ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸ್ವಾಭಾವಿಕವಾಗಿ ಇದ್ದೇ ಇರುತ್ತೆ ಅದೇನ್ನು ವಿಶೇಷ ಅಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸಿದ್ದು-ಡಿಕೆಶಿ ಬಸ್ ಯಾತ್ರೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ ರಾಜಕಾರಣದಲ್ಲಿ ಇದೆಲ್ಲಾ ಇದ್ದಿದ್ದೇ ಸಿದ್ದರಾಮಯ್ಯ ಒಂದು ಬಸ್ ನಲ್ಲಿ ಡಿ.ಕೆ.ಶಿವಕುಮಾರ್ ಒಂದು ಬಸ್‌ನಲ್ಲಿ ಹೋಗ್ತೀನಿ ಎಂದು ಹೇಳುತ್ತಿದ್ದಾರೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸ್ವಾಭಾವಿಕವಾಗಿ ಇದ್ದೇ ಇರುತ್ತೆ ಅದೇನ್ನು ವಿಶೇಷ ಅಲ್ಲ ಎಲ್ಲಾ ಪಾರ್ಟಿಯಲ್ಲೂ ಇರುತ್ತೇ ಬಿಜೆಪಿಯಲ್ಲೂ ಇದೆ. ನಾನು ಇಲ್ಲ ಅನ್ನಲ್ಲ ಎಂದು ಹೇಳಿದ್ದಾರೆ.
ಆದರೆ, ಈ ಇಬ್ಬರು ನಾಯಕರು ಮೇಲಿನವರ ಮಾತನ್ನ ಕೇಳ್ತಿವಿ ಎಂದು ತೀರ್ಮಾನ ಮಾಡಿಕೊಂಡು ಬಂದಿದ್ದಾರೆ ಮಲ್ಲಿಕಾರ್ಜುನ್ ಖರ್ಗೆಯವರು ಒಂದೇ ಬಸ್ ನಲ್ಲಿ ಹೋಗ್ಬೇಕು ಎಂದು ಹೇಳಿದ್ದಾರೆ. ಅದನ್ನು ಒಪ್ಪಿಕೊಂಡು ಬಂದಿದ್ದಾರೆ. ತುಂಬಾ ಸಂತೋಷ. ಮೇಲಿನವರು ಎಲ್ಲಾ ರಾಜಕೀಯ ಪಕ್ಷಕ್ಕೂ ಕಡಿವಾಣ ಹಾಕಿದಾಗ ಒಂದು ಶಿಸ್ತು ಬರುತ್ತೆ.ಆ ಶಿಸ್ತಿನ ರೂಪದ ಪ್ರಯತ್ನ ಕಾಂಗ್ರೆಸ್ ನಲ್ಲಿ ನಡೆದಿರೋದು ನಿಜಕ್ಕೂ ಸಂತೋಷ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಸಭೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರಿಗೆ ಬೇರೆ ಬೇರೆ ಮಾಡೋದು ರಕ್ತಗತವಾಗಿ ಬಂದಿದೆ ಬಹಳ ಹಿಂದಿನಿಂದಲೂ ಆ ವ್ಯವಸ್ಥೆ ಮಾಡ್ತಾ ಇದ್ದಾರೆ. ದೇವೆಗೌಡರ ಜೊತೆ ಇದ್ದಾಗಲೂ ಬೇರೆ ಅಹಿಂದಾ ಸಮಾವೇಶ ಮಾಡಬೇಡಿ ಅಂದಿದ್ರು ಸಮಾವೇಶ ಮಾಡಿದ್ದಕ್ಕೆ ಪಕ್ಷದಿಂದ ಕಿತ್ತಾಕ್ಕಿದ್ರೂ.ರಾಜ್ಯದಲ್ಲಿ ಸಿಎಂ ಆಗಿದ್ದ ವ್ಯಕ್ತಿ ನೀವು ನಿಮ್ಮ ಕಾರ್ಯಕರ್ತರು ನಿಮ್ಮನ್ನ ಒಳ್ಳೆ ನಾಯಕ ಎಂದುಕೊಂಡಿದ್ದಾರೆ.
ನಿಮ್ಮ ಕೇಂದ್ರದ ನಾಯಕರು ಹೇಳಿದ್ದನ್ನು ಪರಿಪಾಲನೆ ಮಾಡಿ. ನಿಮ್ಮ ಕಾಂಗ್ರೆಸ್ ಕಾರ್ಯಕರ್ತರು ಮಚ್ಕೋತ್ತಾರೆ. ನೀವು ದೆಹಲಿಯಲ್ಲಿ ಒಪ್ಪಿಕೊಂಡು ಬಂದು, ಸೆಪರೇಟ್ ಮೀಟಿಂಗ್ ಮಾಡಿದ್ರೇ ಹೇಗೆ..? ಬೆಂಗಳೂರಿಗೆ ಬರುವ ಜಿಲ್ಲಾ ನಾಯಕರು ಅಲ್ಲಿ ನೀವು ಹೇಳಿದ್ದನ್ನು ಕೇಳಿಕೊಂಡು ಬರ್ತಾರೆ. ಜಿಲ್ಲೆಗೆ ಬಂದ ಮೇಲೆ ಎರಡೆರಡು ಗುಂಪು ಮಾಡಿಕೊಳ್ತಾರೆ. ನಾನು ರಾಜಕೀಯಕ್ಕೆ ಮಾಡೋಕೆ ಇಷ್ಟ ಪಡಲ್ಲ. ಕೇಂದ್ರದ ನಾಯಕರ ಮಾತು ಕೇಳಿ.ನಿಮ್ಮ ಪಕ್ಷಕ್ಕೆ ಶಿಸ್ತು ಬರುತ್ತೆ. ಅದರಿಂದ ನಿಮ್ಗೆ, ಕಾರ್ಯಕರ್ತರಿಗೆ ಅನುಕೂಲ ಆಗುತ್ತೇ ಎಂದು ಕಿವಿ ಮಾತು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಮುಸಲ್ಮಾನರ ವೋಟಿನ ಬಗ್ಗೆ ಭಯ ಆಗಿದೆ ಅವರ ಬೇಡ ಎಂದರೂ ಅವರ ವೋಟು ಅವರಿಗೆ ಹೋಗೋದು ಈ ಮುಂಚೆ ಮುಸ್ಲಿಮರ ಓಟು ನೂರಕ್ಕೆ ನೂರು ನಮ್ದು ಅಂದ್ಕೋತ್ತಿದ್ರು.ಈಗ ಕುಮಾರಸ್ವಾಮಿ ಅನೇಕ ಭಾಗದಲ್ಲಿ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ.
ಅನೇಕ ಮುಸ್ಲಿಂಮರು ಆ ಸಭೆಗೆ ಹೋಗ್ತಾ ಇದ್ದಾರೆ ಮುಸಲ್ಮಾನರ ಓಟುಗಳು ನಮ್ದೇ ಆಸ್ತಿ ಎಂದು ಕಾಂಗ್ರೆಸ್ ಅಂದುಕೊಂಡಿತ್ತು.ಆ ಮುಸಲ್ಮಾನರ ಓಟಿನ ಬುಟ್ಟಿಗೆ ಎಲ್ಲಿ ಕೈ ಹಾಕ್ತಾರೋ ಅನ್ನೋ ಭಯ ಶುರುವಾಗಿದೆ. ಅದಕ್ಕೆ ಒಂದು ಮೀಟಿಂಗ್ ಮಾಡಿದ್ದಾರೆ.. ಅವರು ಓಟ್ ಹೇಗಾದ್ರೂ ಹಂಚಿಕೊಳ್ಳಲಿ.ಹಿಂದುತ್ವದ ವಿಚಾರದಲ್ಲಿ ಬಿಜೆಪಿ ದೇಶದಲ್ಲಿ ಹೋರಾಟ ಮಾಡುತ್ತಿದೆ.ಕೇಂದ್ರದಲ್ಲಿ ಮೋಸಿದಿ ಸರ್ಕಾರ ಬಂದಿದೆ.. ಗುಜರಾತ್ ನಲ್ಲೂ ನಿರೀಕ್ಷೆಗೂ ಮೀರಿ ಬೆಂಬಲ ಕೊಟ್ಟಿದ್ದಾರೆ.ನರಾಜ್ಯದಲ್ಲೂ ಕೂಡ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಮಾಡ್ತೇವೆ.ಹಿಂದುತ್ವದ ವ್ಯವಸ್ಥೆಯಲ್ಲಿ ಎಲ್ರೂ ಬೆಂಬಲ ಕೊಡ್ತಾರೆ… 150 ಕ್ಕೂ ಹೆಚ್ಚು ಸ್ಥಾನ ಗೇಲ್ತೇವೆ.ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಪ್ರತಿಕ್ರಿಯಿಸಿ ಸಚಿವ ಸಂಪುಟಕ್ಕೆ ಸೇರೋದು ಬಿಡೋದು ನಂದಲ್ಲ.ಕೇಂದ್ರದ ನಾಯಕರು ತೀರ್ಮಾನ ಮಾಡಿದ್ರೇ ಮಂತ್ರಿ ಅಗ್ತೇನೆ.ಇಲ್ಲ ಅಂದ್ರೇ, ಶಾಸಕನಾಗಿ ಕೆಲಸ ಮಾಡ್ತೇನೆ ಎಂದು ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ ಮಹಾರಾಷ್ಟ್ರದ ಉದ್ದಟತನದ ಬಗ್ಗೆ ಸಭೆ ಇದೆ ಹೋಗಿದ್ದಾರೆ ಅನೇಕ ಮರಾಠಿಗರು ರಾಜ್ಯದಲ್ಲಿ, ಅನೇಕ ಕನ್ನಡಿಗರು ಮಹಾರಾಷ್ಟ್ರದಲ್ಲಿ ಇದ್ದಾರೆ. ಇಬ್ಬರೂ ಅಣ್ಣ-ತಮ್ಮಂದಿರಂತೆ ಬದುಕ್ತಾ ಇದ್ದೇವೆ. ಆದರೆ, ಮಹಾರಾಷ್ಟ್ರ ಸರ್ಕಾರ ರಾಜಕೀಯ ತೆವಲಿಗೋಸ್ಕರ ಹಾಳು ಮಾಡುತ್ತಿದೆ.ಕನ್ನಡಿಗರು- ಮರಾಠಿಗರನ್ನು ಒಡೆದು, ಗಲಭೆ ಸೃಷ್ಟಿಸುವ ಪ್ರಯತ್ನ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎರಡು ರಾಜ್ಯದ ಜನರು ಅಣ್ಣ- ತಮ್ಮಂದಿರಂತೆ ಇರ್ತೇವೆ ಎಂದು ಮಾತನಾಡುವ ವೇಳೆ ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.