ಗಣಿ ಧನಿ ಎಂದೇ ಖ್ಯಾತಿ ಪಡೆದಿದ್ದ ಖ್ಯಾತ ರಾಜಕಾರಣಿ ಜರ್ನಾಧನ ರೆಡ್ಡಿ ಪುತ್ರ ಕಿರೀಟಿ ಹಿರಿತೆರೆಗೆ ಅದ್ದೂರಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಪ್ರೊಡಕ್ಷನ್ಸ್ ಕಿರೀಟಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು ಮಾಯಾ ಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಲವ್ ಮತ್ತು ಫ್ಯಾಮಿಲಿ ಎಂಟರ್ಟೈನರ್ ಕಥಾಯೊಂದರ ಹೊಂದಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದ್ದು, ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ತಂತ್ರಜ್ಞರಾಗಿ ಕೆಲಸ ಮಾಡಿ ಅನುಭವ ಉಳ್ಳವರು ಈ ಚಿತ್ರದಲ್ಲು ತಮ್ಮ ಕೈಚಳಕ ತೋರಲು ಮುಂದಾಗಿದ್ದಾರೆ.

ಸಾಯಿ ಕೊರಪಾಠಿ ನಿರ್ಮಿಸಲಿರುವ ಈ ಚಿತ್ರಕ್ಕೆ ರಾಕ್ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಾಹುಬಲಿ ಚಿತ್ರದ ಕ್ಯಾಮರಾಮ್ಯಾನ್ ಸೆಂಥಿಲ್ ಕುಮಾರ್ ಛಾಯಗ್ರಹಣವನ್ನು ಮಾಡಲಿದ್ದಾರೆ, ಖ್ಯಾತ ಕಲಾ ನಿರ್ದೇಶಕ ರವೀಂದರ್ ಈ ಚಿತ್ರಕ್ಕೆ ಆರ್ಟ್ ಡೈರಕ್ಟೆರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೇನ್ಸ್ ಈ ಚಿತ್ರದ ಆಕ್ಷನ್ ಸೀಕ್ವೆನ್ಸ್ಗಳನ್ನು ನಿರ್ದೇಶಿಸಲಿದ್ದಾರೆ.
ಮಾರ್ಚ್ 4ರಂದು ಬೆಂಗಳೂರು ನಗರದ ತಾಜ್ ವೆಸ್ಟ್ ಎಂಡ್ನಲ್ಲಿ ಮೂಹೂರ್ತ ನಡೆಯಲಿದ್ದು, ಖ್ಯಾತ ನಿರ್ದೇಶಕ ರಾಜಮೌಳಿ, ಕ್ರೇಜಿ ಸ್ಟಾರ್ ವಿ.ರವಿಚಂದ್ರನ್, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳಲಿದ್ದಾರೆ.

ಅಪ್ಪು ಜೊತೆಗಿನ ನಂಟನ್ನು ನೆನಪಸಿಸಕೊಂಡ ಕಿರೀಟಿ
ಕನ್ನಡದ ನಟ ಪವರ್ಸ್ಟಾರ್ ನಮ್ಮನ್ನು ದೈಹಿಕವಾಗಿ ಅಗಲಿದ್ದರು ಮಾನಸಿಕವಾಗಿ ಯಾರ ಮನಸ್ಸಿನಿಂದಲೂ ದೂರವಾಗಿಲ್ಲ. ಅಪ್ಪು ಅಂದ್ರೆ ಅಪ್ಪುಗೆ, ಪ್ರೀತಿ, ಸ್ನೇಹ.. ಆತ್ಮೀಯತೆ.. ಸ್ಟಾರ್ ಅನ್ನುವ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಳಗೆ ಒಬ್ಬರಾಗಿ ಬರೆಯುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರೊಟ್ಟಿಗೆ ಒಡನಾಟ ಹೊಂದಿದ್ದವರು. ಅದೇ ರೀತಿ ಮಾಜಿ ಸಚಿವ ಜರ್ನಾಧನ ರೆಡ್ಡಿ ಕುಟುಂಬಕ್ಕು ಪುನೀತ್ ರಾಜಕುಮಾರ್ಗೂ ಅವಿನಾಭಾವ ಸಂಬಂದವಿತ್ತು. ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು..ಪ್ರೀತಿಯ ಹುಚ್ಚು. ಬಾಲ್ಯದಲ್ಲೊಮ್ಮೆ ಕಿರೀಟಿ ಅಪ್ಪು ಭೇಟಿಯಾದ ಕ್ಷಣ ಹಾಗೂ ಜಾಕಿ ರಿಲೀಸ್ ಸಂದರ್ಭದಲ್ಲಿ ಭೇಟಿಯಾದ ಎರಡು ಘಟನೆಗಳನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.
ಕಿರೀಟಿ ಹೀಗೆ ಅಪ್ಪು ಒಟ್ಟಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು, ತಮ್ಮ ಮುಂದಿನ ಸಿನಿಮಾ ಹಾದಿಗೆ ಜೊತೆಯಾಗಿ ಇರಬೇಕೆಂದು ಕೇಳಿಕೊಂಡಿದ್ದಾರೆ. ಅಪ್ಪು ಆರ್ಶೀವಾದದೊಂದಿಗೆ ಹೊಸ ಸಿನಿಮಾಗೆ ಕಿರೀಟಿ ಮುನ್ನುಡಿ ಬರೆಯುತ್ತಿದ್ದಾರೆ.