ಆರಂಭಿಕ ಇಶಾನ್ ಕಿಶಾನ್, ಮಾಜಿ ನಾಯಕ ವಿರಾಟ್ ಕೊಹ್ಲಿ ಬೃಹತ್ ಜೊತೆಯಾಟದ ಫಲವಾಗಿ ಭಾರತ ತಂಡವು ಬಾಂಗ್ಲಾದೇಶ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ 410 ರನ್‌ಗಳ ಬೃಹತ್ ಮೊತ್ತವನ್ನಪೇರಿಸಿದೆ.
ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲಿ ಟಾಸ್ ಸೋತು ಮೊಲದು ಬ್ಯಾಟಿಂಗ್ ಮಾಡಿದ ಭಾರತ ಎಡಗೈ ಆರಂಭಿಕ ಇಶಾನ್ ಕಿಶಾನ್ (210 ರನ್, 131 ಎಸೆತ, 24 ಬೌಂಡರಿ, 10 ಸಿಕ್ಸರ್) ಚೊಚ್ಚಲ ದ್ವಿಶತಕ, ಮಾಜಿ ನಾಯಕ ವಿರಾಟ್ ಕೊಹ್ಲಿ (113 ರನ್, 91 ಎಸೆತ, 11 ಬೌಂಡರಿ, 2 ಸಿಕ್ಸರ್) 290 ರನ್‌ಗಳ ಬೃಹತ್ ದ್ವಿಶತಕದ ಜೊತೆಯಾಟದ ಫಲವಾಗಿ 8 ವಿಕೆಟ್ ನಷ್ಟಕ್ಕೆ 50 ಓವರ್‌ಗಳಲ್ಲಿ 409ರನ್‌ಗಳನ್ನು ಪೇರಿಸಿದೆ.
ವೈಟ್ ವಾಷ್ ಭೀತಿಯಲ್ಲಿರುವ ಭಾರತ ತಂಡವು ಗುರಿಯನ್ನು ಹೇಗೆ ರಕ್ಷಿಸಿಕೊಳ್ಳಲಿದೆ ಎಂಬುದನ್ನು ಕಾಡು ನೋಡಬೇಕಿದೆ. ಬಾಂಗ್ಲಾ ಪರ ಮೆಹದಿ ಹಸನ್ (10-0-76-1), ಇಬಾದತ್ ಹೊಸೇನ್ (9-0-80-2), ಶಕಿಬ್ ಅಲ್ ಹಸನ್ (10-0-68-2), ಟಸ್ಕಿನ್ ಅಹ್ಮದ್ (9-1-89-2), ಮುಸ್ತಾಫಿಜುರ್ ರೆಹಮಾನ್ (10-0-66-1) ವಿಕೆಟ್ ಕಬಳಿಸಿದ್ದಾರೆ.






