ಸತತ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯ (Delhi) ಗದ್ದುಗೆ ಬಿಜೆಪಿಯ (Bjp) ಪಾಲಾಗಿದೆ. ಫೆಬ್ರವರಿ 8 ರಂದೇ ಫಲಿತಾಂಶ ಹೊರಬಿದ್ದರೂ 48 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಇದುವರೆಗೂ ದೆಹಲಿಯ ಮುಖ್ಯಮಂತ್ರಿ (Delhi cm) ಯಾರಾಗಲಿದ್ದಾರೆ ಎಂಬುದನ್ನು ಘೋಷಿಸಿರಲಿಲ್ಲ. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಹೌದು ದೆಹಲಿಯ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ಆಶ್ಚರ್ಯವೆಂದರೆ ರೇಖಾ ಗೂಟ ಅವರು ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು ಅದಾಗಲೇ ಸಿಎಂ ಪಟ್ಟ ಗಿಟ್ಟಿಸಿದ್ದಾರೆ. ಇನ್ನು ರೇಖಾ ಅವರು ಬಿನೋಯ್ ಸಮುದಾಯದ ನಾಯಕಿಯಾಗಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದ ದಿನಗಳಿಂದಲೂ ರೇಖಾ ಗುಪ್ತ ರಾಜಕೀಯದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ .
1996-97ರಲ್ಲಿ ದೆಹಲಿ ಯೂನಿವರ್ಸಿಟಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೂಡ ರೇಖಾ ಗುಪ್ತ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಸೌತ್ ದೆಹಲಿ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಅವರು ದೆಹಲಿ BJP ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಅವರು ಶಾಲಿಮಾರ್ ಬಾಗ್ (ನಾರ್ಥ್ ವೆಸ್ಟ್ ) ಕ್ಷೇತ್ರದಿಂದ 68,200 ಮತಗಳ ಬಹುಮತದಿಂದ ಗೆಲುವು ಸಾಧಿಸಿದ್ದು, ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ.