ಇದೇ ಮೇ 10ರಂದು 2023ರ ವಿಧಾನಸಭಾ ಚುನಾವಣೆ(karnatakaassemblyelection2023) ನಡೆಯಲಿದೆ. ರಾಜ್ಯದ ಮೂಲೆ ಮೂಲೆಗೂ ತಿರುಗು ಪಕ್ಷದ ನಾಯಕರು ಮತ ಪ್ರಚಾರ ಮಾಡುತ್ತಿದ್ದಾರೆ. ಇಂದು ಶಿವಮೊಗ್ಗದಲ್ಲಿ(shivamogga) ಪ್ರಚಾರದ ವೇಳೆ, ನಗರದ ಎನ್‌ಇಎಸ್ ಗ್ರೌಂಡ್‌ನಲ್ಲಿ ತಮಿಳು ಸಮುದಾಯದ ಮುಖಂಡರನ್ನ ಉದ್ದೇಶಿಸಿ ಮಾತನಾಡಿದ, ಕೆ.ಎಸ್ ಈಶ್ವರಪ್ಪ(KS Eshwarappa) ಅಣ್ಣಮಲೈ(annamalai) ಕರ್ನಾಟಕ – ತಮಿಳುನಾಡಿನ ಸೌಹಾರ್ದತೆ ಸಂಕೇತ ಎಂದು ಹೇಳಿದರು. ರೌಡಿಗಳಿಗೆ ಸಿಂಹ ಸ್ವಪ್ನ ಎಂದರೆ ಅಣ್ಣಾಮಲೈ. ಇವರನ್ನು ಕನ್ನಡ ನಾಡಿನ ಸಿಂಗಂ ಎಂದು ಕರೆಯುತ್ತಾರೆ. ಸಿಂಗಂ ಎಂದರೆ ಗೊತ್ತಲ್ಲ ಸಿಂಹ ಅಂತ ಅರ್ಥ. ಅಂತಹ ಸಿಂಹ, ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರನ್ನ ಗೆಲ್ಲಿಸಲು ಶಿವಮೊಗ್ಗಕ್ಕೆ ಬಂದಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನ ಗೆಲ್ಲಿಸಿ ನರೇಂದ್ರ ಮೋದಿಯವರನ್ನು ಪ್ರಧಾನಿ(PM narendramodi) ಮಾಡಲಾಗಿತ್ತು. ನಾವು ಒಂದೂ ಸೀಟನ್ನು ಕೂಡ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್(congress) ಮುಖಂಡರು ಹೇಳುತ್ತಿದ್ದರು. ಕೊನೆಗೆ ಅವರ ಹಣೆಬರಹ ಒಂದೇ ಸೀಟು ಗೆಲ್ಲುವಂತಾಯಿತು. ಯಾಕಂದ್ರೆ ಶಿವಮೊಗ್ಗ ಜನ ದೈವಭಕ್ತರು ರಾಷ್ಟ್ರಭಕ್ತರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ 25 ಸೀಟುಗಳಿಗೆ 25ನ್ನೂ ಗೆದ್ದು ನರೇಂದ್ರ ಮೋದಿ(narendra modi) ಅವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ. ತಮಿಳುನಾಡು – ಕರ್ನಾಟಕ(tamilnadu-karnataka) ಎರಡು ರಾಜ್ಯಗಳಿಗೆ ಪ್ರೀತಿಗೆ ಪಾತ್ರರಾದವರು ಅಣ್ಣಾಮಲೈ. ಅಣ್ಣಾಮಲೈ ಐಪಿಎಸ್(ips0 ಅಧಿಕಾರಿಯಾಗಿದ್ದಾಗ ಮಾದರಿಯಾಗಿದ್ದರು. ಅಧಿಕಾರಿ ಇದ್ದರೆ ಹೀಗಿರಬೇಕು ಎಂದು ಹೇಳುತ್ತಿದ್ದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಆದ ಮೇಲೆ ಅಣ್ಣಾಮಲೈ(annamalai) ಅವರಿಗೆ ಚುನಾವಣೆ ಸವಾಲ್ ಆಗಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಶಾಸಕರು ಯಾರೂ ಇರಲಿಲ್ಲ. ಆದರೆ ಅಣ್ಣಾಮಲೈ ಅಧಿಕಾರ ವಹಿಸಿಕೊಂಡ ಮೇಲೆ ನಾಲ್ಕು ಜನ ಶಾಸಕರಾಗಿದ್ದಾರೆ. ಈ ದೇಶವನ್ನು ಉಳಿಸುವ ಪಕ್ಷ ಬಿಜೆಪಿ. ಕರ್ನಾಟಕ ರಾಜ್ಯದ ಚುನಾವಣಾ ಪ್ರಚಾರದ ಸಹ ಪ್ರಭಾರಿ ಆಗಿರುವ ಅಣ್ಣಮಲೈ ಹಗಲು ರಾತ್ರಿಯೆನ್ನದೇ ರಾಜ್ಯ ಸುತ್ತುತ್ತಿದ್ದಾರೆ. ಶಿವಮೊಗ್ಗಕ್ಕೆ(shivamogga) ಬರಬೇಕು ಎಂದು ನಾನು ಕೇಳಿಕೊಂಡಾಗ, ಯಾವಾಗ ಬೇಕಾದರೂ ಬರ್ತೀನಿ ಅಂತ ಹೇಳಿದ್ದರು. ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತೇನೆ ಎಂದರೂ ಕೂಡ ಬೇಡ ಎಂದು ಕಾರಲ್ಲೇ ಬರುತ್ತೇನೆಂದರು. ಅಷ್ಟು ಸರಳ ವ್ಯಕ್ತಿ ಅಣ್ಣಾಮಲೈ ಎಂದರು. ಭಾರತೀಯ ಜನತಾ ಪಕ್ಷ ಚನ್ನಬಸಪ್ಪ ಬಿಜೆಪಿ ಅಭ್ಯರ್ಥಿ ಎಂದು ತೀರ್ಮಾನ ಮಾಡಿದೆ. ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಚನ್ನಬಸಪ್ಪ ಅವರಂತಹ ಕಾರ್ಯಕರ್ತರು ನನ್ನ ಏಳು ಚುನಾವಣೆಗಳಲ್ಲಿ(elections) ಕೆಲಸ ಮಾಡಿದ್ದಾರೆ. ನನಗೆ ಹೇಗೆ ಆಶೀರ್ವಾದ ಮಾಡಿದರು ಹಾಗೆ ಚನ್ನಬಸಪ್ಪ ಅವರಿಗೂ ಆಶೀರ್ವಾದ ಮಾಡಬೇಕು ಎಂದು ಈಶ್ವರಪ್ಪ ಹೇಳಿದರು.