Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

KRS ಡ್ಯಾಂ ಉಳಿಸಿ: ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ಗೆ ಮನವಿ ಪತ್ರ ಸಲ್ಲಿಸಿದ ಸಂಸದೆ ಸುಮಲತಾ

ಚಂದನ್‌ ಕುಮಾರ್

ಚಂದನ್‌ ಕುಮಾರ್

July 21, 2021
Share on FacebookShare on Twitter

ಅಕ್ರಮ ಗಣಿಗಾರಿಕೆಯಿಂದ ಕೃಷ್ಣ ರಾಜ ಸಾಗರಗೆ (KRS) ತೊಂದರೆಯಾಗುತ್ತಿದೆ, KRS ಡ್ಯಾಂ ಉಳಿಸಿ ಎಂದು ಸಂಸದೆ ಸುಮಲತಾ ಅಂಬರೀಷ್ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಸಾಥ್‌

ಇಂದಿನಿಂದ 7 ದಿನ ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ

ಈ ಸರ್ಕಾರ ನಡೆಯುತ್ತಿಲ್ಲ, ಚುನಾವಣೆಗೆ ಏಳೆಂಟು ತಿಂಗಳಿದೆ ಅಂತ ಮ್ಯಾನೇಜ್​​ ಮಾಡುತ್ತಿದ್ದೇವೆ : ಸಚಿವ ಮಾಧುಸ್ವಾಮಿ ಆಡಿಯೋ ವೈರಲ್

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವರ್ ರನ್ನು ಭೇಟಿಯಾದ ಸುಮಲತಾ KRS ಆಣೆಕಟ್ಟು ಸುತ್ತ ಮುತ್ತ 15 ಕಿಮೀ ವ್ಯಾಪ್ತಿಯೊಳಗೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ತಡೆಗೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಸಂಸದೆ ಸುಮಲತಾ ‘ಇಂದು ಸನ್ಮಾನ್ಯ ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ, ಕೆ.ಆರ್.ಎಸ್ ಅಣೆಕಟ್ಟೆಗೆ ಅಕ್ರಮ ಗಣಿಗಾರಿಕೆಯಿಂದ ಬಂದೊದಗಿರುವ ಅಪಾಯವನ್ನು ಅವರ ಗಮನಕ್ಕೆ ತಂದು, ಈ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಸುಮಲತ ಅವರ ಮನವಿ ಪತ್ರದಲ್ಲಿ, KRS ಒಂದು ಐತಿಹಸಿಕವಾಗಿದೆ ಮತ್ತು ಇಂಜನಿಯರಿಂಗ್ ಮಾರ್ವೆಲ್ ಅಗಿದ್ದು ಇದು ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ ಈ ಕ್ಷೇತ್ರ ನನ್ನ ಸಂಸದೀಯ ವ್ಯಾಪ್ತಿಯಲ್ಲಿ ಬರುತ್ತದೆ. KRS ಅನ್ನು ಕೃಷ್ಣರಾಜ ವಡೆಯರ್‌ 4 ಮಹಾರಾಜ ನಿರ್ಮಿಸಿದ್ದು ಇದಕ್ಕೆ ಸರ್‌ ಎಂ ವಿಶ್ವೇಶ್ವರಯ್ಯ ಅವರು ಡಿಸೈನ್‌ ಮಾಡಿದ್ದಾರೆ. ಅನೇಕ ಶ್ರಮದಿಂದ ಹಣೆಕಟ್ಟು ನಿರ್ಮಾಣವಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ಜನರು ಇದನ್ನು ಅವಲಂಭಿಸಿದ್ದಾರೆ ಹಾಗಾಗಿ ಇದನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಬರೆದಿದ್ದಾರೆ.

ಮುಂದುವರೆದು, KRSನ ಇಪ್ಪತ್ತು ಕಿಲೋ ಮೀಟರ್ ಸುತ್ತ ಮುತ್ತು ಯಾವುದೇ ರೀತಿಯ ಸ್ಪೋಟಕ ಮತ್ತು ಬ್ಲಾಸ್ಟಿಂಗ್‌ ಗಳನ್ನು ಮಾಡಬಾರದು ಎಂದು ಸೂಪ್ರೀಂಕೋರ್ಟ್‌ ಸೂಚಿಸಿದ್ದರು ಅಲ್ಲಿ ಗಣಿಗಾರಿಕೆ ಹೆಸರಿನಲ್ಲಿ ಇದೆಲ್ಲವೂ ನಡೆಯುತ್ತಿದೆ. ಹಾಗಾಗಿ ಮಂಡ್ಯ ನನ್ನ ಕ್ಷೇತ್ರವಾಗಿದ್ದು ಇಂತಹ ಅಹಿತಕರ ಘಟನೆ ನಡೆಯದಾಗ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಹಾಗೆಯೇ ಸಂಭಂದಪಟ್ಟವರಿಗೆ ದೂರನ್ನು ನೀಡುವುದು ಜವಾಬ್ಧಾರಿಯಾಗಿದೆ. ಹಾಗಾಗಿ ಇಲ್ಲಿ ಅಕ್ರಮವಾಗಿ ಯಾರೆಲ್ಲ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಅವರ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಿ ಎಂದಿದ್ದೇನೆ ಎಂದು ಬರೆದಿದ್ದಾರೆ.

ಅಕ್ರಮ ಗಣಿಗಾರಿಕೆಯಲ್ಲಿ 2000 ಕೋಟಿ ರಾಜ್ಯಕ್ಕೆ ನಷ್ಟವಾಗಿದೆ. ಈ ಗಣಿಕಾರಿಕೆಗೆ ಪೋಲಿಟಿಕಲ್‌ ಸಪೋರ್ಟ್‌ ಇದೆ ಎಂದು ಆರೋಪಿಸಿದ್ದರೆ. ಜೊತೆಗೆ ಈತರದ ಅಕ್ರಮ ಗಣಿಗಾರಿಕೆಯಿಂದ ಸುತ್ತಲಿನ ಪರಿಸರಕ್ಕೆ, ರೈತರಿಗೆ, ಜನರ ಆರೋಗ್ಯದ ಮೇಲೆ ಮತ್ತು ಕೆ.ಆರ್.ಎಸ್‌ ಅಣೆಕಟ್ಟಿಗೆ ತೊಂದರೆ ಆಗುತ್ತಿದೆ ಎಂದು ದೂರಿದ್ದಾರೆ. ಈ ಐತಿಹಾಸಿಕ ಹಣೆಕಟ್ಟನ್ನು ನಾವು ಉಳಿಸಸಿಕೊಳ್ಳಬೇಕಾgide ಎಂದು ಬರೆದಿದ್ದಾರೆ.

ಕೆ.ಆರ್.ಎಸ್ ಅಣೆಕಟ್ಟು ಆಪಾಯದಲ್ಲಿ ಇದೇ ಅಂತ ಮಂಡ್ಯ ಲೋಕಸಬಾ ಸದ್ಯಸೆ ಸುಮಲತ ಅಂಬರೀಶ್ ಹೇಳಿದ್ದರು, ಅದಾದ ಬಳಿಕ ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು, ಈ ನಡುವೆ ಜಲಾಶಯದಲ್ಲಿರುವ ಕಲ್ಲುಗಳು ಕುಸಿದಿದ್ದು, ಅದರ ವಿಡಿಯೋವನ್ನು ಸುಮಲತಾ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಮ್ಮ ಹಿರಿಯರು ನಮಗೆ ಬಿಟ್ಟುಹೋಗಿರುವ ಬಳುವಳಿ ಕೆ.ಆರ್.ಎಸ್ ಅಣೆಕಟ್ಟು. ಮೈಸೂರು ಮಹಾರಾಜರ ಜನಪರ ಕಾಳಜಿ, ಅಸಂಖ್ಯಾತ ಜನರ ತ್ಯಾಗ, ಪರಿಶ್ರಮ ಹಾಗೂ ದೂರದೃಷ್ಟಿಯಿಂದ ಕಟ್ಟಿದ ಅಣೆಕಟ್ಟೆ ಲಕ್ಷಾಂತರ ರೈತರ ಜೀವನಾಡಿಯಾಗಿದೆ. ಕೋಟ್ಯಂತರ ಜನರ ದಾಹವನ್ನು ಇಂದಿಗೂ ತಣಿಸುತ್ತಿದೆ. ಅದೇ ಅಣೆಕಟ್ಟು ಈಗ ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ ಬಾರಿಸಿದೆ! ಈ ಎಚ್ಚರಿಕೆಯನ್ನು ಅರಿಯದೆ, ಅಣೆಕಟ್ಟೆಗೆ ಯಾವುದೇ ತೊಂದರೆ ಇಲ್ಲ, ಇದೊಂದು ಸಣ್ಣ ವಿಷಯ, ಏನು ಮಾಡಬೇಕಿಲ್ಲ ಎಂದೆಲ್ಲಾ ಮಾತನಾಡುವವರು ತಾವು ತಿನ್ನುವ ಅನ್ನವನ್ನು, ಕಾವೇರಿ ನೀರು ಕುಡಿಯುವಾಗ ಒಮ್ಮೆ ಯೋಚಿಸಬೇಕು ಎಂದು ಸುಮಲತಾ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಈ ಬಳಿಕ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವರ್ ನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಲೋಕಸಭಾ ಸ್ಪೀಕರ್ ಆದ ಶ್ರೀ. ಓಂ ಬಿರ್ಲಾ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಕೆ.ಆರ್.ಎಸ್ ಅಣೆಕಟ್ಟೆಯ ಸುತ್ತ ಮುತ್ತ ಅಕ್ರಮ ಗಣಿಗಾರಿಕೆ ಕುರಿತು ಅವರಿಗೆ ಮನವಿ ಪತ್ರ ಸಲ್ಲಿಸಿದ ಸುಮಲತಾ:

ಮಾನ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕೊಟ್ಟ ಪತ್ರದ ಸಾರಾಂಶ

ಕೆ.ಆರ್.ಎಸ್ ಆಣೆಕಟ್ಟು ಕರ್ನಾಟಕ ಜನತೆಗೆ ಮೈಸೂರು ಮಹಾರಾಜರ ಕೊಡುಗೆ. ಅದಕ್ಕೆ ಐತಿಹಾಸಿಕ ಮಹತ್ವ ಇದೆ. ಕೋಟ್ಯಾಂತರ ಜನರ ಅನ್ನ ನೀರಿಗೆ ಅದುವೇ ಜೀವನಾಡಿ ಎಂದಿದ್ದಾರೆ.

ಅನೇಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಪೋಟಕಗಳ ಬಳಕೆಯಿಂದ ಡ್ಯಾಮ್ ಕಟ್ಟಡಕ್ಕೆ ಹಾನಿಯಾಗುತ್ತಿರುವ ವಿಷಯವನ್ನು ಸುಪ್ರೀಮ್ ಕೋರ್ಟ್ ಕೂಡ ಪ್ರಸ್ತಾಪಿಸಿದೆ.

ನಿಮ್ಮ ಗಮನಕ್ಕೆ ತರಬೇಕಾದ ಮತ್ತೊಂದು ವಿಷಯವೆಂದರೆ, ಅಕ್ರಮ ಗಣಿಗಾರಿಕೆ ಮಾಡುವವರು ಸರ್ಕಾರಕ್ಕೆ ಉಳಿಸಿಕೊಂಡಿರುವ ರಾಜಧನ ಮತ್ತು ದಂಡದ ಬಾಬ್ತು. ಅಧಿಕಾರಿಗಳು, ರಾಜಕಾರಣಿಗಳು ಮುಂತಾದವರ ಬೆಂಬಲವಿಲ್ಲದೆ ಅಕ್ರಮ ಗಣಿಗಾರಿಕೆ ಮುಂದುವರಿಸುವುದು ಅಸಾಧ್ಯ ಎಂದು ಬರೆದಿದ್ದಾರೆ.

ಸತ್ಯಾಸತ್ಯತೆಯನ್ನು ತಿಳಿಯಲು ಮತ್ತು ಅಕ್ರಮ ಗಣಿಗಾರಿಕೆಯ ವ್ಯಾಪಕತೆ ಕಂಡುಹಿಡಿಯಲು ಡ್ರೋನ್ ಸರ್ವೇ ಮಾಡಲು ಮನವಿ ಮಾಡುತ್ತೇನೆ ಎಂದಿದ್ದಾರೆ.

ಅಕ್ರಮ ಗಣಿಗಾರಿಕೆಯ ವಿರುದ್ಧ ಕಠಿಣವಾದ ನಿಲುವನ್ನು ತಳೆದು, ಸರ್ಕಾರಕ್ಕೆ ಸಲ್ಲಬೇಕಾದ ಎಲ್ಲಾ ಬಾಬ್ತು ವಸೂಲಿಗೆ ಅಧಿಕಾರಿಗಳಿಗೆ ಸೂಚಿಸಲು ಮನವಿ ಮಾಡುತ್ತೇನೆ. ಜನರಿಗೆ, ಅಣೆಕಟ್ಟೆಗೆ ತೊಂದರೆ ಉಂಟುಮಾಡುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಲು ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇನೆ.” ಎಂದಿದ್ದಾರೆ.

ಸನ್ಮಾನ್ಯ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕೊಟ್ಟ ಪತ್ರದ ಸಾರಾಂಶ:

“ಸುಪ್ರೀಮ್ ಕೋರ್ಟ್ ಸೂಚನೆಯ ಹೊರತಾಗಿಯೂ ಕೆ.ಆರ್.ಎಸ್ ಅನೇಕಟ್ಟೆಯ ಸುತ್ತಮುತ್ತ ಅಕ್ರಮ ಗಣಿಗಾರಿಗೆಯ ಚಟುವಟಿಕೆಗಳು ಮುಂದುವರೆದಿದೆ ಎಂದಿದ್ದಾರೆ.

ಅಲ್ಲಿನ ಸ್ಥಳೀಯ ಜನರು, ರೈತರು ಇದರ ಬಗ್ಗೆ ನನಗೆ ಸಾಕಷ್ಟು ದೂರು ಕೊಟ್ಟಿದ್ದಾರೆ. ಅವರು ಹೇಳುವಂತೆ, ಸ್ಪೋಟಕಗಳ ಬಳಕೆಯಿಂದ ಅಣೆಕಟ್ಟೆಯಲ್ಲಿ ಬಿರುಕು ಬಿಡುವ ಅಪಾಯವಿದೆ. ಗಣಿಗಾರಿಕೆಯಿಂದ ಪರಿಸರದ ಮೇಲೆ ಸಾಕಷ್ಟು ಹಾನಿಯಾಗಿ, ಮನುಷ್ಯರು ಮತ್ತು ಜಾನುವಾರುಗಳಿಗೆ ತೊಂದರೆಯಾಗಿದೆ. ಗರ್ಭಪಾತ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ.

ರಂಗನತಿಟ್ಟು ಪಕ್ಷಿಧಾಮ ಮುಂತಾದ ಕಡೆ ವನ್ಯಜೀವಿಗಳಿಗೂ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ. ಕುಡಿಯುವ ನೀರು ಕಲುಷಿತವಾಗಿದೆ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದಲ್ಲದೆ ಸುತ್ತಲಿನ ಹಳ್ಳಿಗಳಲ್ಲಿ ಮನೆಗಳಿಗೆ ದಕ್ಕೆಯಾಗಿದೆ. ಇದೆಲ್ಲದರಿಂದ ಬೇಸತ್ತ ಹಳ್ಳಿಯ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದಿದ್ದಾರೆ.

ಈ ಎಲ್ಲಾ ಸನ್ನಿವೇಶದಲ್ಲಿ ನೀವು ಸಿ.ಬಿ.ಐ ರೀತಿಯ ಯಾವುದಾದರೂ ಕೇಂದ್ರೀಯ ತನಿಖಾ ತಂಡದಿಂದ ಕೂಲಂಕುಷವಾಗಿ ತನಿಖೆಗೆ ಆದೇಶಿಸಬೇಕೆಂದು ಕೋರುತ್ತೇನೆ. ಇದು ಕೋಟ್ಯಾಂತರ ಜನರ ಜೇವನ ಮತ್ತು ಜೀವನೋಪಾಯದ ಪ್ರಶ್ನೆಯಾಗಿದೆ.”

ಮುಂದಿನ ದಿನಗಳಲ್ಲಿ ಕೇಂದ್ರದ ಇನ್ನಿತರ ಸಂಬಂಧಿಸಿದ ಸಚಿವರುಗಳು ಮತ್ತು ಅಧಿಕಾರಿಗಳನ್ನು ಭೇಟಿಮಾಡಿ ಕೆ.ಆರ್.ಎಸ್ ಉಳಿಸಲು ಸರ್ವ ಪ್ರಯತ್ನಕ್ಕೆ ಸಜ್ಜಾಗಿದ್ದೇನೆ ಎಂದಿದ್ದಾರೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಡಿಕೆಶಿ, ಸಿದ್ದರಾಮಯ್ಯರನ್ನ ಭೇಟಿಯಾದ್ರೆ ವಿಶೇಷ, BSY ಅವರನ್ನ ಭೇಟಿಯಾದ್ರೆ ಅದರಲ್ಲೇನಿದೆ ವಿಶೇಷ : ಜಗದೀಶ್ ಶೆಟ್ಟರ್
ಕರ್ನಾಟಕ

ಡಿಕೆಶಿ, ಸಿದ್ದರಾಮಯ್ಯರನ್ನ ಭೇಟಿಯಾದ್ರೆ ವಿಶೇಷ, BSY ಅವರನ್ನ ಭೇಟಿಯಾದ್ರೆ ಅದರಲ್ಲೇನಿದೆ ವಿಶೇಷ : ಜಗದೀಶ್ ಶೆಟ್ಟರ್

by ಪ್ರತಿಧ್ವನಿ
August 12, 2022
ವರವರ ರಾವ್‌ ಗೆ ಸುಪ್ರೀಂ ಜಾಮೀನು ಮಂಜೂರು!
ದೇಶ

ವರವರ ರಾವ್‌ ಗೆ ಸುಪ್ರೀಂ ಜಾಮೀನು ಮಂಜೂರು!

by ಪ್ರತಿಧ್ವನಿ
August 10, 2022
ಮೆಟ್ರೋ ಸಂಚಾರದಲ್ಲಿ ಭಾರೀ ಬದಲಾವಣೆ: 15 ನಿಮಷಕ್ಕೊಂದು ರೈಲು!
ಕರ್ನಾಟಕ

ಲಾಲ್ ಬಾಗ್ ಫ್ಲವರ್ ಶೋ; ಭರ್ಜರಿ ಆಫರ್ ಕೊಟ್ಟ ನಮ್ಮ ಮೆಟ್ರೋ !

by ಕರ್ಣ
August 12, 2022
ಬಿಹಾರ; ಮೈತ್ರಿಯಲ್ಲಿ ಬಿರುಕು, ಸೋನಿಯಾ ಜೊತೆ ಮಾತುಕತೆ ನಡೆಸಿದ ನಿತೀಶ್
ದೇಶ

ಪ್ರಧಾನಿ ಗಾದಿ ಮೇಲೆ ನಿತಿಶ್ ಕಣ್ಣು; ವಿಪಕ್ಷಗಳಿಗೆ ಬಲ ತುಂಬಲಿದೆಯೇ ‘ಪಲ್ಟು ರಾಮ’ನ ಹೊಸ ಇನ್ನಿಂಗ್ಸ್?

by Shivakumar A
August 12, 2022
ಬಿಬಿಎಂಪಿ ಚುನಾವಣೆ; ಹೊಸ ಮೀಸಲಾತಿ ಪಟ್ಟಿ ವಾಪಾಸ್ ಪಡೆದ ಬೊಮ್ಮಾಯಿ ಸರ್ಕಾರ
ಕರ್ನಾಟಕ

ಬಿಬಿಎಂಪಿ ಚುನಾವಣೆ; ಹೊಸ ಮೀಸಲಾತಿ ಪಟ್ಟಿ ವಾಪಾಸ್ ಪಡೆದ ಬೊಮ್ಮಾಯಿ ಸರ್ಕಾರ

by ಕರ್ಣ
August 12, 2022
Next Post

Indonesian Submarine Nanggala II with 33 Aboard Missing

2023ರ ವಿಧಾನಸಭೆ ಚುನಾವಣೆ ಗೆಲ್ಲಲು ಒಂದಾದ ಡಿಕೆಶಿ, ಸಿದ್ದು; ಕೈ ಸಂಪರ್ಕದಲ್ಲಿ JDS-BJPಯ 30ಕ್ಕೂ ಹೆಚ್ಚು ಶಾಸಕರು!

2023ರ ವಿಧಾನಸಭೆ ಚುನಾವಣೆ ಗೆಲ್ಲಲು ಒಂದಾದ ಡಿಕೆಶಿ, ಸಿದ್ದು; ಕೈ ಸಂಪರ್ಕದಲ್ಲಿ JDS-BJPಯ 30ಕ್ಕೂ ಹೆಚ್ಚು ಶಾಸಕರು

‘ಡಿಜಿಟಲ್ ಇಂಡಿಯಾ’ದ ಬಣ್ಣಬಯಲು ಮಾಡಿದ ‘ನೋ ನೆಟ್ವರ್ಕ್ ನೋ ವೋಟಿಂಗ್’ ಹೋರಾಟ!

‘ಡಿಜಿಟಲ್ ಇಂಡಿಯಾ’ದ ಬಣ್ಣಬಯಲು ಮಾಡಿದ ‘ನೋ ನೆಟ್ವರ್ಕ್ ನೋ ವೋಟಿಂಗ್’ ಹೋರಾಟ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist