ರಾಜ್ಯ ರಾಜಕಾರಣದಲ್ಲಿ ಹಲ್ಚಲ್ ಎಬ್ಬಿಸಿರುವ ವಿಡಿಯೋ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ರೀತಿಯಲ್ಲಿ ಡಿಕೆ ಶಿವಕುಮಾರ್ ಕೆಲಸ ಮಾಡಿದ್ದಾರೆ. ಆಮಿಷ ಒಡ್ಡಿದ್ದಾರೆ ಎಂದು ನಿನ್ನೆ ವಕೀಲ ಹಾಗು ಬಿಜೆಪಿ ನಾಯಕ ದೇವರಾಜೇಗೌಡ ಆರೋಪ ಮಾಡಿದ್ದರು. ಆದರೆ ಅದೆಲ್ಲಾ ಸುಳ್ಳು ಆರೋಪ, ಸತ್ಯಾಂಶವಿಲ್ಲ ಎಂದು ಡಿ.ಕೆ ಶಿವಕುಮಾರ್ ವಿಡಿಯೋ ಸಂದೆಶದಲ್ಲಿ ಹೇಳಿದ್ದರು. ಆ ಬಳಿಕ ಇಂದು ಮಾಜಿ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇತ್ತೀಚಿಗೆ ರಾಜ್ಯದಲ್ಲಿ ನಡೆದಿರುವುದು ಅತ್ಯಂತ ಕೆಟ್ಟ ಬೆಳವಣಿಗೆ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕೊನೆಯ ಹಂತ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 21ರಂದು ಪೆನ್ ಡ್ರೈವ್ ಅನ್ನು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಸರ್ಕ್ಯೂಲೇಶನ್ ಮಾಡಿದ್ದಾರೆ. ಹಾಸನ, ಬೆಂಗಳೂರು ಗ್ರಾಮಾಂತರದಲ್ಲೂ ಪೆನ್ಡ್ರೈವ್ ಹಂಚಿದ್ದಾರೆ. ಹಾಸನದ ಜೆಡಿಎಸ್ ಅಭ್ಯರ್ಥಿಯನ್ನು ಈಗ ನಾನು ಮೈತ್ರಿ ಅಭ್ಯರ್ಥಿ ಅನ್ನಲ್ಲ, ಏಪ್ರಿಲ್ 21ರಂದು ರಾತ್ರಿ 8 ಗಂಟೆಗೆ ಪ್ರಜ್ವಲ್ ರೇವಣ್ಣ ವಿಡಿಯೋ ನೋಡಲು ಗ್ರೂಪ್ಗೆ ಜಾಯಿನ್ ಆಗಿ, ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಲಾಗುತ್ತೆ ಅನ್ನೋ ಸಂದೇಶ ಹರಿದಾಡಿತ್ತು.
ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ, ಈ ನೆಲದ ಕಾನೂನಿನಲ್ಲಿ ಕಠಿಣ ಶಿಕ್ಷೆ ಆಗಲಿ ಎಂದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಈ ನಿರ್ಧಾರದಲ್ಲಿ ಯಾವುದೇ ರಾಜಿ ಇಲ್ಲ, ರಕ್ಷಣೆ ಕೊಡುವಂತ ಪ್ರಶ್ನೆಯೂ ಇಲ್ಲ. ವಿಡಿಯೋ ರಿಲೀಸ್ಗೆ ಕ್ಷಣಗಣನೆ ಅಂತ ಹೇಳಿರೋದು ನವಿನ್ ಗೌಡ. ನಮ್ಮ ಅಭ್ಯರ್ಥಿ ಪೋಲಿಂಗ್ ಏಜೆಂಟ್ ನಾಲ್ಕು ಜನರ ಮೇಲೆ ದೂರು ನೀಡಿದ್ದಾರೆ. ಅದ್ರೆ ಈ ಕ್ಷಣದವರೆಗೂ ಅವರ ಮೇಲೆ ಕ್ರಮ ಆಗಿಲ್ಲ. ಈ ದೂರು ಸರ್ಕಾರದ ಗಮನಕ್ಕೆ ಹೋಗಿದೆ, ಚುನಾವಣಾ ಅಧಿಕಾರಿಗಳ ಗಮನಕ್ಕೂ ಹೋಗಿದೆ ಆದರೂ ಕ್ರಮವಿಲ್ಲ ಎಂದಿದ್ದಾರೆ.
ರಾಜ್ಯಾದ್ಯಂತ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿಕೆ ಅಂತ ಲೋಕಲ್ ಪತ್ರಿಗಳಲ್ಲಿ ಬಂದಿದೆ. ಕಂಪ್ಲೈಟ್ ಕೊಟ್ಟ ನಂತ್ರ ಏನೂ ಆ್ಯಕ್ಷನ್ ಆಗಿಲ್ಲ. ಯಾರಾದ್ರು ಕಾರ್ಯಕರ್ತರು ಒಂದು ಪೋಸ್ಟ್ ಮಾಡಿದ್ರೆ ತೀರಾ ತರಾತುರಿಯಲ್ಲಿ ಮನೆ ಸರ್ಚ್ ಮಾಡಿ ಸ್ಟೇಷನ್ಗೆ ಕರ್ಕೊಂಡ್ ಹೋಗಿ ಕೂರಿಸ್ತಾರೆ. ಅದ್ರೆ ಈ ಪ್ರಕರಣದಲ್ಲಿ ಇನ್ನೂ ಏನು ಕ್ರಮ ಆಗಿಲ್ಲ. ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿಗಳು ನೂರು ಬಾರಿ ಹೇಳಿದ್ದಾರೆ. ಜೆಡಿಎಸ್ ಪಕ್ಷ, ಕುಮಾರಸ್ವಾಮಿ ಗೆಲ್ಲಲ್ಲ ಅಂತ ಪದೇ ಪದೇ ಹೇಳಿದ್ದಾರೆ. ಇವರು ಅಷ್ಟು ಧೈರ್ಯವಾಗಿ ಹೇಳಬೇಕಾದ್ರೆ, ಯಾರ್ಯಾರು ಇದಲ್ಲಿ ಪಾಲುದಾರರಿದ್ದಾರೆ ಅನ್ನೋದು ಗೊತ್ತಾಗಬೇಕು ಎಂದಿದ್ದಾರೆ.
ಹೆಣ್ಣು ಮಕ್ಕಳನ್ನು ಕರ್ಕೊಂಡ್ ಬಂದು ನನ್ನ ವಿರುದ್ದ ಹೋರಾಟ ಮಾಡಿಸಿದ್ರು, ಏಪ್ರಿಲ್ 25ಕ್ಕೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಪತ್ರದಲ್ಲಿ ಪ್ರಭಾವಿ ರಾಜಕಾರಣಿಗಳು ಅಂತ ಇದೆ. ರಾಜಕಾರಣಿಗಳು ಅಂದ್ರೆ ಎಷ್ಟು ಜನ ನೂರು ಜನ ಬೇಕಾದ್ರು ಆಗಬಹುದು. ಇದಕ್ಕೆ ನಮ್ಮ ಮುಖ್ಯಮಂತ್ರಿಗಳು ಅವತ್ತು ರಾತ್ರಿಯೇ ವಿಶೇಷ ತಂಡ ರಚನೆ ಮಾಡಿದ್ರು. ಪ್ರತ್ರದಲ್ಲಿ ಎಲ್ಲೂ ರೇವಣ್ಣ, ಪ್ರಜ್ವಲ್ ರೇವಣ್ಣ ಹೆಸರಿಲ್ಲ. ಅದರೂ ಮುಖ್ಯಮಂತ್ರಿಗಳು ಟ್ವೀಟ್ನಲ್ಲಿ ಪ್ರಜ್ವಲ್ ರೇವಣ್ಣ ಅಂತ ಹಾಕಿದ್ದಾರೆ. ಏಪ್ರಿಲ್ 28ಕ್ಕೆ ಬೆಂಗಳೂರಿನಲ್ಲಿ ಕೂತ್ಕೊಂಡ್ ಕಂಪ್ಯೂಟರ್ನಲ್ಲಿ ಟೈಪ್ ಮಾಡಿಸಿ, ಹೊಳೆನರಸೀಪುರದಲ್ಲಿ ದೂರು ಕೊಡಿಸಿದ್ರು ಎಂದು ದೂರಿದ್ದಾರೆ.