ ಸಿಎಂ ಮಾಡುವಾಗ ದೇವೇಗೌಡರು, ರೇವಣ್ಣ, ಸಿದ್ದರಾಮಯ್ಯ, ಬಚ್ಚೇಗೌಡ ಯಾರು ಇರಲಿಲ್ಲ.
ಆಗ ಕುಮಾರಸ್ವಾಮಿ ಜೊತೆ ಇದ್ದಿದ್ದು ಚಲುವರಾಯಸ್ವಾಮಿ ಸ್ನೇಹಿತರೆ.
ನನ್ನ ಮಂತ್ರಿ ಮಾಡಲು 10 ಜನ ಇದ್ರು ಇವನನ್ನಾ ಸಿಎಂ ಮಾಡಲು ನಾನು ನನ್ನ ಸ್ನೇಹಿತರೇ ಇದ್ದಿದ್ದು.
ಕುಮಾರಸ್ವಾಮಿ ಅವರಷ್ಟು ಮನೆಗಳನ್ನು ಯಾರು ಹಾಳು ಮಾಡಿಲ್ಲ.
ಸದನದಲ್ಲಿ ಅವರು ತಪ್ಪು ಒಪ್ಪಿಕೊಂಡ್ರೆ ತಪ್ಪು ಒಪ್ಪಿಗೆನಾ.

ತಪ್ಪು ಎಲ್ಲಿ ಒಪ್ಪಿಕೊಂಡ್ರು ತಪ್ಪೆ.
ನನ್ನ ಕುಮಾರಸ್ವಾಮಿ ಕೆರಳಿಸೋಕೆ ಆಗಲ್ಲ.
ನಾನು ಪ್ರಾಮಾಣಿಕವಾಗಿ ಇದ್ದೇನೆ, ನನ್ನಿಂದ ಕುಮಾರಸ್ವಾಮಿಗೆ ಸಹಾಯವಾಗಿದೆ.
ನನ್ನಿಂದ ಕುಮಾರಸ್ವಾಮಿಗೆ ಅನ್ಯಾಯವಾಗಿದೆ.
ದೇವರು ಕುಮಾರಸ್ವಾಮಿ ಅವರನ್ನಾ ಚನ್ನಾಗಿ ಆರೋಗ್ಯವಾಗಿ ಇಟ್ಟಿರಲಿ.
ಅವರ ರೀತಿ ನಾವು ಕೆಟ್ಟದನ್ನು ಬಯಸಲ್ಲಾ.
ಸದನದಲ್ಲಿ ನಾನು ಸಿಎಂ ಆಗಲು ಚಲುವರಾಯಸ್ವಾಮಿ ಅವರ ಸ್ನೇಹಿತರು ಕಾರಣ ಎಂದು ಹೇಳಿದ್ದಾರೆ.
ಧರ್ಮಸ್ಥಳದ ಹೆಸರು ಹೇಳಿ ಇವರು ಯಾರು ಕಾರಣ ಅಲ್ಲಾ ಎಂದು ಹೇಳಲಿ.
ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳಲು ಏನು ಇಲ್ಲ.

ಅವನ ಕ್ಯಾರೆಕ್ಟರ್ ಏನು ಅಂತಾ ಎಲ್ಲರಿಗೂ ಗೊತ್ತಿರೋ ವಿಚಾರ.
ಇನ್ನೊಬ್ಬರ ಕ್ಯಾರೆಕ್ಟರ್ ಬಗ್ಗೆ ಮಾತನಾಡುವ ಕಸುಬು ನನ್ನದಲ್ಲ.
ನನ್ನ ಬಗ್ಗೆ ಏನಿದೆ ಅದನ್ನು ಅವರು ಹೇಳಲಿ.
ನಾನು ಯಾರ ವೈಯಕ್ತಿಕ ಕ್ಯಾರೆಕ್ಟರ್ ಬಗ್ಗೆ ಹೇಳಿಲ್ಲ.
ನಾನು ಹೇಳಿದ್ದು ಕುಮಾರಸ್ವಾಮಿ ರಾತ್ರಿ ತಡವಾಗಿ ಏಕೆ ಹೋಗ್ತಾ ಇದ್ರು ಅಂತಾ.
ಅವರೇನು ನನ್ನಂದ ತಡವಾಗಿ ಹೋಗ್ತಾ ಇರಲಿಲ್ಲ.
ಯಾಕೆ ಅಂತಾ ಅವರೆ ಸ್ಪಷ್ಟಪಡಿಸಲಿ.
ನನಗೆ ಸಂಸ್ಕಾರ ಗೌರವ ಇದೆ.
ಅವರು ಬಾಯಿಗೆ ಏನು ಬರುತ್ತೆ ಅದನ್ನೇ ಮಾತಾಡುತ್ತಾರೆ.
ಇವೆಲ್ಲಾ ಹೆಚ್ಚು ದಿವಸ ನಡೆಯಲ್ಲ.