ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗ್ತಿದೆ. ಯತೇಚ್ಛವಾಗಿ ಕಾವೇರಿ ನೀರು ಹರಿಯುತ್ತಿದ್ದು, ಕನ್ನಂಬಾಡಿ ಕಟ್ಟೆ ತುಂಬುತ್ತಿದೆ.ನಿರಂತರ ಮಳೆಯಿಂದ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಭರ್ತಿಯಾಗಲು ಕೆಲವು ಟಿಎಂಸಿ ನೀರು ಮಾತ್ರ ಬೇಕಾಗಿದೆ.
ಜಲಾಶಯದ ಸುತ್ತಮುತ್ತ ಇನ್ನಷ್ಟು ಮಳೆಯಾದರೆ ಅತೀ ಶೀಘ್ರದಲ್ಲೇ KRS ಡ್ಯಾಂ ತುಂಬುವುದರಲ್ಲಿ ಯಾವುದೇ ಅನುಮಾನ ಬೇಡ. ಇಂದು KRS ಒಳಹರಿವಿನ ಮಟ್ಟ 44,617 ಕ್ಯೂಸೆಕ್ ಇದೆ. 116.60 ಅಡಿ ನೀರಿನ ಮಟ್ಟ ತಲುಪಿದೆ. ಕೆಆರೆಸ್ ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದೆ.ರಾಜ್ಯದ ಹಲವು ಪ್ರದೇಶಗಳಲ್ಲಿ ವರುಣಾರ್ಭಟ ಜೋರಾಗಿದ್ದು , ಕಾವೇರಿ ಒಡಲು ತುಂಬಲು ಇನ್ನೇನು ಕೆವಲ 11 ಟಿಎಂಸಿ ಮಾತ್ರ ಬಾಕಿ ಉಳಿದಿದೆ.ಕನ್ನಂಬಾಡಿ ಕಟ್ಟೆ ಭರ್ತಿಗೆ ಕೇವಲ 8 ಅಡಿಗಳು ಮಾತ್ರ ಬಾಕಿ ಇವೆ. KRS 38.900 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ ಭರ್ತಿಗೆ ಬೇಕಿರೋದು ಕೇವಲ 11 ಟಿಎಂಸಿ ನೀರು ಮಾತ್ರ. ಇಂದು KRSನ ಹೊರ ಹರಿವು 2,566 ಕ್ಯೂಸೆಕ್ ಇದೆ