ಬಿಗ್ ಬಾಸ್ ಕನ್ನಡ ಸೀಸನ್ 12( Bigg Boss Kannada Season 12) ಹನ್ನೊಂದು ವಾರಗಳನ್ನು ಪೂರೈಸಿ 12ನೇ ವಾರಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಮುಂದಿನ ವಾರದ ಕ್ಯಾಪ್ಟನ್ ಆಗಿ ಈಗಾಗಲೇ ಕಾವ್ಯ(Kavya) ಆಯ್ಕೆ ಆಗಿದ್ದು, ಫೇಕ್ ಎಲಿಮಿನೇಷನ್ ಮೂಲಕ ಸಿಕ್ರೇಟ್ ರೂಮ್ ಸೇರಿರುವ ರಕ್ಷಿತಾ ಶೆಟ್ಟಿ(Rakshitha Shetty) ಹಾಗೂ ಧುವಂತ್(Druvanth) ಈ ವಾರ ಬಿಗ್ ಬಾಸ್ ಮನೆಗೆ ವಾಪಸ್ ಆಗಲಿದ್ದಾರೆ.

ಈ ವಾರ ಟಾಸ್ಕ್ಗಳಲ್ಲಿ ಒಂದಿಷ್ಟು ತಪ್ಪಾಗಿದ್ದು, ಈ ಬಗ್ಗೆ ಇಂದಿನ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಯಾಗಲಿದೆ. ಈಗಾಗಲೇ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಕೆಲವೊಂದು ತುಣುಕುಗಳನ್ನು ತೋರಿಸಲಾಗಿದೆ.

ಈ ವಾರ ಮನೆಯ ಕ್ಯಾಪ್ಟನ್ ಆದ ರಾಶಿಕಾ ಟಾಸ್ಕ್ ವೇಳೆ ಕೆಲ ತಪ್ಪುಗಳನ್ನು ಮಾಡಿದ್ದು, ಈ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು ಈ ವಾರ ಟಾಸ್ಕ್ನಲ್ಲಿ ಯಾರೂ ಸರಿ ಇರಲಿಲ್ಲ, ಅದಕ್ಕಿಂತ ಉಸ್ತುವಾರಿ ಸರಿನೇ ಇರಲಿಲ್ಲ ಎಂದಿದ್ದಾರೆ. ಈ ವೇಳೆ ರಜತ್ ಮಾತನಾಡಿದ್ದು, ಸಂಪೂರ್ಣ ಟಾಸ್ಕ್ ಹಾಳಾಗಲು ಚೈತ್ರಾ ಕಾರಣ ಎಂದಿದ್ದಾರೆ. ಈ ವೇಳೆ ಸುದೀಪ್ ಸ್ಪರ್ಧಿಗಳು ಮಕ್ಕಳಿಗಿಂತಲೂ ಕಡೆಯಾಗಿ ವರ್ತಿಸಿದ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಈ ವಾರ ವೋಟಿಂಗ್ ಲೈನ್ ತೆರೆಯದ ಕಾರಣ ವೈಲ್ಡ್ ಕಾರ್ಡ್ ಸ್ಪರ್ಧಿಗಳಂತೆ ಎಂಟ್ರಿ ಕೊಟ್ಟ ರಜತ್ ಹಾಗೂ ಚೈತ್ರಾ ಕುಂದಾಪುರ ಮನೆಯಿಂದ ಹೊರಗೆ ಹೋಗಲಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.




