ವಿಧಾನಸಭಾ ಅಧಿವೇಶನದ ಕೊನೆಯ ದಿನವಾದ ಗುರುವಾರ ವಿಧಾನಪರಿಷತ್ನಲ್ಲಿ ಭಾರೀ ಜಟಾಪಟಿ ನಡೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಶಬ್ಧಗಳನ್ನು ಬಳಸಿದ್ರು ಅನ್ನೋ ಕಾರಣಕ್ಕೆ ಭಾರೀ ಹೈಡ್ರಾಮಾವೇ ನಡೆದಿತ್ತು. ಆ ಬಳಿಕ ಹಿರೇಬಾಗೇವಾಡಿ ಠಾಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ದೂರು ದಾಖಲಿಸಿದ ಬಳಿಕ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಅರೆಸ್ಟ್ ಮಾಡಲಾಯ್ತು. ನಂತರ ಸಿ.ಟಿ ರವಿ ಅವರನ್ನು ನಂದಗಢ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಯ್ತು. ಈ ನಡುವೆ .
ಪೊಲೀಸ್ ಠಾಣೆಯಲ್ಲಿ ವಕೀಲರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನಿರಾಕರಿಸಿ, ಗೇಟ್ ಹೊರಗೆ ನಿಲ್ಲಿಸಿದ್ದರು. ಆ ವೇಳೆ ಸುಪ್ರೀಂಕೋರ್ಟ್ ಗೈಡ್ಲೈನ್ಸ್ ಇದೆ, ಯಾವುದೇ ಆರೋಪಿ ತನಗನ ವಕೀಲರನ್ನು ಭೇಟಿ ಮಾಡಬಹುದು. ಆದರೆ ಪೊಲೀಸರು ಕಾನೂನು ಉಲ್ಲಂಘನೆ ಮಾಡ್ತಿದ್ದಾರೆ ಎಂದು ಸಿ.ಟಿ ರವಿ ಪರ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಟಿ ರವಿ ಪರ ವಕೀಲ ಚೇತನ್ ಮನೇರ್ಕರ್, ಸಿಟಿ ರವಿ ಪರ ವಕಾಲತ್ತು ವಹಿಸಲು ನಾನು ಬಂದಿದ್ದೇನೆ, ಪೊಲೀಸರು ನಮ್ಮನ್ನ ಒಳಗೆ ಬಿಡ್ತಿಲ್ಲ, ಈ ಮೂಲಕ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಮಾಡ್ತಿದ್ದಾರೆ ಎಂದಿದ್ದಾರೆ.
ಯಾವುದೇ ಪ್ರಕರಣ ಇದ್ದರೂ ಆರೋಪಿಗಳನ್ನ ವಕೀಲರು ಭೇಟಿ ಮಾಡಬಹುದು. ಪೊಲೀಸರು ಮಾನವ ಹಕ್ಕು ಉಲ್ಲಂಘನೆ ಮಾಡ್ತಿದ್ದಾರೆ ಎಂದಿದ್ದಾರೆ. ರಾಜ್ಯದ ಮಾಜಿ ಸಚಿವರಾಗಿದ್ದ ಸಿ.ಟಿ ರವಿ ಅರೆಸ್ಟ್ ಆಗಿರುವ ಸುದ್ದಿ ಕೇಳಿ ನಾವು ವಕಾಲತ್ತು ವಹಿಸಲು ಬಂದಿದ್ದೇವೆ. ಸಿ.ಟಿ ರವಿ ಭೇಟಿಗೆ ಅವಕಾಶ ಕೊಟ್ಟಿಲ್ಲ. ಅರ್ನಿಶ್ ಕುಮಾರ್ ಮತ್ತು ಸ್ಟೇಟ್ ಆಫ್ ಬಿಹಾರ್ ಕೇಸ್ ಉಲ್ಲೇಖ ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಆದೇಶ ಪ್ರಸ್ತಾಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ವಕೀಲ ಚೇತನ್.
ಸುಪ್ರೀಂಕೋರ್ಟ್ ಆದೇಶವನ್ನು ಪೊಲೀಸರ ಗಮನಕ್ಕೆ ತಂದರೂ ಬಿಡ್ತಿಲ್ಲ, ಯಾವುದೇ ಆರೋಪಿಗೆ ಕಾನೂನು ನೆರವು ಸಿಗಬೇಕು ಎನ್ನಲಾಗಿದೆ. ಪೋಲೀಸರು ನಮ್ಮನ್ನು ಬಿಡ್ತಿಲ್ಲ, ನಾವು ಬಂದು ಅರ್ಧಗಂಟೆಯಾಗಿದೆ. ಇನ್ಸ್ಪೆಕ್ಟರ್ ಜನರಲ್ಗೆ ನಾನು ಹೇಳ್ತೇನೆ, ಪೊಲೀಸರು ಯಾರ ಒತ್ತಡಕ್ಕೆ ಹೀಗೆ ಮಾಡ್ತಿದ್ದಾರೆ ಗೊತ್ತಿಲ್ಲ. ಪ್ರತಿಯೋಬ್ಬ ಆರೋಪಿಯೂ ವಕೀಲರ ನೆರವು ಪಡೆಯಬಹುದು. ಇದು ಮೂಲಭೂತ ಹಕ್ಕಿನ ಧಕ್ಕೆಯಾದಂತೆ ಆಗ್ತಿದೆ ಎಂದು ವಕೀಲ ಜಿಎಂ ದೇಸಾಯಿ ಹೇಳಿದ್ದಾರೆ. ಪೊಲೀಸರ ವಿರುದ್ಧ ನಾವು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡ್ತೇವೆ ಅಂತಾನು ತಿಳಿಸಿದ್ದಾರೆ.