• Home
  • About Us
  • ಕರ್ನಾಟಕ
Tuesday, December 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

7ನೇ ವೇತನವನ್ನು ಜಾರಿ ವಿಳಂಬ ಹಿನ್ನಲೆ ಬಂದ್ ಕರೆ – ಆಶ್ವಾಸನೆ ಬಳಿಕ ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ KMF ! 

Chetan by Chetan
January 31, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
7ನೇ ವೇತನವನ್ನು ಜಾರಿ ವಿಳಂಬ ಹಿನ್ನಲೆ ಬಂದ್ ಕರೆ – ಆಶ್ವಾಸನೆ ಬಳಿಕ ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ KMF ! 
Share on WhatsAppShare on FacebookShare on Telegram

ಕರ್ನಾಟಕ ಸರ್ಕಾರ ಹಾಲು ಮಹಾಮಂಡಳ ಹಾಗೂ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳು, ಹೈನುಗಾರ ರೈತರಿಂದ ಪ್ರತಿನಿತ್ಯ ಹಾಲನ್ನು ಖರೀದಿಸಿ ನಂದಿನಿ ಬ್ರಾಂಡ್ ಹೆಸರಿನಲ್ಲಿ ವಿವಿಧ ಮಾದರಿಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಸುಮಾರು 50 ವರ್ಷಗಳಿಂದಲೂ ನೀಡುತ್ತಾ ಬರಲಾಗುತ್ತಿದೆ. 

ADVERTISEMENT

ಕರ್ನಾಟಕ ಹಾಲು ಮಹಾಮಂಡಳದಲ್ಲಿ ಸುಮಾರು 1300ಕ್ಕೂ ಹೆಚ್ಚು ಅಧಿಕಾರಿ/ಸಿಬ್ಬಂದಿಗಳು ಹಾಗೂ 16 ಜಿಲ್ಲಾ ಹಾಲು ಒಕ್ಕೂಟಗಳು ಒಳಗೊಂಡು ಸುಮಾರು 6000 ಅಧಿಕಾರಿ/ನೌಕರರು ಕೆಲಸ ನಿರ್ವಹಿಸುತ್ತಾ ಬರುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ನೌಕರರಿಗೂ 7 ನೇ ವೇತನವನ್ನು ಜಾರಿಗೊಳಿಸಿದ್ದು, ಅದರಂತೆ ರಾಜ್ಯ ಸರ್ಕಾರಿ ನೌಕರರು ಆಗಸ್ಟ್-2024 ರಿಂದ ಸೌಲಭ್ಯವನ್ನು ಈಗಾಗಲೇ ಪಡೆಯುತ್ತಿದ್ದಾರೆ. 

ಆದರೆ ಸ್ವಾಯತ್ತ ಸಂಸ್ಥೆಯಾದ ಕೆಎಂಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಗೆ ಮೊದಲ ಹಂತದಲ್ಲಿ 17% ಮಧ್ಯಂತರ ಪರಿಹಾರ ನೀಡಲಾಗುತ್ತಿದ್ದು, ಉಳಿದ 10.5% ಹಣ ಬಿಡುಗಡೆಗೆ ಮಂಜೂರು ಆದೇಶ ನೀಡುವಂತೆ ಸಹಕಾರಿ ಇಲಾಖೆಯನ್ನು ಕೋರಲಾಗಿತ್ತು.

ಆದರೆ ಈವರೆಗೆ ಸಹಕಾರ ಇಲಾಖೆ ಮಂಜೂರು ಮಾಡದೇ ಇರುವ ಕಾರಣ ಕಹಾಮ ಆದೇಶ ಸಂಖ್ಯೆ:1794/ಆಡಳಿತ-1/2024 ದಿನಾಂಕ: 22.10.2024ರಂತೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿ ಹಾಗೂ ಇತರೆ ಭತ್ಯೆಯ ಸೌಲಭ್ಯಗಳನ್ನು ಕಹಾಮದಲ್ಲಿ ಅಳವಡಿಸಿಕೊಂಡು ಆದೇಶ ಜಾರಿಗೊಳಿಸಿರುವ ಆದೇಶ ಅನುಷ್ಟಾನಕ್ಕೆ ಬಾರದೇ ಇದ್ದ ಹಿನ್ನಲೆಯಲ್ಲಿ ಫೆಬ್ರವರಿ-2025 ರ ದಿನಾಂಕ 01 ರಿಂದ ಕಹಾಮದ ಅಧಿಕಾರಿ/ನೌಕರರು ಹಾಗೂ ಜಿಲ್ಲಾ ಒಕ್ಕೂಟಗಳ ನೌಕರನ್ನೊಳಗೊಂಡು ಮುಷ್ಕರ ಮಾಡಲು ತಿರ್ಮಾನಿಸಲಾಗಿತ್ತು. 

ಸಹಕಾರ ಇಲಾಖೆಯಿಂದ ಸಧ್ಯದಲ್ಲಿಯೇ ಮಂಜೂರು ಆದೇಶವನ್ನು ನೀಡುವುದಾಗಿ ಆಶ್ವಾಸನೆ ನೀಡಿರುವ ಹಿನ್ನೆಲೆಯಲ್ಲಿ ಮತ್ತು ಕಹಾಮ ಅದ್ಯಕ್ಷರು ದಿನಾಂಕ: 03.02.2025ರ ಒಳಗೆ ಸಹಕಾರ ಸಚಿವರ ಜೊತೆ ಚರ್ಚಿಸಿ 7 ನೇ ವೇತನ ಆಯೋಗದ ಆದೇಶವನ್ನು ಕಹಾಮದಲ್ಲಿ ಹೊರಡಿಸುವುದಾಗಿ ತಿಳಿಸಿರುವ ಹಿನ್ನಲೆಯಲ್ಲಿ ರೈತರ ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಹೋರಾಟವನ್ನು ಮುಂದೂಡಿ ದಿನಾಂಕ:01.02.2025 ರಿಂದ ನಂದಿನಿ ಉತ್ಪನ್ನಗಳ ಸರಬರಾಜಿನಲ್ಲಿ ಹಾಗೂ ಹಾಲು ಖರೀದಿಯಲ್ಲಿ ಯಾವುದೇ ತೊಂದರೆ ಇಲ್ಲದಂತೆ ಎಂದಿನಂತೆ ಸರಬರಾಜು ಇರುತ್ತದೆ ಎಂದು ಮಾದ್ಯಮದ ಗಮನಕ್ಕೆ ತರಲಾಗುತ್ತಿದೆ. ಇದರಿಂದ ಯಾವುದೇ ಗ್ರಾಹಕರು ಅಥವಾ ರೈತರು ಆತಂಕ ಪಡುವ ಅಗತ್ಯವಿರುವುದಿಲ್ಲ.

ಫೆಬ್ರವರಿ2025ರ ಮೊದಲ ವಾರದೊಳಗೆ ಅಂದರೆ ದಿನಾಂಕ: 07.02.2025 ರ ಒಳಗೆ ಆದೇಶ (ಕೆ.ಎಂ.ಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಳಗೊಂಡಂತೆ) ಜಾರಿಗೊಳಿಸದಿದ್ದಲ್ಲಿ ದಿನಾಂಕ:10.02.2025 ರಂದು ಪುನಃ ಸಂಘದ ಕಾರ್ಯಕಾರಿ ಮಂಡಳಿ ಸಭೆ ಸೇರಿ ಮುಂದಿನ ಮುಷ್ಕರದ ಬಗ್ಗೆ ತೀರ್ಮಾನಿಸಿ ಹೋರಾಟ ಮಾಡಲಾಗುವುದೆಂದು ತಮ್ಮಗಳ ಗಮನಕ್ಕೆ ಈ ಮೂಲಕ ತಿಳಿಸಲಾಗಿದೆ ಎಂದು KMF ಮೂಲಕ ಮಧ್ಯ ಪ್ರಕಟಣೆ ಹೊರಡಿಸಲಾಗಿದೆ. 

ಕಹಾಮ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಅಧಿಕಾರಿ/ನೌಕರರ ಸಂಘಗಳ ಬೇಡಿಕೆಗಳು

1. 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕಹಾಮ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿಗೆ ಯಥಾವತ್ತಾಗಿ ಪೂರ್ಣ ಜಾರಿಗೆ ತರುವುದು.

2. 1984 ರಲ್ಲಿ ಸರ್ಕಾರ, ಕೆಡಿಡಿಸಿ(ಕೆಎಂಎಫ್), ಎನ್‌ಡಿಡಿಬಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ(Tri-party) ರಚಿಸಿ ಕಹಾಮದ ಅಧಿಕಾರಿ/ನೌಕರರಿಗೆ ವೇತನಕ್ಕೆ ಸಂಬಂಧಿಸಿ ಆಗಿರುವ ಒಡಂಬಡಿಕೆಯಂತೆ DA, HRA, CCA ಇತ್ಯಾದಿ ಸೇರಿದಂತೆ ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಆದೇಶಗಳಂತೆ ಜಾರಿಗೊಳಿಸಬೇಕಿದೆ.

3. ಹಿಂದೆ ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯವು W.P NO 10773/1988 ಮತ್ತು W.P NO 11942/1988 ರಲ್ಲಿ ನೀಡಿರುವ ಆದೇಶದಲ್ಲಿನ ಅನುಬಂಧಗಳಂತೆ, As per prevailing practice the Salary, Pay Scales DA, HRA, CCA and other emoluments should be paid/Increased as per the Government Notification

4. ಕರ್ನಾಟಕ ಸಹಕಾರಿ ಕಾಯ್ದೆ-1959ರ ಪ್ರಕರಣ 28(C) ರಡಿ ವೇತನ ಮತ್ತು ಭತ್ಯೆಗಳನ್ನು ಮಂಜೂರು ಮಾಡುವ ದತ್ತವಾದ ಅಧಿಕಾರ ಆಡಳಿತ ಮಂಡಳಿಗೆ ಇರುತ್ತದೆ. ಡೇರಿ/ಘಟಕವು Industrial Act ನಂತೆ ಕೆಲಸ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ಮಂಡಳಿ/ನಿಗಮಗಳಿಗಿದ್ದಂತೆ, ವಾರ್ಷಿಕ ಲಾಭ/ನಷ್ಟ ಮಾತ್ರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಪರಿಗಣಿಸಬೇಕು.

5. ಕಹಾಮ/ಒಕ್ಕೂಟದ ಆಡಳಿತ ಮಂಡಳಿ ಸಭೆಗಳಲ್ಲಿ ಸರ್ಕಾರದ ಪ್ರತಿನಿಧಿಗಳಾದ 1. RCS ಪ್ರತಿನಿದಿ 2. ಪಶು ಸಂಗೋಪನೆ 3. NDDB ಪ್ರತಿನಿಧಿ ಇರುವುದರಿಂದ, ಕಾಲಕಾಲಕ್ಕೆ ಸರ್ಕಾರದಿಂದ ಬಿಡುಗಡೆ ಮಾಡುವ ವೇತನ ಮತ್ತು ಭತ್ಯೆಗಳ ಅನುಮೋದನೆಯ ಅಧಿಕಾರ ಕಹಾಮದ ಆಡಳಿತ ಮಂಡಳಿಗೆ ನೀಡಬೇಕು.

ಅದರಂತೆ ಕಹಾಮ ಸೇರಿದಂತೆ ಜಿಲ್ಲಾ ಹಾಲು ಒಕ್ಕೂಟಗಳಿಗೂ ಸಹ ಕಹಾಮದಿಂದ ಆದೇಶವಾಗಬೇಕು.

6. ಕಹಾಮ/ಒಕ್ಕೂಟದ ಉನ್ನತ ಹುದ್ದೆಗಳಾದ ವ್ಯ.ನಿ ಹುದ್ದೆಗಳಿಗೆ ಕಹಾಮದಲ್ಲಿ ಕೆಲಸ ನಿರ್ವಹಿಸಿದ ತಾಂತ್ರಿಕ ಹಿನ್ನೆಲೆಯುಳ್ಳ ಅಥವಾ ಡೇರಿ ಉದ್ದಿಮೆಯಲ್ಲಿ ಅನುಭವವುಳ್ಳ ನಿರ್ದೇಶಕ ಹುದ್ದೆಗಳಿಗೆ ಮಾತ್ರ ಸೀಮಿತ ಮಾಡಬೇಕು.

ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.

Tags: 7 ನೇ ವೇತನKMFಕರ್ನಾಟಕ ಹಾಲು ಮಹಾಮಂಡಳಿಕೆಎಂ ಎಫ್ ಮುಷ್ಕರವೇತನ ಆಯೋಗ
Previous Post

ನಿಮ್ಮದೇ ಸುಳ್ಳಿನ ಮೂಲಕ ನೀವು ಜನರ ಮುಂದೆ ಬೆತ್ತಲಾಗಿದ್ದೀರಿ..! ಸಿದ್ದರಾಮಯ್ಯ ಗೆ ಜೆಡಿಎಸ್ ಟಾಂಗ್ ! 

Next Post

ಹಾರ್ದಿಕ್ ಪಾಂಡ್ಯನ ಬೌಲಿಂಗ್: ಟೀಮ್ ಇಂಡಿಯಾದ ಆಟಮಾರಕ ಅಸ್ತ್ರಹಾರ್ದಿಕ್ ಪಾಂಡ್ಯನ ಟಿ20

Related Posts

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
0

"ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025
ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

December 23, 2025
Next Post
ಚೆನ್ನೈ ಸೂಪರ್ ಕಿಂಗ್ಸ್ (CSK)

ಹಾರ್ದಿಕ್ ಪಾಂಡ್ಯನ ಬೌಲಿಂಗ್: ಟೀಮ್ ಇಂಡಿಯಾದ ಆಟಮಾರಕ ಅಸ್ತ್ರಹಾರ್ದಿಕ್ ಪಾಂಡ್ಯನ ಟಿ20

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada