ಮುಡಾ ಹಗರಣಕ್ಕೆ (MUDA scam) ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm siddaramaiah) ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K S Eshwarappa) ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮೇಲೆ ಆರೋಪವಿದ್ದರೂ, FIR ಆಗಿದ್ದರೂ, ರಾಜೀನಾಮೆ ನೀಡದೆ ಸಿದ್ದರಾಮಯ್ಯ ಮೊಂಡುತನ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಹೀಗಾಗಿ ಸಿಎಂ ಸಿದ್ದರಾಮಯ್ಯ ಈ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಮಾಜಿ ಸಚಿವ K.S ಈಶ್ವರಪ್ಪ ಒತ್ತಾಯಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ್ಯ ಸಿದ್ದರಾಮಯ್ಯನವರೇ ನಿಮಗೊಂದು ಕಾನೂನು, ನನಗೊಂದು ಕಾನೂನಾ? ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗ ನಾವೂ ರಾಜೀನಾಮೆ ನೀಡಿ ತನಿಖೆ ಎದುರಿಸಿಲ್ಲವೇ ?! ಎಂದು ಪ್ರಶ್ನೆ ಮಾಡಿದ್ದಾರೆ.
ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಈಗ ನಿಮ್ಮ ಮೇಲೆ ದೊಡ್ಡ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಈಗಾಗಲೇ ಕೋರ್ಟ್ ತನಿಖೆಗೆ ಅನುಮತಿ ನೀಡಿ ಲೋಕಾಯುಕ್ತದಲ್ಲಿ FIR ಕೂಡ ಆಗಿದೆ. ಹೀಗಾಗಿ ನೀವೂ ರಾಜೀನಾಮೆ ನೀಡಿ, ಅದುಬಿಟ್ಟು ಡಬಲ್ ಸ್ಟ್ಯಾಂಡ್ ತಗೋಬೇಡಿ. ಬೇಕಿದ್ದರೆ ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಸಿಎಂ ಆಗಿ ಎಂದು ಹೇಳಿದ್ದಾರೆ.