ಕೊಲ್ಕತ್ತಾ: ಕೋಲ್ಕತಾ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಾದ್ಯಂತ ಸಾವಿರಾರು ಮಹಿಳೆಯರು ಬುಧವಾರ ಮಧ್ಯರಾತ್ರಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಪ್ರತಿಭಟನೆಯು ನಾಟಕೀಯ ತಿರುವು ಪಡೆದುಕೊಂಡಿತು, ಹೊರಗಿನವರ ಗುಂಪು ಆಸ್ಪತ್ರೆಯ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಿ ವಾಹನಗಳನ್ನು ಧ್ವಂಸಗೊಳಿಸಿತು.
#WATCH | West Bengal | Police disperse the mob from RG Kar Medical College and Hospital where a scuffle led to vandalism of the protesting site, vehicles and public property
— ANI (@ANI) August 14, 2024
A protest was being held by the doctors in the campus of RG Kar Medical College and Hospital against the… pic.twitter.com/s64PXztADs
ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.ಆಸ್ಪತ್ರೆಯ ಹೊರಗೆ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ಮುರಿದು ಕುರ್ಚಿಗಳನ್ನು ಒಡೆದು ಹಾಕಿದೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವನ್ನು ಧ್ವಂಸಗೊಳಿಸಿದ್ದು, ಹೊರಗೆ ನಿಲ್ಲಿಸಿದ್ದ ಕೆಲವು ಪೊಲೀಸ್ ವಾಹನಗಳನ್ನು ಸಹ ಹಾನಿಗೊಳಿಸಲಾಗಿದೆ. ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದ್ದಾರೆ.