ಜೆಡಿಎಸ್ನ 19 ಶಾಸಕರಲ್ಲಿ 13 ಮಂದಿ ಶೀಘ್ರದಲ್ಲೇ ಕಾಂಗ್ರೆಸ್ಗೆ ಬರಲಿದ್ದಾರೆ ಎಂದು ಹೇಳುವ ಮೂಲಕ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿ, ರಾಜ್ಯದಲ್ಲಿ ಕೇಳಿಬರುತ್ತಿರುವ ಆಪರೇಷನ್ ಕಮಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ನಾವೇನು ಸುಮ್ಮನೆ ಕುತಿದ್ದೇವಾ.? ಜೆಡಿಎಸ್ ನಿಂದ ಮೂರನೇ ಎರಡರಷ್ಟು ಶಾಸಕರು ಕಾಂಗ್ರೆಸ್ಗೆ ಬರ್ತಾರೆ. ಬಿಜೆಪಿ ಜೊತೆ ಮಾಡಿಕೊಂಡಿರುವ ಮೈತ್ರಿಯಿಂದ ಬೇಸತ್ತು ಅವರು ಕಾಂಗ್ರೆಸ್ ಪಾರ್ಟಿಗೆ ಬರ್ತಾರೆ. ಯಾರು ಯಾರು ಬರ್ತಾರೆ ಅಂತ ಈಗಲೇ ಹೇಳೋದಿಲ್ಲ. ಲೋಕಸಭೆ ಚುನಾವಣೆಯೊಳಗೇ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ʻʻಬಿಜೆಪಿ ಒಂದು ವೇಳೆ ಆಪರೇಷನ್ ಕಮಲ ಮಾಡಿದರೆ ಕಾಂಗ್ರೆಸ್ ಕೈ ಕಟ್ಟಿ ಕೂರುವುದಿಲ್ಲ. ಅವರು ಆಪರೇಷನ್ ಕಮಲ ಮಾಡಿದರೆ ನಾವು ಕೂಡಾ ಅಪರೇಷನ್ ಹಸ್ತ ಮಾಡುತ್ತೇವೆʼʼ ಎಂದು ಪರೋಕ್ಷವಾಗಿ ಬಿಜೆಪಿ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.