ಪ್ರತಿಯೊಬ್ಬರು ಕೂಡಾ ತಮ್ಮ ತ್ವಜೆ ಚನ್ನಾಗಿರಬೇಕು,ಯಾವುದೆ ಒಂದು ಕಪ್ಪುಕಲೆ,ಮೊಡವೆ,ಸುಕ್ಕು ಇಲ್ಲದೆ ಕ್ಲಿಯರ್ ಆಗಿ ಇರಬೇಕು ಅಂತ ಆಸೆ ಪಡ್ತಾರೆ..ಸದ್ಯ ಎಲ್ಲೆಡೆ ಅದ್ಬುತವಾದ ಚರ್ಮವನ್ನ ಹೊಂದಿ ತುಂಬಾನೆ ಫೇಮಸ್ ಆಗಿರುವಂತವರು ಕೋರಿಯನ್ಸ್. ಯಾರನ್ನೆ ಕೇಳಿದ್ರು ಕೂಡಾ ಕೋರಿಯದವರ ಹಾಗೆ ಗ್ಲಾಸಿ ಅಂಡ್ ಗ್ಲೋಗಿಂಗ್ ತ್ವಜೆ ನಮ್ಮದಾಗಬೇಕು ಅಂತಾರೆ.ಕಲೆರಹಿತ,ಗಾಜಿನಂತೆ ಹೊಳೆಯುವ ತ್ವಜೆ ನಿಮ್ಮದಾಗಬೇಕೆಂದರೆ ಈ ರೀತಿಯ ರೂಟೀನ್ ನ ಪ್ರತಿದಿನ ಫಾಲೋ ಮಾಡಿ .
- ಮೇಕಪ್ ನ ಮಾಡಿದಾಗ ತಪ್ಪದೆ ಮೇಕಪ್ ರಿಮೂವ್ ಮಾಡುವುದು ಒಳ್ಳೆಯದು ಅದರಲ್ಲೂ ಕೂಡ ಆಯ್ಲಿ ಕ್ಲಂಚರನ್ನ ಬಳಸಿ ಇದರಿಂದ ನಿಮ್ಮ ತ್ವಚೆಯಲ್ಲಿ ಹೊಳಪು ಹೆಚ್ಚಾಗುತ್ತದೆ
- ಸೌಮ್ಯವಾದ ತೈಲ ಕ್ಲೆನ್ಸರ್‌ನೊಂದಿಗೆ ಮೇಕ್ಅಪ್ ಮತ್ತು ಸನ್‌ಸ್ಕ್ರೀನ್ ತೆಗೆದುಹಾಕಿ.
- ಕೆಲವು ಬಾರಿ ಅತಿಯಾಗಿ ಮೇಕಪ್ ನ ಮಾಡಿದಾಗ ಅಥವಾ ಹೆಚ್ಚು ಸಲ ಮಾಡಿದಾಗ ನೀವು ಡಬಲ್ ಕ್ಲೆನ್ಸರ್ ಅಂದ್ರೆ ಫೋಮಿಂಗ್ ಕ್ಲೆನ್ಸರ್ ಅನ್ನ ಬಳಸುವುದು ಉತ್ತಮ
- ವಾರಕ್ಕೆ ಒಂದರಿಂದ ಮೂರು ಬಾರಿ ಡೆಡ್ ಸ್ಕಿನ್ ಅನ್ನ ರಿಮೂವ್ ಮಾಡುವುದು ಉತ್ತಮ ಇದಕ್ಕಾಗಿ ಮನೆಯಲ್ಲೇ ನೀವು ಹೋಂ ರೆಮಿಡಿಸನ್ನು ತಯಾರಿಸಿಕೊಳ್ಳಬಹುದು ಇಲ್ಲವಾದಲ್ಲಿ ಮೆಡಿಕಲ್ ನಲ್ಲಿ ನಿಮಗೆ ಕ್ರೀಮ್ ಗಳು ದೊರೆಯುತ್ತವೆ ಅದನ್ನು ಕೂಡ ಬಳಸಬಹುದು
- ಸ್ಕಿನ್ ಟೋನ್ ಬ್ಯಾಲೆನ್ಸ್ ಮಾಡುವುದಕ್ಕೆ ಮತ್ತು ಉಳಿದಿರುವ ಕಲ್ಮಶವನ್ನು ತೆಗೆದು ಹಾಕಲು ಟೋನರ್ ಬಳಸಿ.
- ತಪ್ಪದೇ ನಿಮ್ಮ ತ್ವಚೆಗೆ ಸರಿಹೊಂದುವಂಥ ಸಿರಂಗಗಳನ್ನ ಬಳಸುವುದರಿಂದ ತ್ವಚೆ ಇನ್ನೂ ಕೂಡ ಉತ್ತಮವಾಗುತ್ತದೆ
- ನಿಮ್ಮ ಮುಖದಲ್ಲಿರುವ ಕಲೆಗಳು ಅದರಲ್ಲೂ ಏಜಿಂಗ್ ಪ್ರಾಬ್ಲಮ್ ಅಂದ್ರೆ ರಿಂಕಲ್ಸ್ ಹಾಗೂ ಸುಕ್ಕು ಕಟ್ಟಿದಾಗ ಸಿರಂ ಗಳನ್ನ ಬಳಸುವುದು ಉತ್ತಮ
- ವಾರಕ್ಕೆ ಎರಡು ಬಾರಿ ಶೀಟ್ ಮಾಸ್ಕ್ ಅನ್ನ ಬಳಸುವುದು ಉತ್ತಮ ಇದು ನಿಮ್ಮ ತ್ವಚೆಯನ್ನ ನರೇಶ್ ಹಾಗೂ ಮಾಯಿಶ್ಚರೈಸ್ ಮಾಡೋದಕ್ಕೆ ತುಂಬಾನೇ ಸಹಾಯಕಾರಿ
- ರಾತ್ರಿ ಹಗಲು ಏನದೆ ಮಾಯಿಶ್ಚರ್ ಅನ್ನ ಬಳಸುವುದು ಉತ್ತಮ ಇದರಿಂದ ನಿಮ್ಮ ತ್ವಚೆ ಚನ್ನಾಗಿರುತ್ತದೆ.
- ಪ್ರತಿದಿನ ತಪ್ಪದೇ ಸನ್ ಸ್ಕ್ರೀನ್ ಅನ್ನು ಬಳಸುವುದು ತುಂಬಾನೇ ಒಳ್ಳೆಯದು ಇದರಿಂದ ಟಾನ್ ಹಾಗೂ ಕಪ್ಪು ಕಲೆಗಳು ಹೆಚ್ಚಾಗುವುದಿಲ್ಲ