ಬಿಗ್‌ಬಾಸ್ ಕನ್ನಡ ಸೀಸನ್ 11 (Bigboss Kannada season 11) ಮುಕ್ತಾಯದ ಹಂತ ತಲುಪಿದೆ. ಬಿಗ್‌ಬಾಸ್ ಸೀಸನ್ 11 ಗೆ ಈ ಹಿಂದಿನ ಎಲ್ಲಾ ಸೀಸನ್ ಗಳಂತೆಯೇ ಆರಂಭದಿಂದಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಆದ್ರೆ ಇನ್ನೇನು ಫಿನಾಲೆ ಸಮೀಪಿಸಿರುವ ಸನಿಹದಲ್ಲೇ ಕಿಚ್ಚ ತಮ್ಮ ಅಭಿಮಾನಿಗಳಿಗೆ ಮತ್ತು ಬಿಗ್ ಬಾಸ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ಸುದೀಪ್ (Kichha sudeep) ಮುಂದಿನ ಸರಣಿಯ ಬಿಗ್ ಬಾಸ್ ಶೋ ಹೋಸ್ಟ್ ಮಾಡುವುದಿಲ್ಲ. 

ಕಿಚ್ಚ ಸುದೀಪ್ 10 ವರ್ಷಗಳನ್ನ ಸತತವಾಗಿ ಪೂರೈಸಿ ಬಿಗ್‌ಬಾಸ್ 11ಕ್ಕೂ ತಮ್ಮ ಅದ್ಭುತ ನಿರೂಪಣೆಯನ್ನು ಮುಂದುವರೆಸಿದ್ರು. ಈ ಬಾರಿ ಕಿಚ್ಚನ ಬದಲು ಬೇರೆಯವರು ಶೋ ಹೋಸ್ಟ್ ಮಾಡಲಿದ್ದಾರೆ ಎಂಬ ವದಂತಿಗಳತ್ತಾದ್ರೂ, ಅದೆಲ್ಲವೂ ಸುಳ್ಳಾಗಿತ್ತು. ಹೀಗಾಗಿ ಈ ಸೀಸನ್ ಗೆ ಕೊನೆ ಮಾಡಬೇಕು ಎಂಬ ಯೋಚನೆ ಕಿಚ್ಚನ ತಲೆಯಲ್ಲಿ ಬಂತಾ ? ಗೊತ್ತಿಲ್ಲ. ಬಟ್ ಈಗ ಖುದ್ದು ಕಿಚ್ಚ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.
ಈ ಮುಂದಿನ ಯಾವುದೇ ಬಿಗ್ ಬಾಸ್ ಸೀಸನ್ ಗಳನ್ನ (Bigboss season) ಕಿಚ್ಚ ಸುದೀಪ್ ನಿರೂಪಣೆ ಮಾಡಲ್ಲ. ಸ್ವತಃ ತಮ್ಮ ಎಕ್ಸ್ ಖಾತೆಯಲ್ಲಿ ಬಿಗ್‌ಬಾಸ್ 11ನೇ ಸೀಸನ್ ನನ್ನ ಕೊನೆಯ ಸೀಸನ್ ಆಗಿರುತ್ತೆ ಅಂತಾ ಅಂತ ಟ್ವಿಟ್ ಮಾಡಿದ್ದಾರೆ. ನನ್ನ ನಿರ್ಧಾರವನ್ನ ಚಾನಲ್ ಮತ್ತು ಇಷ್ಟು ವರ್ಷ ಬಿಗ್ ಬಾಸ್ ವೀಕ್ಷಿಸಿದ ಜನರು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕಳೆದ 11 ಸೀಸನ್‌ಗಳಿಂದ ನಾನು ಆನಂದಿಸಿದ್ದೇನೆ. ನೀವು ತೋರಿದ ಎಲ್ಲಾ ಪ್ರೀತಿಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಅಂತಿಮ ಪಂದ್ಯವು ಆತಿಥೇಯನಾಗಿ ನನ್ನ ಕೊನೆಯದು, ಮತ್ತು ನನ್ನಿಂದ ಸಾಧ್ಯವಷ್ಟು ನಿಮ್ಮೆಲ್ಲರನ್ನು ರಂಜಿಸಿದ್ದೇನೆ ಎಂದು ಭಾವಿಸುತ್ತೇನೆ.
ಇದೊಂದು ಅವಿಸ್ಮರಣೀಯ ಪಯಣ, ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿಯಾಗಿದೆ. ಧನ್ಯವಾದಗಳು, @ColorsKannada, ಈ ಅವಕಾಶಕ್ಕಾಗಿ. ಎಲ್ಲರಿಗೂ ತುಂಬಾ ಪ್ರೀತಿ ಮತ್ತು ಗೌರವ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
			
                                
                                
                                
