ಉಡುಪಿಯ ಹೆಬ್ರಿ ಬಳಿ ನಕ್ಸಲ್ ನಾಯಕನ ಎನ್ಕೌಂಟರ್ ಮಾಡಲಾಗಿದೆ. ನಕ್ಸಲ್ ನಿಗ್ರಹ ಪಡೆ (ANF) ಕಾರ್ಯಾಚರಣೆ ಮಾಡಿ ನಕ್ಸಲ್ ನಾಯಕ ವಿಕ್ರಂಗೌಡನ ಹತ್ಯೆ ಮಾಡಿದೆ. ವಿಕ್ರಂ ಗೌಡ ಹಾಗು ಸುಂದರಿ ತಂಡದ ಮೇಲೆ ಗುಂಡಿನ ದಾಳಿ ನಡೆದಿದೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ತುಣೆ ಬೈಲ್ ಬಳಿ ವಿಕ್ರಂಗೌಡ ಹತ್ಯೆಗೈದಿದೆ ANF ಟೀಂ. ಮಧ್ಯರಾತ್ರಿ 12 ಗಂಟೆ 15 ನಿಮಿಷಕ್ಕೆ ಎನ್ಕೌಂಟರ್ ಕಾರ್ಯಾಚರಣೆ ನಡೆದಿದೆ.ANF ಜಿತೇಂದ್ರ ಟೀಂ ಕೂಂಬಿಂಗ್ ಮಾಡುವಾಗ ನಕ್ಸಲರು ಎದುರಾಗಿದ್ದರು.ಈ ವೇಳೆ ಗುಂಡಿನ ಚಕಮಕಿ ನಡೆದಿದೆ.ಪೊಲೀಸರು ವಿಕ್ರಂಗೌಡನ ಹತ್ಯೆ ಮಾಡಿದ್ದಾರೆ.
ನಕ್ಸ;ಲ್ ನಾಯಕ ವಿಕ್ರಂ ಜೊತೆಗೆಗಿದ್ದ ಮೂವರು ನಕ್ಸಲರು ಎಸ್ಕೇಪ್ ಆಗಿದ್ದಾರೆ. ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ ಎಸ್ಕೇಪ್ ಆಗಿದ್ದು, ANF ಟೀಂ ವಿಕ್ರಂಗೌಡ ಜೊತೆಗಿದ್ದವರಿಗಾಗಿ ಶೋಧ ಮುಂದುವರಿಸಿದೆ. ಕಾರ್ಕಳ, ಹೆಬ್ರಿ ಸುತ್ತಮುತ್ತ ಕೆಲ ದಿನಗಳಿಂದ ನಕ್ಸಲರ ಓಡಾಟ ಪತ್ತೆಯಾಗಿತ್ತು.
ನಕ್ಸಲರು ಪತ್ತೆ ಹಿನ್ನೆಲೆ ಎಎನ್ಎಫ್ ಕೂಂಬಿಂಗ್ ಬಿಗಿಗೊಳಿಸಿತ್ತು. ನಿನ್ನೆ ಸಂಜೆ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ಆಹಾರ ಧಾನ್ಯ ಸಂಗ್ರಹಕ್ಕೆ ಬಂದಾಗ ಎಎನ್ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ದಾಳಿ-ಪ್ರತಿದಾಳಿ ನಡೆದಿದ್ದು, ದಾಳಿಗೆ ಸಿಲುಕಿ ವಿಕ್ರಂ ಗೌಡ ಬಲಿಯಾಗಿದ್ದಾನೆ ಎನ್ನಲಾಗಿದೆ. ಉಳಿದ ಮೂವರು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಕೊಪ್ಪ , ಕಡೆಗುಂಡಿ. ಜಯಪುರ ಅರಣ್ಯ ವ್ಯಾಪ್ತಿ ಸುತ್ತಮುತ್ತ ಎಎನ್ಎಫ್ ಹುಡುಕಾಟ ಮುಂದುವರಿದಿದೆ..