ಬೆಂಗಳೂರು: ನಂದಿನಿ ತುಪ್ಪ ಕಲಬೆರೆಕೆ ಪ್ರಕರಣದ ಕಿಂಗ್ ಪಿನ್ ಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ ಹಾಗೂ ರಮ್ಯಾ ಎಂಬ ದಂಪತಿಯೇ ಈ ಹಗರಣದ ಪ್ರಮುಖ ಆರೋಪಿಗಳು ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

ಇತ್ತಿಚೆಗೆ ನಕಲಿ ನಂದಿನಿ ತುಪ್ಪ ತಯಾರಿ ಘಟಕದ ಮೇಲೆ ಸಿಸಿಬಿ ಪೊಲೀಸರ ದಾಳಿ ನಡೆಸಿ ನಾಲ್ವರನ್ನ ಬಂಧಿಸಿ 1.26 ಕೋಟಿ ರೂ. ಮೌಲ್ಯದ ಕಲಬೆರೆಕೆ ತುಪ್ಪ ವಶಕ್ಕೆ ಪಡೆದಿದ್ದರು. ಬಳಿಕ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಆದರೆ ನಾಲ್ವರ ಬಂಧನದ ಬಳಿಕ ಶಿವಕುಮಾರ್ ಪರಾರಿಯಾಗಿದ್ದ. ಸಿಸಿಬಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಶಿವಕುಮಾರ್ ದಂಪತಿ ಬಂಧಿಸಿದ್ದಾರೆ.
ಇನ್ನು ಶಿವಕುಮಾರ್ ದಂಪತಿ ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕ ಹೊಂದಿದ್ದರು. ಸಿಸಿಬಿ ದಾಳಿ ವೇಳೆ ತುಪ್ಪ ತಯಾರಿಸುವ ದೊಡ್ಡ ಮಷಿನರಿಗಳು ಪತ್ತೆಯಾಗಿದ್ದು, ಹೈಟೆಕ್ ಮೆಷಿನರಿ ಬಳಸಿಕೊಂಡು ತುಪ್ಪ ತಯಾರಿಕೆ ಮಾಡುತ್ತಿದ್ದು ಬೆಳಕಿಗೆ ಬಂದಿದೆ.

ಸದ್ಯ ತುಪ್ಪ ತಯಾರಿಗೆ ಬಳಸುತ್ತಿದ್ದ ಮೆಷಿನರಿಗಳನ್ನ ಸಿಸಿಬಿ ಜಪ್ತಿ ಮಾಡಿದ್ದು, ಶಿವಕುಮಾರ್ ಹಾಗೂ ರಮ್ಯಾರನ್ನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ






