2020 ಡಿಸೆಂಬರ್ ಹಾಗು 2021 ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ರಾಜ್ಯ ರಸ್ತೆಯ ನಾಲ್ಕು ಸಾರಿಗೆ ನಿಗಮಗಳ ನೌಕರರ ಮುಷ್ಕರ ವಾಪಸ್ ಪಡೆಯುವ ಸಮಯದಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರದ ಕುರಿತು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ಸಾರಿಗೆ ನೌಕರರು(AITUC) ಆಗ್ರಹಿಸಿದ್ದಾರೆ.
2021 ಏಪ್ರಿಲ್ 7ರಿಂದ 212ರವರೆಗೆ ನಡೆದ ಮುಷ್ಕರವನ್ನು ಕೋವಿಡ್ ಎರಡನೇ ಅಲೆ ಕಾರಣ ದಿಢೀರ್ ಎಂದು ವಾಪಸ್ ಪಡೆಯಲಾಗಿತ್ತು. ಮುಷ್ಕರ ಹಿಂಪಡೆಯುವ ವೊಚಾರದಲ್ಲಿ ಪ್ರತಿಭಟನೆಯ ನೇತೃತ್ವವನ್ನ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಕೋಟ್ಯಂತರ ರೂಪಾಯಿ ಕಿಕ್ಬ್ಯಾಕ್ ಆರೋಪ ಕೇಳಿ ಬಂದಿತ್ತು.
ಮುಷ್ಕರ ಹಿಂಪಡೆಯುವ ವಿಚಾರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ 35 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಟ ಬಯಲಾಗಿದೆ ಈ ಮೊತ್ತವನ್ನು ಯಾವ ಸಂಪನ್ಮೂಲದಿಂದ ನೀಡಲಾಗಿದೆ ಎಂದು ಎಂದು AITUC ಫೆಡರೇಷನ್ ಆದ್ಯಕ್ಷ ಅನಂತ ಸುಬ್ಬರಾವ್ ಪ್ರಶ್ನಿಸಿದ್ದಾರೆ.

ಕಿಕ್‌ಬ್ಯಾಕ್‌ನ ಅರ್ಧ ಮೊತ್ತವನ್ನ ಕಪ್ಪುಹಣವನ್ನ ಇನ್ನರ್ಧ ಮೊತ್ತವನ್ನ ದುಬೈನಲ್ಲಿ ನೆಲೆಸಿರುವ ಕೋಡಿಹಳ್ಳಿ ಚಂದ್ರಶೇಖರ್ ಪತ್ನಿ ಹಾಗು ಪುತ್ರ ನಡೆಸುತ್ತಿರುವ ಸಿಎಂಎನ್ ಡೆವಲಪರ್ಸ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಪ್ಪುಹಣವನ್ನ ಯಾರ ಕೈಗೆ ಕೊಡಲಾಗಿದೆ ಎನ್ನುವುದನ್ನು ಬಹಿರಂಗಪಡಿಸಬೇಕು ಮತ್ತು ತಕ್ಷಣವೇ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಭ್ರಷ್ಟಾಚಾರ ಪ್ರಕರಣವನ್ನ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸಾರಿಗೆ ನೌಕರರು ಆಗ್ರಹಿಸಿದ್ದಾರೆ.
ವಿವಿಧೆಡೆ ಪ್ರತಿಭಟನೆ
ಖಾಸಗಿ ಸುದ್ದಿ ಮಾಧ್ಯಮ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವುದು ಕಂಡ ಬಂದ ಹಿನ್ನೆಲೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಈ ವೇಳೆ ಪ್ರತಿಭಟನಾ ನಿರತ ಕಾರ್ಯಕರ್ತರು ಕೋಡಿಹಳ್ಳಿ ಚಂದ್ರಶೇಖರ್ ಕಟೌಟ್ ಅನ್ನು ನೆಲಕ್ಕೆ ಹಾಕಿ ಕಲ್ಲಿನಿಂದ ಜಜ್ಜಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
ಚಿತ್ರದುರ್ಗ ನಗರದಲ್ಲಿ ವಿವಿಧ ಪ್ರಗತಿಪರ ಹಾಗು ರೈತ ಸಂಘಟನೆಗಳು ಕೋಡಿಹಳ್ಳಿ ಚಂದ್ರಶೇಖರ್ ಅಣಕು ಶವಯಾತ್ರ ನಡೆಸಿ ಅವರ ಒಟ್ಟಾರೆ ಆಸ್ತಿಗಳಿಕೆ ಬಗ್ಗೆ ತನಿಖೆ ನಡೆಸಬೇಕು ಅಕ್ರಮ ಆಸ್ತಿಯನ್ನು ಸರ್ಕಾರ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.






