ಬೆಂಗಳೂರು : ಗೃಹಜ್ಯೋತಿ ಯೋಜನೆ ಜಾರಿ ವಿಚಾರವಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 200 ಯುನಿಟ್ವರೆಗೂ ರಾಜ್ಯದ ಪ್ರತಿಯೊಂದು ಮನೆಗೂ ಉಚಿತ ವಿದ್ಯುತ್ ಸಿಗಲಿದೆ ಎಂದು ಪುನರುಚ್ಛಸಿದ್ರು.
ಸ್ವಂತ ಮನೆ ಮತ್ತು ಬಾಡಿಗೆ ಮನೆಯವರಿಗೂ ಉಚಿತ ವಿದ್ಯುತ್ ಸಿಗಲಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಆಧಾರ್ ಕಾರ್ಡ್ಗೆ ಆರ್ಆರ್ ನಂಬರ್ ಲಿಂಕ್ ಮಾಡಿಸಬೇಕು. ಬಾಡಿಗೆ ಮನೆಯಲ್ಲಿ ವಾಸಿಸುವವರು ಕರಾರು ಪತ್ರವನ್ನು ಹೊಂದಿರಬೇಕು. ಇಲ್ಲದೇ ಹೋದಲ್ಲಿ ಆಧಾರ್ ಲಿಂಕ್ ಹೊಂದುವುದು ಕಡ್ಡಾಯವಾಗಿದೆ. 200 ಯುನಿಟ್ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ ಗ್ರಾಹಕರು ಬಿಲ್ ಪಾವತಿ ಮಾಡಬೇಕಾಗುತ್ತದೆ ಎಂದು ಕೆಜೆ ಜಾರ್ಜ್ ಹೇಳಿದ್ರು.
ರಾಜ್ಯದಲ್ಲಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರ ಸಂಖ್ಯೆ 2 ಕೋಟಿ 14 ಲಕ್ಷ ಮಂದಿ ಇದ್ದಾರೆ. ಈ 200 ಯುನಿಟ್ ಉಚಿತ ವಿದ್ಯುತ್ ಪಡೆಯಲು ರಿಜಿಸ್ಟರ್ ಪ್ರಕ್ರಿಯೆ ಇರುತ್ತದೆ. ಸೇವಾ ಸಿಂಧು ಅಸ್ತಿತ್ವದಲ್ಲಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಉಚಿತ ವಿದ್ಯುತ್ಗೆ ಅಪ್ಲೈ ಮಾಡಬಹುದು ಎಂದು ಹೇಳಿದ್ರು.