ಕಾವೇರಿ ಕೊಳ್ಳದ ಅನ್ನದಾತರು ಕೊಂಚ ಖುಷಿ ಪಡೋ ವಿಚಾರ ಹೊರಬಿದ್ದಿದೆ. ಕನ್ನಡಿಗರ ಜೀವನಾಡಿ ಕನ್ನಂಬಾಡಿ ದಿನೇ ದಿನೇ ತುಂಬುತ್ತಾ ಇದೆ. ಇದ್ರಿಂದಾಗಿ ಬರಗಾಲದ ಆತಂಕದ ಮಧ್ಯೆಯಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ.124 ಗರಿಷ್ಠ ಮಟ್ಟದ ಸಾಮರ್ಥ್ಯ ಹೊಂದಿರುವ ಡ್ಯಾಂ ಪ್ರಸಕ್ತ ಸಾಲಿನಲ್ಲಿ 95 ಅಡಿ ತುಂಬಿದೆ. KRS ಡ್ಯಾಂ ಗೆ ಕಳೆದ 1 ವಾರದಿಂದ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ .ಡ್ಯಾಂ ಗೆ 9369 ಕ್ಯೂಸೆಕ್ ಒಳ ಹರಿವು ಇದೆ.ಹೊರ ಹರಿವು 518 ಕ್ಯೂಸೆಕ್ ಇದೆ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂ ನೀರಿನಿಂದ ಮೈಸೂರು,ಬೆಂಗಳೂರು ಭಾಗದ ಜನರು ಕುಡಿಯುವ ನೀರಿಗೆ ಅವಲಂಬಿತರಾಗಿದ್ದಾರೆ. ಕಳೆದ ವರ್ಷ ಇದೇ ದಿನ 78 ಅಡಿ ನೀರು ಸಂಗ್ರಹವಾಗಿತ್ತು.
ನಾಳೆ ಮತ ಎಣಿಕೆಗೆ ಸಿದ್ಧತೆ ಹೇಗಿದೆ..? ಸಿಎಂ ಡಿಸಿಎಂ ಏನಂದ್ರು..?
ನಾಳೆ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಡೆಯಲಿದೆ. ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ನಾಳೆ ಬೆಳಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಂ ಓಪನ್...
Read moreDetails