ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ದೇವಸ್ಥಾನ ಜಲಾವೃತವಾಗಿದ್ದು, ಮುಂದಿನ ಎರಡು ದಿನಗಳ ಕಾಲ ಭಕ್ತರು ಸುಬ್ರಹ್ಮಣ್ಯ ಕ್ಷೇತ್ರದತ್ತ ತೆರಳದಂತೆ ಸಹಕರಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮನವಿ ಮಾಡಿಕೊಂಡಿದ್ದಾರೆ.
ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸೇತುವೆಗಳು. ಕ್ಷೇತ್ರದಲ್ಲಿರುವ ಮನೆ, ಅಂಗಡಿಗಳು ಮತ್ತು ದೇವಾಲಯದ ಕೆಲ ಭಾಗ ಜಲಾವೃತವಾಗಿವೆ ಎಂದು ತಿಳಿದುಬಂದಿದೆ.

ಇನ್ನು ಭಾರಿ ಮಳೆ ಹಿನ್ನೆಲೆ ಸುಬ್ರಹ್ಮಣ್ಯ ಕುಮಾರಧಾರಾ ಬಳಿಯಿರುವ ಪರ್ವತಮುಖಿ ಬಳಿ ಗುಡ್ಡಕುಸಿತವಾಗಿದೆ. ಮನೆ ಮೇಲೆ ಗುಡ್ಡ ಜಾರಿದೆ. ಕುಸುಮಧಾರ, ರೂಪಶ್ರೀ ಎಂಬುವರ ಮನೆ ಮೇಲೆ ಗುಡ್ಡ ಕುಸಿದಿದ್ದು ಇಬ್ಬರು ಮಕ್ಕಳು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.











