ಕೋಲಾರ ನಗರ ಕಾಂಗ್ರೆಸ್ ಟಿಕೆಟ್ ಯಾರಿಗೆ ಅನ್ನೋ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ. ಕಾಂಗ್ರೆಸ್ ಟಿಕೆಟ್ ಗೆ ತೀವ್ರ ಪೈಪೋಟಿ ಬೆನ್ನಲ್ಲೇ ಕೆ.ವಿ.ಗೌತಮ್ ಗೆ ಅದೃಷ್ಟ ಒಲಿದಿದೆ. ಕೆ.ವಿ.ಗೌತಮ್ ಅಭ್ಯರ್ಥಿ ಅಂತ AICC ಪತ್ರಿಕಾ ಪ್ರಕಟಣೆ ರಿಲೀಸ್ ಮಾಡಿದೆ.ಮುನಿಯಪ್ಪ ಅಳಿಯ ಚಿಕ್ಕಪೇದ್ದಣ್ಣ ಗೆ ಟಿಕೆಟ್ ನೀಡುವಂತೆ ಸಾಕಷ್ಟು ಲಾಬಿ ನಡೆಸಿದ್ರು. ಇದಕ್ಕೆ ಕ್ಷೇತ್ರದ ವ್ಯಾಪ್ತಿಯ ಪ್ರಮುಖ 5 ಮಂದಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಕಳೆದ 4 ದಿನಗಳಿಂದ ಕ್ಷಣಕ್ಕೊಂದು ರಾಜಕೀಯ ಮೇಲಾಟಕ್ಕೆ ಇದು ಸಾಕ್ಷಿಯಾಗಿತ್ತು. ಸ್ವತಃ ಸಿಎಂ ಹಾಗೂ ಡಿಸಿಎಂ ಫೀಲ್ಡ್ ಇಳಿದು ಬಂಡಾಯ ಶಮನಕ್ಕೆ ಪ್ರಯತ್ನ ಮಾಡಿದ್ರು.ಇದೀಗ ಅಂತಿಮವಾಗಿ ಕೆ.ವಿ ಗೌತಮ್ ಗೆ ಮಣೆ ಹಾಕಲಾಗಿದೆ.

ಕೈ ಅಭ್ಯರ್ಥಿ ಹಿನ್ನೆಲೆ ಏನು ?
ಕೆ.ವಿ.ಗೌತಮ್ ಮೂಲತಃ ಬೆಂಗಳೂರಿನವರು.ತಂದೆ ವಿಜಯ್ ಕುಮಾರ್ ಒಮ್ಮೆ ಬೆಂಗಳೂರು ಮೇಯರ್ ಆಗಿದ್ದರು. ಎನ್‌ಎಸ್‌ಯುಐನಿಂದ ಕಾಂಗ್ರೆಸ್ ನಲ್ಲಿ ಸಕ್ರಿಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.ಆರಂಭದಲ್ಲಿ ಎನ್‌ಎಸ್‌ಯುಐ ಬೆಂಗಳೂರು ನಗರ ಕಾರ್ಯದರ್ಶಿ.ನಂತರ ಯೂತ್ ಕಾಂಗ್ರೆಸ್ ಬೆಂಗಳೂರು ಪ್ರಧಾನ ಕಾರ್ಯದರ್ಶಿ.ಕೃಷ್ಣ ಭೈರೇಗೌಡರು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಯೂಥ್ ಕಾಂಗ್ರೆಸ್ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವಧಿಯಲ್ಲೂ ಯೂತ್ ಕಾಂಗ್ರೆಸ್ ನಲ್ಲಿ ಕೆಲಸ
ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಪರಮೇಶ್ವರ್ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಕೆಪಿಸಿಸಿ ಪದಾಧಿಕಾರಿಯಾಗಿದ್ರು .ಈಗ ಕಾಂಗ್ರೆಸ್ ಡಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡ್ತಿದ್ದಾರೆ.ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೌತಮ್ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ.ದಲಿತ ಎಡ ಸಮುದಾಯಕ್ಕೆ ಸೇರಿರುವ ಗೌತಮ್ ಗೆ 49 ವರ್ಷ ವಯಸ್ಸಾಗಿದೆ
