ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಬಣ ಬಡಿದಾಟ ಹೆಚ್ಚಾಗಿದ್ದು, ಪರಸ್ಪರ ನಾಯಕರ ನಡುವೆ ಪರೋಕ್ಷ ವಾಕ್ಸಮರಗಳು ಹೆಚ್ಚಾಗಿವೆ. ಹೀಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಗೆ (Dcm Dk Shivakumar) ಸಚಿವ ಕೆ.ಎನ್ ರಾಜಣ್ಣ (KN Rajanna) ಈಗ ಸಲಹೆಯೊಂದನ್ನು ನೀಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕೇವಲ ಎರಡೂವರೆ ವರ್ಷ ಯಾಕೆ, ಐದು ವರ್ಷ ಸಿಎಂ ಆಗಲಿ.ಎರಡೂವರೆ ವರ್ಷಕ್ಕೆ ಯಾಕೆ ಪ್ರಯತ್ನಿಸುತ್ತೀರಿ..?ಮುಂದಿನ ಅವಧಿಗೆ ಮುಖ್ಯಮಂತ್ರಿ ಆಗಲಿ, ಆ ಮೂಲಕ ಐದು ವರ್ಷ ಸಿಎಂ ಆಗಲಿ ಎಂದು ಟಕ್ಕರ್ ಕೊಟ್ಟಿದ್ದಾರೆ.
ಇನ್ನು ಡಿಕೆಶಿಯಿಂದ ಪ್ರತ್ಯಂಗಿ ಹೋಮ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್ ರಾಜಣ್ಣ ಮಾತನಾಡಿದ್ದು,ನನಗೆ ಪೂಜೆ, ಪುನಸ್ಕಾರ, ವಾಮಚಾರದ ಬಗ್ಗೆ ನಂಬಿಕೆ ಇಲ್ಲ. ಅಸಹಾಯಕರಿಗೆ ಒಳ್ಳೆಯದು ಮಾಡಿದ್ರೆ ಅದೇ ಒಳ್ಳೆಯದು ಎಂದಿದ್ದಾರೆ.
ಯಾರೋ ಒಬ್ಬ ಅಸಹಾಯಕನಿಗೆ ತೊಂದರೆ ನೀಡಿದರೆ ಆತ ಶಾಪ ಹಾಕುತ್ತಾನೆ,ಅದೇ ನಮಗೆ ಕೆಟ್ಟದಾಗುತ್ತೆ.ಹಿಂದೆ ನನ್ನ ವಿರುದ್ಧ ಮಾಟ, ವಾಮಚಾರದ ಪ್ರಯೋಗ ನಡೆದಿತ್ತು.ಆ ಅನುಭವ ನನಗೆ ಆಗಿದೆ.ನಾನು ಯಾರಿಗೂ ಹೆದರಿಸೋನು ಅಲ್ಲಾ ಎಂದು ಹೇಳಿದ್ದಾರೆ.