
ದೇವನಹಳ್ಳಿ ರೈತರ ಐತಿಹಾಸಿಕ ಹೋರಾಟಕ್ಕೆ ಗೆಲುವು ತಂದುಕೊಟ್ಟಿದ್ದು, ಹೋರಾಟದ ಫಲವಾಗಿ ಚನ್ನರಾಯಪಟ್ಟಣದ ಹೋಬಳಿಯ 13 ಹಳ್ಳಿಗಳ ಭೂಸ್ವಾಧೀನವನ್ನು ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿ ತಿಂಗಳು ಕಳೆಯುವಷ್ಟರಲ್ಲಿ ಅಘಾತಕಾರಿ ವಿದ್ಯಮಾನವೊಂದು ನಡೆದಿದೆ.

ಭೂಸ್ವಾಧೀನ ಕೈಬಿಡುವ ನಿರ್ಣಯ ಘೋಷಿಸಿದ್ದ 2 ಹಳ್ಳಿಗಳ (ಹ್ಯಾಡಾಳ ಮತ್ತು ಗೋಕರೆಬಚ್ಚೇನಹಳ್ಳಿ) 439 ಎಕರೆಯನ್ನು ಸ್ವಾಧೀನಪಡಿಸಿಕೊಂಡಿದ್ದು, ಬೆಲೆ ನಿಗದಿಮಾಡಲು ಸೆಪ್ಟೆಂಬರ್ 6 ರಂದು ಸಭೆಗೆ ಬನ್ನಿ ಎಂದು KIADB ಈ ಎರಡು ಹಳ್ಳಿಯ ರೈತರಿಗೆ ನೋಟೀಸ್ ನೀಡಿದೆ.

ಇದೂ ನಿಜವಾಗಲೂ ಆಘಾತಕಾರಿ ಸುದ್ದಿಯಾಗಿದ್ದು ಈ ಕುರಿತು ಸ್ಪಷ್ಟನೆ ಕೇಳಲು KIADB ಕಛೇರಿ ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ಹೋಗಲು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಬಯಸುತ್ತಿದ್ದು, ಸೋಮವಾರ ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ KIADB ಕಛೇರಿ ಬಳಿ ಸೇರಿಕೊಳ್ಳಲಿದ್ದೇವೆ.












