ಬಿಗ್ ಬಾಸ್ ಕನ್ನಡ ಸೀಸನ್ 11 ನ (Bigboss kannada 11) ಮೊದಲ ವೀಕೆಂಡ್ ಎಪಿಸೋಡ್ ಪ್ರಸವಾರವಾಗಿದ್ದು, ಬಿಗ್ ಮನೆಯಲ್ಲಿ ಮೊದಲ ವಾರ ಕಳೆದಿರುವ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ (Kichha sudeep) ನಯವಾವಾಗಿಯೇ ಕೆಲ ಬುದ್ದ ಮಾತುಗಳನ್ನ ಹೇಳಿದ್ದಾರೆ. ಆದ್ರೆ ಆ ಒಬ್ಬ ಸ್ಪರ್ಧಿಗೆ ಮಾತ್ರ ಕಿಚ್ಚ ಸರಿಯಾಗೇ ಕ್ಲಾಸ್ ತಗೊಂಡಿದ್ದಾರೆ.

ಹೌದು, ಬಿಗ್ ಬಾಸ್ ಮನೆಯ ಸ್ವರ್ಗದ ಟೀಮ್‌ನಲ್ಲಿರುವ ಲಾಯರ್ ಜಗದೀಶ್ ಗೆ (Lawyer jagadeesh) ಸರಿಯಾಗೇ ಕಿಚ್ಚ ಬೆಂಡೆತ್ತಿದ್ದಾರೆ. ಕಳೆದ ಎರಡು ಎಪಿಸೋಡ್‌ಗಳ ಹಿಂದೆ ಮನೆಯ ಇತರೆ ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದ ಜಗದೀಶ್, ಬಿಗ್ ಬಾಸ್ ಶೋ ಬಗ್ಗೆ ಹೀನಾಯವಾಗಿ ಮಾತನಾಡಿದ್ರು. ಇದೊಂದು ಕಿತ್ತೋದ ಶೋ, ಬಿಗ್ ಬಾಸ್ ನಡೆಸಲು ನಾನು ಬಿಡೋದೇಯಿಲ್ಲ ಎಂದೆಲ್ಲಾ ಹರಟಿದ್ರು.
ನಾನು ಮನಸ್ಸು ಮಾಡಿದ್ರೆ ಬಿಗ್ ಬಾಸ್‌ನೇ ಪರ್ಚೇಸ್ ಮಾಡ್ತೀನಿ ಅಂದಿದ್ರು. ಇದ್ರಿಂದ ಸಿಟ್ಟಿಗೆದ್ದ ಕಿಚ್ಚ, ಬಿಗ್ ಬಾಸ್ ಹೇಗೆ ನಡೆಸಬೇಕು ಎಂದು ನೀವು ನಮಗೆ ಹೇಳಿಕೊಡ್ತೀರಾ ಎಂದು ಕ್ಲಾಸ್ ತಗೊಂಡಿದ್ದಾಋಎ. ಬಿಗ್ ಬಾಸ್ ಶೋ ಯಾರಿಂದ ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿಯೇ 11ನೇ ಸೀಸನ್ ಭಾರೀ ಯಶಸ್ವಿಯಾಗಿ ನಡಿತಾಯಿದೆ ಎಂದ್ರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕಿಚ್ಚ, ಲಾಯರ್ ಜಗದೀಶ್ ಗೆ ನಿಮ್ಮ ಅಪ್ಪನ ಆಣೆಯಾಗೂ ಬಿಗ್ ಬಾಸ್ ನ ಯಾರೂ ಏನೂ ಮಾಡಲಿ ಸಾಧ್ಯವಿಲ್ಲ ಎಂದು ಖಡಕ್ ಆಗಿ ಬಿಸಿ ಮುಟ್ಟಿಸಿದ್ದಾರೆ. ಮೊದಲ ವಾರವೇ ಶೋ ಇಷ್ಟು ಕಾವೇರಿದ್ದು, ಪ್ರಕೇಕ್ಷಕರಿಗೆ ಒಳ್ಳೆ ಮನರಂಜನೆ ನೀಡಿದೆ.






